2018 ಚುನಾವಣೆ - ಕಾಂಗ್ರೆಸ್ ಜಯಭೇರಿ, ಬಿಜೆಪಿ ಎರಡನೇ ಸ್ಥಾನ, ಉಪೇಂದ್ರ ಬರೀ ಸೊನ್ನೆ???

og:image


ಜುಲೈ 19 ಮತ್ತು ಆಗಸ್ಟ್ 10, 2017 ರ ನಡುವೆ ಕರ್ನಾಟಕದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು. ಒಟ್ಟಾರೆಯಾಗಿ, 165 ಅಸೆಂಬ್ಲಿ ಕ್ಷೇತ್ರಗಳಿಂದ 24,679 ಮತದಾರರನ್ನು ಸಂದರ್ಶಿಸಲಾಯಿತು. ವಿಭಿನ್ನ ಜಾತಿಗಳು ಮತ್ತು ಸಮುದಾಯಗಳು ಅವುಗಳ ನಿಜವಾದ ಪ್ರಮಾಣದಲ್ಲಿ ಮಾದರಿಯಲ್ಲಿ ಪ್ರತಿನಿಧಿಸಲ್ಪಟ್ಟಿವೆಯೆ ಎಂದು ಖಚಿತಪಡಿಸಿಕೊಳ್ಳಲು ಕಾಳಜಿ ತೆಗೆದುಕೊಳ್ಳಲಾಗಿದೆ ಎಂದು ಸಿ ಫೋರ್ ಮಾಧ್ಯಮಗಳಿಗೆ ಹೇಳಿದರು.

ಒಟ್ಟು 225 ಮತಗಳಲ್ಲಿ ಕಾಂಗ್ರೆಸ್ 120-132 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಬಿಜೆಪಿಯು ಕನಿಷ್ಠ ಪಕ್ಷ 60-72 ಸ್ಥಾನಗಳನ್ನು ಗೆಲ್ಲುತ್ತದೆ. ನಿರೀಕ್ಷಿಸಿದಂತೆ JD (S), 24-30 ಸ್ಥಾನಗಳೊಂದಿಗೆ ಮೂರನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬಹುದು.
ಆದರೆ ಉಪೇಂದ್ರರವರ ಹೊಸ ಪಕ್ಷದ ಬಗ್ಗೆ ಎಲ್ಲೂ ಉಲ್ಲೇಖ ಮಾಡಲಾಗಿಲ್ಲ. ಆದರಿಂದ ಈ ಸಮೀಕ್ಷೆಯ ಪ್ರಕಾರ ಫಲಿತಾಂಶ ಬರೋದು ಸಂಶಯ. ಆದರೆ ಇಂದಿರಾ ಕ್ಯಾಂಟೀನ್ ಮತ್ತು ಪ್ರತ್ಯೇಕ ಧರ್ಮ ಮುಂತಾದ ಸೆಂಟಿಮೆಂಟಲ್ ವಿಷಯಗಳಿಂದ ಈಗಾಗಲೇ ಕಾಂಗ್ರೆಸ್ ಜನರಲ್ಲಿ ಜನಪ್ರಿಯರಾಗಿದ್ದು, ಸಹಜವಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ ಪಡೆಯುವುದು ಖಚಿತವಾಗಿದೆ. ಇನ್ನು ಉಪೇಂದ್ರರವರ ಪಕ್ಷದಿಂದ ಕಾಂಗ್ರೆಸ್ ಗಿಂತ ಬಿ.ಜೆ.ಪಿಗೆ ನಷ್ಟವಾಗ ಬಹುದು ಎಂದು ಚುನಾವಣಾ ಪಂಡಿತರು ಮಾತನಾಡುತ್ತಿದ್ದಾರೆ.

ಇದನ್ನೂ ಓದಿ -ಉಪೇಂದ್ರ ಖಾಕಿತೊಟ್ಟು "ಪ್ರಜಾಕಾರಣ" - ನೀವೂ ಸೇರಬೇಕೆ - ಇಲ್ಲಿದೆ ವಿಧಾನ

ಉಪೇಂದ್ರರವರು ಅಧಿಕ್ರತವಾಗಿ ಪಕ್ಷವನ್ನು ಲಾಂಚ್ ಮಾಡಿದ ನಂತರ, ಅದರ ಇಂಪಾಕ್ಟ್ ಜನರ ಮೇಲೆ ಹೇಗಿದೆ ಎಂಬುದರ ಮೇಲೆ ಚುನಾವಣ ಫಲಿತಾಂಶ ನಿಲ್ಲಲಿದೆ. ಯಾಕೆಂದರೆ, ನಾವು ಉಪೇಂದ್ರರ ಪಕ್ಷವನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ತಿರಸ್ಕಾರ ಮಾಡುವ ಆಗಿಲ್ಲ, ನಮ್ಮ ಮುಂದೆ ದೆಹಲಿಯಲ್ಲಿ ಮೋದಿ ಅಲೆಯ ನಡುವೆಯೂ ಗೆದ್ದ ಕೇಜ್ರಿವಾಲರಂತಹ ಉದಾಹರಣೆಗಳಿವೆ.

ಇದನ್ನೂ ಓದಿ"ರಾಜಕೀಯಕ್ಕೆ ದುಡ್ಡು ಹಾಕಲ್ಲ, ದುಡ್ಡು ತೆಗೆಯೊಲ್ಲ" - ಉಪೇಂದ್ರ 'ಪ್ರಜಾಕೀಯ' ಹೊಸಪಕ್ಷ ಸ್ಥಾಪನೆ

ಉಪೇಂದ್ರರವರು ಸರಿಯಾಗಿ ಪಕ್ಷವನ್ನು ಕಟ್ಟಿ, ಸೀರಿಯಸ್ ಆಗಿ ಜನರಿಗಾಗಿ ಕೆಲಸ ಮಾಡಿದರೆ, ಕರ್ನಾಟಕದ ಚುನಾವಣಾ ಫಲಿತಾಂಶ ಬುಡಮೇಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾವುದಕ್ಕೂ ನಾಗರಿಕರು ಕಾದು ನೋಡಬೇಕಿದೆ.

ಇದನ್ನೂ ಓದಿ - ಐಟಿ ರೈಡ್ ವಿಡಿಯೋ ಶೂಟ್ ಮಾಡಿ ಜನರಿಗೆ ತೋರಿಸಿ ಎಂದ ಉಪೇಂದ್ರ

English Summary: C voter predicts Congress will be winner in next election and BJP will loose.

NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post