ನೀವೂ "ಕಿರಿಕ್ ಪಾರ್ಟಿ" ನಿರ್ದೇಶಕ ರಿಷಬ್ ಚಿತ್ರದಲ್ಲಿ ನಟಿಸಬೇಕೆ? - ಇಲ್ಲಿದೆ ಸುವರ್ಣಾವಕಾಶ

Unknown
og:image
ಮಂಗಳೂರು: "ಕಿರಿಕ್ ಪಾರ್ಟಿ" ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ, ರಿಷಬ್ ಇನ್ನೊಮ್ಮೆ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ - ಕಾಸರಗೋಡು" ಹೆಸರಿನ ಈ ಚಿತ್ರ ಕಾಸರಗೋಡು ಸುತ್ತ ಮುತ್ತ ಚಿತ್ರೀಕರಣಗೊಳ್ಳಲಿದೆ.


ರಿಷಬ್ ಶೆಟ್ಟಿ ತನ್ನ ಹೊಸ ಚಿತ್ರ ಸ.ಹಿ.ಪ್ರಾ.ಶಾ.ಕಾ ಗೆ ಹೊಸ ಮುಖಗಳ ಹುಡುಕಾಟದಲ್ಲಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದಲ್ಲಿ ಬಹುತೇಕ ಹೊಸಮುಖಗಳಿಗೆ ಅವಕಾಶನೀಡಿ, ಯಶಸ್ಸು ಕಂಡ ರಿಷಬ್ ಈ ಚಿತ್ರದಲ್ಲು ಅದೇ ಪರಂಪರೆ ಮುಂದುವರಿಸಲಿದ್ದಾರೆ.


ಚಿತ್ರದ ಚಿತ್ರೀಕರಣ ಕಾಸರಗೋಡಿನ ಸುತ್ತಮುತ್ತ ನಡೆಯಲಿರುವುದರಿಂದ, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ. ರಿಷಬ್ ಕಿರಿಕ್ ಮೂಲಕ ಈಗಾಗಲೇ ತಾವೊಬ್ಬ ಸ್ಟಾರ್ ಡೈರೆಕ್ಟರ್ ಎಂದು ನಿರೂಪಿಸಿದ್ದಾರೆ, ಆದರಿಂದ ಅವರ ಚಿತ್ರದಲ್ಲಿ ನಟಿಸುವ ಅವಕಾಶಕ್ಕಾಗಿ ಕಾಸರಗೋಡಿಗೆ ಸ್ವಲ್ಪ ದಿನದ ಮಟ್ಟಿಗೆ ಶಿಪ್ಫ್ ಆದರೂ ಪರವಾಗಿಲ್ಲ ಎಂದು ಆಲೋಚಿಸಿದರೆ, ಈ ಕೆಳಗೆ ನಮೂದಿಸಿರುವ ದಿನಾಂಕದಂದು ಕಾಸರಗೋಡಲ್ಲಿ ನಡೆಯುವ ಆಡಿಸನ್ನಲ್ಲಿ ಭಾಗವಹಿಸಬಹುದು.

ಸ್ಥಳ: ಶ್ರೀ ಗೋಪಾಲಕ್ರಷ್ಣ ಪ್ರೌಢ ಶಾಲೆ, ಕೂಡ್ಲು, ಕಾಸರಗೋಡು
ದಿನಾಂಕ: 13 ಆಗಸ್ಟ್ 2017
ಸಮಯ: ಬೆಳಿಗ್ಗೆ 9:00 ರಿಂದ ಸಂಜೆ 6:00

#buttons=(Accept !) #days=(20)

Our website uses cookies to enhance your experience. Learn More
Accept !