"ಕಿರಿಕ್ ಪಾರ್ಟಿ" ಪುಷ್ಕರ್ ನಿರ್ಮಾಣದ ಹೊಸ ಚಿತ್ರದ ಹೆಸರೇನು ಗೊತ್ತಾ????

og:image

ಕಿರಿಕ್ ಪಾರ್ಟಿ ಚಿತ್ರದ ನಿರ್ಮಾಪಕರಾದ ಪುಷ್ಕರ್ ನಿರ್ಮಾಣಮಾಡಲಿರುವ ಹೊಸ ಚಿತ್ರದ ಹೆಸರನ್ನು ನಿನ್ನೆ ಅನಾವರಣಗೊಳಿಸಲಾಯಿತು. ಕಾರ್ತಿಕ್ ಸಾರಗುರ್ ನಿರ್ದೇಶನ ಮಾಡಲಿರುವ "ಭೀಮಸೇನ ನಳಮಹರಾಜ" ಚಿತ್ರದಲ್ಲಿ ಅರವಿಂದ್ ಐಯರ್, ಆರೊಹಿ ನಾರಾಯಣ್ ಮತ್ತು ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಈ ಚಿತ್ರವನ್ನು ಪುಷ್ಕರ್ ಜೊತೆಗೆ ರಕ್ಶಿತ್ ಶೆಟ್ಟಿಯವರ "ಪರವಃ" ಸಂಸ್ಥೆ ಮತ್ತು "ಲಾಸ್ಟ್ ಆಂಡ್ ಫೌಂಡ್" ಸಂಸ್ಥೆಗಳು ಜಂಟಿಯಾಗಿ ನಿರ್ಮಾಣಮಾಡಲಿದೆ.

ಅನಂತ್ ನಾಗ್ ಅಭಿನಯದ "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಚಿತ್ರವನ್ನು ನಿರ್ಮಾಣ ಮಾಡಿ ಕನ್ನಡ ಚಿತ್ರರಂಗದಲ್ಲಿ ಭದ್ರ ನೆಲೆಕಂಡುಕೊಂಡ ಪುಷ್ಕರ್, ಕಿರಿಕ್ ಪಾರ್ಟಿ ಚಿತ್ರಕ್ಕೂ ಬಂಡವಾಳ ಹೂಡಿ ನಿರ್ಮಾಪಕರಾಗಿದ್ದರು. "ಜೀರಿಂಬೆ" ಚಿತ್ರ ಬಿಡುಗಡೆಗೆ ಸಿಧ್ಧವಾಗಿದ್ದು, ಇನ್ನೂ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡುವ ಅಲೋಚನೆಯಲ್ಲಿದ್ದಾರೆ.

ಚಿತ್ರಕ್ಕೆ ಚರನ್ ರಾಜ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ರವೀಂದ್ರನಾಥ್ ಛಾಯಾಗ್ರಹಣ ಇರುವ ಭೀಮಸೇನ ಚಿತ್ರವು ಚಿತ್ರರಸಿಕರಿಗೆ ನಳಪಾಕ ಬಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
Previous Post Next Post