ಪಹ್ಲಾಜ್ ನಿಹಾಲಾನಿಯನ್ನು ಸೆನ್ಸಾರ್ ಮಂಡಳಿಯಿಂದ ಕಿತ್ತು ಹಾಕಿದ ಕೇಂದ್ರ ಸರ್ಕಾರ

og:image
ಹೊಸದಿಲ್ಲಿ: ಪಹ್ಲಾಜ್ ನಿಹಾಲಾನಿ ಅವರನ್ನು ಸೆನ್ಸಾರ್ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿದ ಕೇಂದ್ರ ಸರ್ಕಾರ ಅವರ ಬದಲಿಗೆ ಕವಿ ಪ್ರಾಸುನ್ ಜೋಷಿ ಅವರನ್ನು ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿ ನೇಮಿಸಿದೆ.

ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದ ತನಕ ಜೋಶಿಗೆ ಸೆನ್ಸಾರ್ ಮಂಡಳಿಯ ಅಧಿಕಾರ ನೀಡಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ. 2015 ರ ಜನವರಿಯಲ್ಲಿ 23 ಸದಸ್ಯರ ಮಂಡಳಿಯ ಮುಖ್ಯಸ್ಥರಾಗಿ ನೇಮಕಗೊಂಡ ಬಳಿಕ ನಿಹಾಲಾನಿ ಅವರು ಹಲವಾರು ವಿವಾದಗಳಲ್ಲಿ ಸಿಲುಕಿಕೊಂಡಿದ್ದರು. ಒಂದು ಕಡೆ ಅವರು ತಮ್ಮ ಅತೀ ಮಡಿವಂತಿಕೆಯ ದೃಷ್ಟಿಕೋನಗಳಿಂದಾಗಿ "ಸಂಸ್ಕಾರಿ ಸೆನ್ಸಾರ್ ಬೋರ್ಡ್" ಎಂದು ಹೀಯಾಳಿಸಿಕೊಂಡಿದ್ದರೆ ಇನ್ನೊಂದೆಡೆ ಪ್ರಧಾನಿ ಮೋದಿ ಅವರ "ಆಕ್ಷನ್ ನಾಯಕ" ಎಂದು ಕರೆದೊಯ್ಯುವ ಮೂಲಕ ಬಿಜೆಪಿ ಕಡೆಗಿನ ತನ್ನ ಒಲವನ್ನು ತೋರ್ಪಡಿಸಿದ್ದರು.

ಕಳೆದ ತಿಂಗಳು, ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಬಹುದೆಂದು ನಿಹಾಲಾನಿ ತಿಳಿಸಿದ್ದಾರೆ ಎಂದು ವರದಿ ಮಾಡಿದೆ. ಏತನ್ಮಧ್ಯೆ, ಸೆನ್ಸಾರ್ ಮಂಡಳಿಯ ಸದಸ್ಯರಾಗಿ ನೇಮಕಗೊಂಡ ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರು ಭಾರತದಲ್ಲಿ ಬಿಡುಗಡೆಗೊಳ್ಳುವ ಮೊದಲು ಎಲ್ಲಾ ಚಲನಚಿತ್ರಗಳನ್ನು ಸೆನ್ಸಾರ್ ಮಾಡುವ ವಿಭಾಗದಲ್ಲಿ ರಚನಾತ್ಮಕ ಬದಲಾವಣೆಗಳ ಬಗ್ಗೆ ದೆಹಲಿ ಮೂಲದ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಸಚಿವ ಸ್ಮೃತಿ ಇರಾನಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ಸಿ) ಹೊಸ ದೃಷ್ಟಿಕೋನದಿಂದ ನೋಡುತ್ತಿದ್ದಾರೆ ಎಂದು ಅಗ್ನಿಹೋತ್ರಿ ಹೇಳಿದರು.

Tags : Pahlaj Nihlani, Sacked, New, Censor, India, Modi
Previous Post Next Post