ರಕ್ಷಿತ್ ಶೆಟ್ಟಿ ನಿರ್ಮಾಣದ ಮುಂದಿನ ಚಿತ್ರದ ನಾಯಕ ದಿಗಂತ್
ಬೆಂಗಳೂರುಃ ಗಾಳಿಪಟ, ಮನಸಾರೆ, ಪಂಚರಂಗಿ ಚಿತ್ರಗಳ ಮೂಲಕ ಯುವಕರ ಮನಸೆಳೆದಿದ್ದ, ಯುವತಿಯವ ನಿದ್ದೆ ಕದ್ದಿದ್ದ ಕನ್ನಡದ ಗುಳಿಕೆನ್ನೆಯ ನಾಯಕ ದಿಂಗತ್ ಹೊಸ ಚಿತ್ರ ಒಂದರಲ್ಲಿ ನಾಯಕರಾಗಿದ್ದಾರೆ.…
By Admin
ಬೆಂಗಳೂರುಃ ಗಾಳಿಪಟ, ಮನಸಾರೆ, ಪಂಚರಂಗಿ ಚಿತ್ರಗಳ ಮೂಲಕ ಯುವಕರ ಮನಸೆಳೆದಿದ್ದ, ಯುವತಿಯವ ನಿದ್ದೆ ಕದ್ದಿದ್ದ ಕನ್ನಡದ ಗುಳಿಕೆನ್ನೆಯ ನಾಯಕ ದಿಂಗತ್ ಹೊಸ ಚಿತ್ರ ಒಂದರಲ್ಲಿ ನಾಯಕರಾಗಿದ್ದಾರೆ. ಆದರೆ ಈ ಚಿತ್ರದ ವಿಶೇಷ ಏನೆಂದರೆ, ಚಿತ್ರದ ನಿರ್ಮಾಪಕ "ಕಿರಿಕ್ ಪಾರ್ಟಿ" ನಾಯಕ ರಕ್ಷಿತ್ ಶೆಟ್ಟಿ.
ಚಿತ್ರವನ್ನು ರಕ್ಷಿತ್ ಶೆಟ್ಟಿ ಜೊತೆ ಪುಷ್ಕರ್ ಮಲ್ಲಿಕಾರ್ಜುನ ಕೂಡಾ ಸೇರಿ ನಿರ್ಮಾಣಮಾಡುತ್ತಿದ್ದಾರೆ. "ಉಳಿದವರು ಕಂಡಂತೆ" ಚಿತ್ರದಲ್ಲಿ ಬರಹಗಾರರಾಗಿ ಚಿತ್ರರಂಗಕ್ಕೆ ಪಾದಾರ್ಪಣೆಗೊಂಡ ಸೆನ್ನಾ ಹೆಗಡೆ ಈ ಚಿತ್ರದ ನಿರ್ದೇಶಕರು.
ನಿರ್ಮಾಪಕರಲೊಬ್ಬರಾದ ಪುಷ್ಕರ್ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಈ ಸುಧ್ಧಿ ಶೇರ್ ಮಾಡಿದ್ದು, ತಾವು ದಿಗಂತ್ ಅಭಿಮಾನಿಯಾಗಿದ್ದು, ಅವರ ಚಿತ್ರ ನಿರ್ಮಾಣ ಮಾಡಲು ತುಂಬಾ ಥ್ರಿಲ್ಲ್ ಆಗಿದೆ ಎಂದಿದ್ದಾರೆ.
Tags: Digant, Kannada New Movie, Rakshith Shetty, Pushkar Mallikarjuna, Latest Movie