ಐಜಿಪಿ ಮನೆಯಿಂದಲೇ ಬೇರು ಸಹಿತ ಗಂಧದ ಮರ ಕಳವು - ಮಂಗಳೂರಲ್ಲಿ ಘಟನೆ

og:image
ಮಂಗಳೂರು, ಆಗಸ್ಟ್ 21: ಕಳ್ಳರು ಮತ್ತು ಸಮಾಜ ವಿರೋಧಿ ಅಂಶಗಳಿಂದ ರಕ್ಷಿಸಲು ರಾಜ್ಯದ ಪೊಲೀಸ್ ಪಡೆ ಸಾಮರ್ಥ್ಯವಾಗಿದೆ ಎಂದು ನಂಬಿದ್ದ ರಾಜ್ಯದ ಜನರಿಗೆ, ಅದರಲ್ಲೂ ಕರಾವಳಿ ಜನರಿಗೆ ಭರ್ಜರಿ ಶಾಕ್ ನೀಡಿದೆ. ಸಂಪೂರ್ಣ ಬೆಳೆದ ಶ್ರೀಗಂಧದ ಮರವನ್ನು ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ (ಐಜಿಪಿ) ಬಂಗಲೆಯಿಂದ ಹಾಡುಹಗಲೇ ಕಳವು ಮಾಡಲಾಗಿದೆ.

ಇದೊಂದು ಪೊಲೀಸ್ ಇತಿಹಾಸದಲ್ಲೆ ಕಪ್ಪು ಚುಕ್ಕೆಯಾಗಿದ್ದು, ಕಳ್ಳರು ಈ ಕಳ್ಳತನವನ್ನು ನಾಲ್ಕು ಜಿಲ್ಲೆಗಳ ಮುಖ್ಯಸ್ಥರಾಗಿರುವ ಪೋಲಿಸ್ ಅಧಿಕಾರಿಗೆ ಸೇರಿದ ಬಂಗಲೆಯಿಂದ ಹಗಲು ಬೆಳಕಿನಲ್ಲಿ ಕಾರ್ಯಗತಗೊಳಿಸಿದ್ದಾರೆ.

ಪ್ರಸ್ತುತ ಐಜಿಪಿ, ಹೇಮಂತ್ ನಿಂಬಾಲ್ಕರ್ ಆಕ್ರಮಿಸಿಕೊಂಡಿರುವ ಬಂಗಲೆ, ಮಂಗಳೂರು ಸಮೀಪ ಹೆಲಿಪ್ಯಾಡ್ ಬಳಿ ಮೇರಿಹಿಲ್ನಲ್ಲಿದೆ, ಇದು ನಗರದ ಕೇಂದ್ರದಿಂದ ಸುಮಾರು ಐದು ಕಿ.ಮೀ ದೂರದಲ್ಲಿದೆ. ಮಾಹಿತಿ ಪ್ರಕಾರ, ಶ್ರೀಗಂಧದ ಮರವು ನಾಲ್ಕು ದಿನಗಳ ಹಿಂದೆ ಐಜಿಪಿಯ ಮನೆಯ ಕೌಪಂಡ್ ಒಳಗೆ ಇಂದ ಕಣ್ಮರೆಯಾಗಿದೆ. ಬೇರುಗಳನ್ನು ಸಮೇತ ಇಡೀ ಮರವನ್ನು ಕಳ್ಳರು ಹೊರತೆಗೆದುಕೊಂಡು ಕದ್ದಿದ್ದಾರೆ ಎಂದು ಕಂಡುಬಂದಿದೆ.

ಈ ಹಿಂದೆ ಐಜಿಪಿ ಸತ್ಯನಾರಾಯಣ ರಾವ್ ಎಂಬವರ ಅಧಿಕಾರ ಅವಧಿಯಲ್ಲಿ ಶ್ರೀಗಂಧದ ಮರವನ್ನು ಈ ಶೈಲಿಯಲ್ಲಿ ಅಪಹರಿಸಲಾಗಿತ್ತು ಎಂದು ಹೇಳಲಾಗಿದೆ, ಆದರೆ ಈ ಘಟನೆಯು ಸಾರ್ವಜನಿಕರಿಗೆ ಯಾವುದೇ ಮಾಧ್ಯಮವು ವರದಿ ಮಾಡಿಲ್ಲ. ಆದರೆ ನಿಂಬಲ್ಕರ್ ಈ ರಾಕೆಟ್ ಅನ್ನು ಶೋಧಿಸಿ ಅಪರಾಧಿಗಳನ್ನು ಸೆರೆಹಿಡಿಯುತ್ತಾರೆ ಎಂದು ಒಂದು ಭರವಸೆ ಇದೆ.

English Summary: Sandalwood Tree stolen broad day light from IGP house in Mangalore.
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post