ಮೋದಿಯವರನ್ನು ಟೀಕಿಸಿದ ರಮ್ಯಾ ಬೆವರಿಳಿಸಿದ ಶಿಲ್ಪಾ ಗಣೇಶ್

og:image
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ, ಕರ್ನಾಟಕದ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಇಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾರ ವಿರುಧ್ಧ ಫೇಸ್ಬುಕ್ ಮೂಲಕ ಬೆವರಿಳಿಸಿದ್ದಾರೆ. 

ರಮ್ಯಾ ಅವರು ಆಗಸ್ಟ್ 5 ರಂದು ತನ್ನ ಟ್ವಿಟ್ಟರ್ ನಲ್ಲಿ, ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ ಅವರ ಫೋಟೋವನ್ನು ಅಪ್ಲೋಡ್ ಮಾಡಿದ್ದರು.  ರಾಹುಲ್ ಗಾಂಧಿ ಜನರ ಜೊತೆ ಮಾತನಾಡುತ್ತಿರುವ ಫೋಟೋಗೆ ‘ಜನರ ನಾಯಕ’ ಎಂಬುದಾಗಿ, ಮೋದಿ ಅವರು ಗುಜರಾತ್ ನೆರಯ ವೈಮಾನಿಕ ಸಮೀಕ್ಷೆಯನ್ನು ವೀಕ್ಷಿಸುತ್ತಿರುವ ಫೋಟೋಗೆ ‘ಸೀಟ್ ಬೆಲ್ಟ್ ಲೀಡರ್’ ಎನ್ನುವ ತಲೆ ಬರಹವನ್ನು ಹಾಕಿ ಪ್ರಕಟಿಸಿದ್ದರು. ಆ ಎರಡೂ ಫೋಟೋಗಳನ್ನು ಹೋಲಿಕೆ ಮಾಡುವ ದುಸ್ಸಾಹಸ ಮಾಡಿದ್ದ ರಮ್ಯಾರವರ ಟ್ವೀಟ್ ಗೆ ಶಿಲ್ಪಾ ಅವರು ಗರಂ ಆಗಿದ್ದಾರೆ. ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

 ಕೆಳಗೆ ಶಿಲ್ಪಾರವರ ಫೇಸ್ ಬುಕ್ ನಲ್ಲಿ ಬರೆದ ಪೋಸ್ಟ್ ಇದೆ, ಓದಿ ಶೇರ್ ಮಾಡಿ

ರಮ್ಯಾರವರೇ,

ಮೊದಲಿಗೆ ತಾವೊಬ್ಬರೇ ಬುದ್ಧಿವಂತರು ಎನ್ನುವ ತಮ್ಮ ಭ್ರಮೆಗೆ ನಮಸ್ಕಾರಗಳು. ಇನ್ನು ನೀವು ಹೋಲಿಕೆ ಮಾಡುತ್ತಿರುವ ಈ ಫೋಟೋ ವಿಚಾರಕ್ಕೆ ಬಂದರೆ ಯಾವ ಜಾಗಗಳಲ್ಲಿ ವಾಹನ ಹೋಗಲೂ ಕೂಡ ಕಷ್ಟವೋ ಅಲ್ಲಿ ವೈಮಾನಿಕ ಸಮೀಕ್ಷೆ ಮಾಡುವುದು ಅನಿವಾರ್ಯ ಎನ್ನುವುದು ಅರಿವಿರಲಿ, ಪ್ರಧಾನಿಗಳು ನಂತರದಲ್ಲಿ ಜನರೊಂದಿಗೆ ನೇರವಾಗಿ ಮಾತಾಡಿರುವುದನ್ನು ತಾವು ಮರೆತಿದ್ದರೂ ಅಲ್ಲಿನ ಜನ ಮರೆತಿಲ್ಲ.

ನಿಮ್ಮ ರಾಹುಲ್ ರವರಿಗೆ ಜನರ ಬಗ್ಗೆ ಅಷ್ಟು ಕಾಳಜಿ ಇದ್ದಿದ್ದರೆ ಅಂತಹ ಪ್ರವಾಹದ ಪರಿಸ್ಥಿತಿಯಲ್ಲಿ ಗುಜರಾತಿನ ತಮ್ಮದೇ ಪಕ್ಷದ ಶಾಸಕರನ್ನು ಬೆಂಗಳೂರಿನಲ್ಲಿ ಮೋಜು ಮಾಡಲು ಕಳುಹಿಸಿ ತಾವು ಭಾರಿ ಸಭ್ಯರಂತೆ ಜನರೆದುರು ಬಂದು ಮೊಸಳೆ ಕಣ್ಣೀರು ಸುರಿಸಿದರೆ ಅದನ್ನು ನಂಬಲು ಜನ ಮೂರ್ಖರಲ್ಲ. ನಿಮ್ಮ ರಾಹುಲ್ ರವರು ನಿಜವಾದ ಪ್ರವಾಹ ಸಂತ್ರಸ್ತರ ಜೊತೆಗೆ ಕುಳಿತು ಮಾತಾಡಿದ್ದಾರೆ ಎನ್ನಲು ಯಾವುದೇ ಸಾಕ್ಷಿ ಇಲ್ಲ. ನಿಮ್ಮದೇ ಮಂಡ್ಯದಲ್ಲಿ ರಾಹುಲ್ ಭೇಟಿಯಾದಾಗ ತಾವು ಸೃಷ್ಟಿಸಿದ ನಕಲಿ ರೈತರ ಕಥೆ ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. ಇದರಿಂದಾಗಿ ತಾವು ಮಂಡ್ಯದ ಮಾರುಕಟ್ಟೆಯಲ್ಲಿ ಅವಮಾನ ಪಟ್ಟಿದ್ದು ತಮ್ಮ ಮಂಡ್ಯದಿಂದ ವಾಸಸ್ಥಾನ ಬದಲಾಯಿಸಿದ್ದು ಕೂಡಾ ಜನ ಮರೆತಿಲ್ಲ.

ರಾಹುಲ್ ರವರು ತಾವು ಸಂಸದರಾದ ಕ್ಷೇತ್ರದಲ್ಲೇ ಯಾವುದೇ ಅಭಿವೃದ್ಧಿ ಮಾಡದೇ ಜನರಿಂದ ಉಗಿಸಿಕೊಂಡಿದ್ದು ಜನ ಮರೆತಿಲ್ಲ. ಇನ್ನು ರಾಹುಲ್ ರವರು ಗುಜರಾತಿನ ಪ್ರವಾಹ ಸಂತ್ರಸ್ತರನ್ನು ನೋಡಲು ಹೋದಾಗ ತಮ್ಮ ಕಾರಿನ ಮೇಲೆ ಬಿಜೆಪಿಯವರು ಕಲ್ಲು ತೂರಾಟ ಮಾಡಿದರು ಎಂದು ಹೇಳಿಕೆ ನೀಡಿದ್ದು ನೋಡಿದರೆ ಇದರ ಹಿಂದೆ ನಿಮ್ಮ ಬುದ್ಧಿವಂತಿಕೆ ಎದ್ದು ಕಾಣುತ್ತದೆ, ತಾವೇ ಕಲ್ಲು ಹೊಡೆಸಿಕೊಂಡು ಬಿಜೆಪಿಯ ಮೇಲೆ ಗೂಬೆ ಕೂರಿಸುವುದು ತಿಳಿದ ವಿಚಾರವೇ ಅಲ್ಲವೇ? ಈಗಾಗಲೇ ತಾವು ಮಂಡ್ಯದಲ್ಲಿ ಇದೇ ತರ ನಾಟಕ ಮಾಡಿ ಯಶಸ್ವಿಯಾದವರು ತಾನೇ?

ಮೂರು ಬಾರಿ ಮುಖ್ಯಮಂತ್ರಿ ಆದವರು ದೇಶದ ಪ್ರಧಾನಿಯಾದವರಿಗೆ ಆಡಳಿತ ಮಾಡುವುದನ್ನು ತಾವು ಕಲಿಸಿಕೊಡಲು ಹೋಗಬೇಡಿ. ನೀವೇ ಹೇಳಿದಂತೆ ರಾಹುಲ್ ರನ್ನು ಮೋದಿಜೀ ಲೆವೆಲ್ಲಿಗೆ ಕೊಂಡೊಯ್ಯುತ್ತೇನೆ ಎಂದ ಮಾತನ್ನು ಮೋದಿಜೀ ಹೆಸರಿಗೆ ಮಣ್ಣೆರೆಚುವ ಬದಲು ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಜನರ ಮನಸ್ಸನ್ನು ಗೆಲ್ಲಿರಿ. ನಿಮ್ಮ ನಾಟಕಗಳನ್ನು ಜನ ನಂಬುವ ಕಾಲ ಹೊರಟುಹೋಗಿದೆ, ಜವಾಬ್ದಾರಿಯಿಂದ ಮಾತಾಡುವುದನ್ನು ಕಲಿಯಿರಿ. ಧನ್ಯವಾದಗಳು. 
Previous Post Next Post