"ರಿವೆಂಜ್ ಪಾಲಿಟಿಕ್ಸ್" - ಯೆಡ್ಡಿ ಮತ್ತು ಬಿಜೆಪೆ ಮೇಲೆ ಸಿಧ್ಧು ಎ.ಸಿ.ಬಿ ಅಸ್ತ್ರ ??

og:image
ಬೆಂಗಳೂರುಃ "ರಿವೆಂಜ್ ಪಾಲಿಟಿಕ್ಸ್" ರಾಜಕೀಯದಲ್ಲೇನು ಹೊಸತೇನಲ್ಲ. ಈಗಾಗಲೇ ಐ.ಟಿ ಡಿಪಾರ್ಟ್ಮೆಂಟ್ ಕರ್ನಾಟಕದ ಪವರ್ ಮಿನಿಸ್ಟರ್ ಡಿ.ಕೆ ಶಿವಕುಮಾರ್  ಮನೆ ಮತ್ತು ಕಛೇರಿ ಮೇಲೆ ಧಾಳಿ ನಡೆಸಿ, ಮಹತ್ವದ ದಾಖಲೆಗಳ ಜೊತೆ ನಗದನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ಕೆಂಡಾಮಂಡಲವಾಗಿರುವ ರಾಜ್ಯ ಸರ್ಕಾರ, ರಾಜ್ಯದ ೧೭ ಬಿಜೆಪಿ ನಾಯಕರ ಮೇಲೆ ಎ.ಸಿ.ಬಿ ಅಸ್ತ್ರ ಬೀಸಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಮುಂದಿನ ಮುಖ್ಯ ಮಂತ್ರಿ ತಾನೇ ಎಂದು ಹೇಳಿಕೊಂಡಿರುವ ಯಡಿಯೂರಪ್ಪ ಸೇರಿದಂತೆ, ಶೋಭಾ ಕರಂದ್ಲಾಜೆ, ಆರ್ ಅಶೋಕ್, ಸಿಟಿ ರವಿ ಮತ್ತು ಒಟ್ಟು ೧೭ ಮಂದಿ ಮೇಲೆ ಇರುವ ಹಳೆಯ ದೂರುಗಳನ್ನು ಮರು ತನಿಖೆಗೆ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಒಂದು ವೇಳೆ ಇದು ನಿಜವಾದರೆ, ರಾಜ್ಯ ಸರ್ಕಾರ ಇವರೆಲ್ಲರ ಮೇಲೆ ಕೇಸ್ ಇದ್ದರೂ, ಇಷ್ಟುದಿನ ಸುಮ್ಮನಿದ್ದಿದ್ದು ಯಾಕೆ ಎಂದು ಜನರಿಗೆ ತಿಳಿಸಬೇಕಾಗಿದೆ.
Previous Post Next Post