ಉತ್ತರ ಪ್ರದೇಶದಲ್ಲಿ ಟೆರರಿಸಮ್ - ರೈಲಲ್ಲಿ ಬಾಂಬ್ ಪತ್ತೆ

og:image

ನವದೆಹಲಿಃ 70 ನೇ ಸ್ವಾತಂತ್ರ್ಯ ದಿನಕ್ಕೆ ಮುಂಚಿತವಾಗಿ, ಉತ್ತರಪ್ರದೇಶದ ಅಮೇಥಿ ರೈಲು ನಿಲ್ದಾಣದ ಭದ್ರತಾ ಸಂಸ್ಥೆಗಳು ಅಮೃತಸರದಿಂದ ಬಂದಿರುವ ರೈಲಿನಲ್ಲಿ ಸಂಶಯಾಸ್ಪದ ಪ್ಯಾಕೇಜ್ ಕಂಡು ಹಿಡಿದಿದ್ದು, ಪರಿಶೀಲಿಸಿದಾಗ ಕಡಿಮೆ ತೀವ್ರತೆಯ ಬಾಂಬ್ ಪತ್ತೆಯಾಗಿದೆ ಎಂದು ANI ವರದಿ ಮಾಡಿದೆ.

"ಕಡಿಮೆ ತೀವ್ರತೆಯ ಬಾಂಬ್ ಕಂಡುಬಂದಿದೆ, ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು ರೈಲು ತನ್ನ ಪ್ರಯಾಣ ಮುಂದುವರಿಸಿದೆ" ಎಂದು ಸೌಮಿತ್ರ ಯಾದವ್, ಎಸ್ಪಿ ಜಿಆರ್ಪಿ, ಎಐಐ ಹೇಳಿದಾರೆ.

ಮೊದಲಿಗೆ, ತಪಾಸಣೆಗಾಗಿ ಅಮೇಥಿಯಲ್ಲಿ ರೈಲನ್ನು ನಿಲ್ಲಿಸಲಾಯಿತು ಮತ್ತು ಎರಡು ಬೋಗಿಗಳನ್ನು ಖಾಲಿಮಾಡಿಸಿ ಮತ್ತು ಕಾರ್ಯಾಚರಣೆಗೆ ನೆರವಾಗಲು ಬಾಂಬ್ ವಿಲೇವಾರಿ ತಂಡವನ್ನು ಸಹ ಕರೆಯಲಾಯಿತು.

ಅಧಿಕಾರಿಗಳು ಪ್ಯಾಕೇಜ್ ಬಳಿ ಬೆದರಿಕೆ ಪತ್ರವನ್ನು ಸಹ ಪಡೆದುಕೊಂಡಿದ್ದಾರೆ. ಪತ್ರವು ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಅಬು ಡುಜಾನಾ ಅವರ ಕೊಲೆಗೆ ಪ್ರತೀಕಾರವಾಗಿ ಬಾಂಬ್ ಇರಿಸಲಾಗಿದೆ ಎಂದು ಹೇಳುತ್ತದ.
Previous Post Next Post