ವೇದಿಕೆ ಮೇಲೆ ಮಹಿಳಾ MLC ಕೈ ಮೇಲೆ ಕೈ ಹಾಕಿದ ಕಾಂಗ್ರೆಸ್ ನಾಯಕ - ಕೈಗೆ ಭಾರಿಸಿದ ಮಹಿಳೆ

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image


ಕಾಂಗ್ರೆಸ್ ನಾಯಕ ಟಿ.ಪಿ. ರಮೇಶ್, ಪಬ್ಲಿಕ್ ಫಂಕ್ಷನ್ ನಲ್ಲಿ ಎಂಎಲ್ಸಿ ವೀಣಾ ಅಚಯ್ಯ ಅವರ ಕೈ ಹಿಡಿದಿದ್ದು, ಆದರೆ ವೀಣಾರವರು ಅಲ್ಲೇ ಕಾಂಗ್ರೆಸ್ ನಾಯಕನ ಕೈಗೆ ಒಂದು ಭಾರಿಸಿದ್ದಾರೆ.

ಮಹಿಳಾ ನಾಯಕಿಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸಿಕ್ಕಿಬಿದ್ದಿದ್ದು, ಕರ್ನಾಟಕ ಕಾಂಗ್ರೆಸ್ ನಾಯಕ ವಿವಾದಕ್ಕೆ ಒಳಗಾಗಿದ್ದಾರೆ. ಮಡಿಕೇರಿ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಮತ್ತು ಸಿಲ್ಕ್ ಬೋರ್ಡ್ನ ಪ್ರಸಕ್ತ ಅಧ್ಯಕ್ಷ ಟಿ ಪಿ ರಮೇಶ್ ಅವರು ಸ್ವಾತಂತ್ರ್ಯ ದಿನದ ಕಾರ್ಯದಲ್ಲಿ ಎಂಎಲ್ಸಿ ವೀಣಾ ಅಚ್ಚಯ್ಯರವರ ಕೈಯನ್ನು ಹಿಡಿದಿಡಲು ಪ್ರಯತ್ನಿಸಿದ್ದಾರೆ.

ವಿಡಿಯೋ ವೈರಲ್ ಆದ ನಂತರ ಮಾಧ್ಯಮದ ಜೊತೆ ಮಾತನಾಡಿದ ರಮೇಶ್, ಅವರ ಕೃತ್ಯಗಳನ್ನು ಸಮರ್ಥಿಸಿಕೊಂಡರು. "ವೀಣಾ ಮತ್ತು ನಾನು ಒಂದೇ ಪ್ರದೇಶದಿಂದ ಬಂದಿದ್ದೇವೆ ಮತ್ತು ಅವಳು ನನ್ನ ತಂಗಿ ಸಮಾನವಾಗಿದ್ದು ನಾವು ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತ್ರ ಚರ್ಚಿಸುತ್ತಿದ್ದೆವು, ನನ್ನನ್ನು ದೂಷಿಸಲು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ"

"ಆದರೆ ವೀಣಾ ಪ್ರಕಾರ, ರಮೇಶ್ ಉದ್ದೇಶದ ಅರಿವಿಲ್ಲ, ತಂಗಿ ಎಂಬ ಭಾವನೆ ಇದ್ದಿದ್ದರೂ, ಅವರು ಪಬ್ಲಿಕ್ ಪ್ರೋಗ್ರಾಮ್ ನಲ್ಲಿ ಕೈಹಿಡಿದಿದ್ದು ತಪ್ಪು. ನಾನು ಶುಕ್ರವಾರ ಸಂಜೆ ಕಾಂಗ್ರೆಸ್ ಹೈ ಕಮಾಂಡ್ಗೆ ಮಾತನಾಡುತ್ತೇವೆ ಮತ್ತು ಭವಿಷ್ಯದ ಕ್ರಮವನ್ನು ನಿರ್ಧರಿಸುತ್ತೇನೆ " ಎಂದಿದ್ದಾರೆ.

ಟಿ. ಪಿ. ರಮೇಶ್ ಯಾರು?

ಟಿ. ಪಿ. ರಮೇಶ್ ಕರ್ನಾಟಕ ಕಾಂಗ್ರೆಸ್ನ ಪ್ರಮುಖ ನಾಯಕ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬಹಳ ಸಮೀಪದವರೆಂದು ಪರಿಗಣಿಸಲಾಗಿದೆ. ಈ ಕಾರಣದಿಂದ, ಅವರು ಕರ್ನಾಟಕ ಸಿಲ್ಕ್ ಬೋರ್ಡ್ನ ಅಧ್ಯಕ್ಷ ಹುದ್ದೆ ಪಡೆಯಲು ಸಾಧ್ಯವಾಯಿತು. ಅವರು ಮಡಿಕೇರಿ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದಾರೆ.  

ವೀಣಾ ಅಚ್ಚಯ್ಯ ಯಾರು? 
ವೀಣಾ ಅಚಯ್ಯ ಅವರು ಕರ್ನಾಟಕದ ಕಾಂಗ್ರೆಸ್ ನಾಯಕಿಯಾಗಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, ಇಲ್ಲಿದೆ ನೋಡಿ ಈ ಬಗ್ಗೆ ಟಿವಿ9 ವರದಿ.English Summary:
Tags :
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ನೇರ ನ್ಯೂಸ್ - ಒಂದು ಸ್ವತಂತ್ರ ಮಾಧ್ಯಮವಾಗಿದ್ದು, ನಿಮ್ಮ ಧನ ಸಹಾಯದಿಂದ ಮಾತ್ರ ಈ ಸೇವೆಯನ್ನು ಮುಂದುವರೆಸಲು ಸಾಧ್ಯ. ದಯವಿಟ್ಟು ನಿಮ್ಮ ಕೈಯಲ್ಲಾದ ರೀತಿಯಲ್ಲಿ ಸಹಾಯ ಮಾಡಲು ಇಲ್ಲಿ ಕ್ಲಿಕ್ ಮಾಡಿ.