"ಇಂದಿರಾ ಕ್ಯಾಂಟೀನ್ ಬಡವರಿಗೆ ಮಾತ್ರ"-ದಿನೇಶ್ ಅಮೀನ್ ಮಟ್ಟು - ನಾಗರಿಕರ ಸಲಹೆ ಸೂಚನೆ ಎಚ್ಚರಿಕೆ..!!

og:image

ಬೆಂಗಳೂರುಃ "ಇಂದಿರಾ ಕ್ಯಾಂಟೀನ್ ಇರುವುದು ನಗರದ ಅತಿ ಬಡವರಿಗಾಗಿ. ಬಡವರಲ್ಲದವರು ಮಾಡುವ ಒಂದು ಊಟ+ತಿಂಡಿಯಿಂದಾಗಿ, ನಿಜವಾದ ಬಡವರ ಒಂದು ಊಟ+ತಿಂಡಿ ಕೈತಪ್ಪಿ ಹೋಗಬಾರದು." ಹೀಗೆಂದು ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು, ಕರ್ನಾಟಕದ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು.

ನಿನ್ನೆ ಬೆಂಗಳೂರಿನಲ್ಲಿ ಆರಂಭವಾದ ಇಂದಿರಾ ಕ್ಯಾಂಟೀನ್ ನಲ್ಲಿ ಜನಜಂಗುಳಿ ತುಂಬಿದ್ದು, ಕೆಲವರು ಊಟ ಸಿಗದೆ ನಿರಾಶರಾದರು. ಇದರಿಂದ, ಅಮೀನ್ ರವರ ಈ ಪೋಸ್ಟ್ ತುಂಬಾ ಪ್ರಸ್ತುತವೆನಿಸುತ್ತದೆ. ಈ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ,  ಇಂದಿರಾ ಕ್ಯಾಂಟೀನ್ ಬಡವರಿಗೆ ಮಾತ್ರ ಉಪಯೋಗಕ್ಕೆ ಬರುವಂತೆ ಮಾಡುವಲ್ಲಿ ಸರ್ಕಾರ ಸರಿಯಾಗಿ ಪ್ಲಾನ್ ಮಾಡಬೇಕಿತ್ತು ಎಂದು ಜನರು ಅಭಿಪ್ರಾಯ ಹಂಚಿದ್ದಾರೆ.


ದಿನೇಶ್ ಅಮೀನ್ ರ ಈ ಫೇಸ್ ಬುಕ್ ಸ್ಟೇಟಸ್ ಗೆ ಬಹಳಷ್ಟು ಮಂದಿ ಕಮೆಂಟ್ ಮಾಡಿದ್ದು, ಅಕ್ಷತಾ ಹಮ್ಚಡಕಟ್ಟೆ ಎಂಬವರು, "ಇವತ್ತು ನಾನು ಗೆಳೆಯರೊಂದಿಗೆ ಈ ಕುರಿತಾದ ಮಾತಾಡುತ್ತಿದ್ದೆ .. ಎಲ್ಲೆಲ್ಲಿ ಮಧ್ಯಮ ವರ್ಗದವರು ಪ್ರವೇಶ ಪಡತಾರೋ, ಅಲ್ಲೆಲ್ಲ ತೀರಾ ಬಡ ವರ್ಗದ ಪ್ರವೇಶಕ್ಕೆ ತಡೆಯು ... ಕೊನೆಯ ಪಕ್ಷ ಇಂದಿರಾ ಕ್ಯಾಂಟಿನ್ ಸಹ ಬಿಪಿಎಲ್ ಕಾರ್ಡ ಜೊತೆ ಪ್ರವೇಶ ಕಲ್ಪಿಸಬೇಕು" ಎಂದು ಸಲಹೆ ನೀಡಿದರು.

ದಿನೇಶ್ ಅಮೀನ್ ಅವರು ಇನ್ನೊಬ್ಬರ ಕಮೆಂಟಿಗೆ ರಿಪ್ಲ್ಯೆ ಮಾಡಿ, "ಒಮ್ಮೆ ರುಚಿ ನೋಡಲು ಹೋಗಿಬಂದರೆ ತಪ್ಪಲ್ಲ. ಆ ಆಸೆ ನನಗೂ ಇದೆ. ಜನಜಂಗುಳಿ ನೋಡಿ ವಾಪಸ್ ಬಂದೆ. ಖಾಯಂ ಗಿರಾಕಿಗಳಾಗುವುದು ಬೇಡ" ಏಂದು ಬುದ್ಧಿ ಹೇಳಿದ್ದಾರೆ.

ಆದರೆ ಗೋಪಾಲ್ ಕ್ರಷ್ಣರವರು ಕಮೆಂಟ್ ಮಾಡಿ, ಒಮ್ಮೊಮ್ಮೆ ಮದ್ಯಮ ವರ್ಗದವರ ಕೈಯಲ್ಲಿ ಬಿಡಿಗಾಸು ಇರುವುದಿಲ್ಲ , ಅಂಥವರಿಗೂ ಸಿಗಲಿ , ಊಟದ ವಿಚಾರದಲ್ಲಿ ಬಡವ ಶ್ರೀಮಂತ ಅನ್ನುವ ವಿಚಾರ ಒಳ್ಳೆಯದಲ್ಲ , ಹಸಿದ ಯಾವುದೇ ಮನುಷ್ಯ ಇಂದಿರಾ ಕ್ಯಾಂಟಿನ್ ಬಳಸುವಂತಾಗಲಿ ಎಂದು ಆಶಿಸಿದ್ದಾರೆ.

ಇನ್ನೂ ಕೆಲವು ಕಮೆಂಟುಗಳು ಪೌಷ್ಟಿಕ ಆಹಾರ ನೀಡುವುದರ ಬಗೆಯಾಗಿದೆ, ಸಂದೀಪ್ ಸಮೇತಡ್ಕ ನಾಯಕ್ ಎಂಬವರು, "ಮಧುಮೇಹ ನೀಡಬಲ್ಲ ಸಕ್ಕರೆ ಆಧಾರಿತ ಕಾವಲಾಂಶ ಇರುವ ಆಹಾರವನ್ನು ಕಡೀಮೆ ಕ್ರಯಕ್ಕೆ ಬಡವರಿಗೆ ಕೊಟ್ಟರೆ ಅವರಲ್ಲಿ ಬಡತನದೊಂದಿಗೆ ಮದುಮೇಹ ಕೊಟ್ಟಂತಾಗುತ್ತದೆ. ವೈಜ್ಞಾನಿಕ ಮತ್ತು ಪೌಷ್ಟಿಕ ಆಹಾರವನ್ನು ಮಾತ್ರ ನೀಡಬೇಕು. ಇಲ್ಲದಿದ್ದರೆ, ಜೋಳ ಸುಬಿಸಿಡಿಯಿಂದ ಅಮೇರಿಕಾದಲ್ಲಿ ಬಡವರ ಗತಿಯಾದಂತೆ ಕರ್ನಾಟಕದಲ್ಲೂ ಆದೀತು. ಜಾಗ್ರತೆ ವಹಿಸಿ." ಎಂದು ಎಚ್ಚರಿಸಿದ್ದಾರೆ.


ಸುಭ್ರಮಣ್ಯ ಆಡಿಗ ಎನ್ನುವವರು, "ಬಡವರಿಗಾಗಿ ಅನ್ನುವುದಾದರೆ ಅದು ಬೆಂಗಳೂರಲ್ಲೇ ಯಾಕೆ ,ಇವತ್ತು ಬಡತನದ ಬೇಗೆ ಇರುವುದು ಹಳ್ಳಿಗಳಲ್ಲಿ ,ನಗರದಲ್ಲಿ ಮಾಡುವುದಾದರೆ ಸ್ಲಮ್ ಗಳಲ್ಲಿ ಮಾಡಬಹುದಿತ್ತು ಜಯನಗರದಲ್ಲಿ ಮಾಡಿದರೆ ಕಾರಲ್ಲಿ ಬಂದು ವಾಕಿಂಗ್ ಮಾಡುವ ಬದವರಪಾಲಾಗುತ್ತದೆ ಎನ್ನುವ ಸತ್ಯ ಗೊತ್ತಿರಲಿಲ್ಲವೇ,ಏನು ಮಾಡುತ್ತಿದ್ದೇವೆ ಯಾರಿಗಾಗಿ ಮಾಡುತ್ತಿದ್ದೇವೆ ಹೀಗೆ ತಲುಪಿಸಬೇಕು ಎಂಬೆಲ್ಲಾ ನೈಜ ಕಾಳಜಿ ಇದ್ದಿದ್ದರೆ ಈ ಹಿಂದಿರಾ(ಇಂದಿರಾ) ಕ್ಯಾಂಟಿನ್ ಬಡವರ ಏರಿಯಾಗಳಲ್ಲೇ ಸ್ಥಾಪಿತ ವಾಗುತ್ತಿತ್ತು" ಎಂದು ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.


ಬಡವರಿಗೆ ಊಟ ನೀಡುವ "ಇಂದಿರಾ ಕ್ಯಾಂಟೀನ್" ಒಂದೊಳ್ಳೆಯ ಪ್ರಯತ್ನವಾದರೂ, ಕೆಲವೊಮ್ಮೆ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಸರಿಯಾದ ಪ್ಲಾನ್ ಇಲ್ಲದೆ ಇಂತಹ ಯೋಜನೆಗಳು ಹಳ್ಳಹಿಡಿಯುವ ಸಾಧ್ಯತೆಗಳಿವೆ. ತಾವು ದುಡಿದ ಹಣದಿಂದ ಟ್ಯಾಕ್ಸ್ ಮುಖಾಂತರ ಸರ್ಕಾರ ಸೇರುವ ಹಣ, ಈ ಮೂಲಕ ಬಡವರ ಹೊಟ್ಟೆಗೆ ಹಿಟ್ಟು ಹಾಕಿದರೆ, ಶ್ರೀಮಂತರೂ, ಮಧ್ಯಮ ವರ್ಗದವರು ಖುಷಿಪಡಬಹುದು, ಆದರೆ ಸರಿಯಾದ ಪ್ಲಾನ್ ಇಲ್ಲದೆ, ನಿಜವಾದ ಬಡವರ ಕೈಗೆ ಅನ್ನ ಸಿಗದೇ ಯಾರ್ಯಾರದೋ ಹೊಟ್ಟೆ ಸೇರಿದರೆ ಮಾತ್ರ ಜನರು ರೊಚ್ಚಿಗೇಳುವರು.

English Summary: Indira Canteen receives appreciation as well as criticism. How normal people react to Indira Canteen.
Tags : Indira canteen, cheap food, Karnataka,
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post