ದರ್ಶನ್ ದುರ್ಯೋಧನನಾಗಲು ಫಿಟ್ - ಸುದೀಪ್ ಟ್ವೀಟ್

og:image

ಚಂದನವನದ ಸುಪರ್ ಸ್ಟಾರ್, ದರ್ಶನ್ ಕಳೆದ ಬಾರಿ ಟ್ವಿಟ್ಟರ್ ಮೂಲಕ ಸುದೀಪ್ ಮತ್ತು ತನ್ನ ಸ್ನೇಹ ಇಂದಿಗೆ ಕೊನೆ ಅಂದಾಗ, ಕನ್ನಡದ ಇಬ್ಬರೂ ಸುಪರ್ ಸ್ಟಾರ್ ಗಳ ಸ್ನೇಹ ಇಂದಿಗೆ ಕೊನೆ ಎಂದು ಎಲ್ಲಾರೂ ತಿಳಿದಿದ್ದರು. ದರ್ಶನ್ ಮತ್ತು ಸುದೀಪ್ ಗೆ ಕನ್ನಡದಲ್ಲಿ ತುಂಬಾ ಅಭಿಮಾನಿಗಳಿದ್ದಾರೆ. ಆದರಿಂದ ಇಬ್ಬರು ಗೆಳೆಯರ ಗೆಳೆತನ ಕೊನೆಗೊಂಡಾಗ ಸಹಜವಾಗಿ ಅಭಿಮಾನಿಗಳು ಬೇಸಾರಗೊಂಡಿದ್ದರು. ಇನ್ನು ಕೆಲವರು ಸಮಯದ ದುರುಪಯೋಗ ಪಡಿಸಿಕೊಂಡು, ಅಭಿಮಾನಿಗಳ ನಡುವೆ ವೈಮನಸ್ಸು ಉಂಟಾಗುವಂತೆಯೂ ಮಾಡಿದ್ದರು. ಆದರೆ, ಕಿಚ್ಚ ಸುದೀಪ್ ಈ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. 

ತನ್ನ ಟ್ವಿಟ್ಟರ್ ಮೂಲಕ "ದರ್ಶನ್ ಮಾತ್ರ ತನ್ನ ಪರ್ಸನಾಲಿಟಿ ಮತ್ತು ಚರಿಸ್ಮಾ ದ ಮೂಲಕ ಕುರುಕ್ಷೇತ್ರದಂತಹ ದೊಡ್ಡ ಚಿತ್ರಕ್ಕೆ ನ್ಯಾಯ ಸಲ್ಲಿಸಲು ಸಾಧ್ಯ" ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಮುನಿರತ್ನರಿಗೆ ಅಭಿನಂದನೆ ಸಲ್ಲಿಸಿರುವ ಸುದೀಪ್, ಇಷ್ಟು ದೊಡ್ಡ ಚಿತ್ರ ನಿರ್ಮಾಣವಾಗುತ್ತಿರುವುದಕ್ಕೆ ತಮ್ಮ ಸಂತಸ ತೋರ್ಪಡಿಸಿದ್ದಾರೆ. ಈ ಚಿತ್ರ ದರ್ಶನ್ ಕಿರೀಟಕ್ಕೆ ಇನ್ನೊಂದು ಗರಿಯಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.  

ಸುದೀಪ್ ರವರ ಟ್ವೀಟ್ ಇಲ್ಲಿದೆ ಓದಿ,
Kichcha Sudeep’s post on twitter reads, “It's awesome to see a huge cinema(in all aspects)going on floor.. My best wshs to producer MuniRatna & the entire team of kurukshetra.” In another tweet, he posted, “(Contd) n it surely Wil b another feather in the cap to Darshan... Only he can justify this role wth his personality n presence. Best wshs.”
Previous Post Next Post