ಮಹಾನದಿ ಧಾರಾವಾಹಿಯ ನಟಿ ರಚನಾ ಭೀಕರ ಅಪಘಾತಕ್ಕೆ ಬಲಿ - ವಿಡಿಯೋ

og:image
ಬೆಂಗಳೂರು, ಆಗಸ್ಟ್ 24: ಮಹಾನದಿ ಸೀರಿಯಲ್ ಖ್ಯಾತಿಯ ಕನ್ನಡ ಕಿರುತೆರೆ ನಟಿ ರಚನಾ ಮತ್ತು ನಟ ಜೀವನ್ ದುರಂತ ಅಂತ್ಯಕಂಡಿದ್ದಾರೆ. ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಬೆಂಗಳೂರಿಗೆ ವಾಪಸ್ ಬರುವಾಗ ಅವರಿದ್ದ ವಾಹನ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಮಹಾನದಿ ಸೀರಿಯಲ್ ಖ್ಯಾತಿಯ ರಚನಾ(23) ಹಾಗೂ ಸಹನಟ ಜೀವನ್(25) ಮೃತಪಟ್ಟಿದ್ದಾರೆ.

ಕಿರುತೆರೆ ನಟಿ ರಚನಾ(23) ಹಾಗೂ ಜೀವನ್(25) ಮೃತ ದುರ್ದೈವಿಗಳು. ತಡರಾತ್ರಿ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ, ನೆಲಮಂಗಳ ಸಮೀಪ ಟಾಟಾ ಸಫಾರಿ ಕಾರು ರಸ್ತೆಬದಿ ನಿಂತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ನಟ ಕಾರ್ತಿಕ್ ಹುಟ್ಟು ಹಬ್ಬ ಇದ್ದುದರಿಂದ ಕುಕ್ಕೆ ಸುಬ್ರಮಣ್ಯ ದೇವರ ದರ್ಶನಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಘಟನೆಯಲ್ಲಿ ಜೊತೆಯಾಗಿ ಪ್ರಯಾಣಿಸುತ್ತಿದ್ದ, ಬಿಎಸ್ ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್, ಮತಗತು ಎರಿಕ್ ಸಹ ನಟರಿಗೆ ಗಾಯಗಳಾಗಿದ್ದು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ಮೃತ ದೇಹಗಳನ್ನ ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary:Kannada actress dies in Car Accident. Rachna Serial actress । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.