ಮೊಹರಂ ದಿನದಂದು ದುರ್ಗಾ ವಿಗ್ರಹ ವಿಸರ್ಜನೆಗೆ ಅನುಮತಿ ಇಲ್ಲ - ಮಮತಾ ಬ್ಯಾನರ್ಜಿ

og:image
ಕೊಲ್ಕತ್ತ: ಬುಧವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಮೊಹರಂ ದುರ್ಗಾಷ್ಟಮಿಯ ಮರುದಿನ ಆಚರಿಸಲಿರುವುದರಿಂದ, ಹಿಂದೂಗಳು ಮುಸ್ಲಿಂ ಜನರೊಂದಿಗೆ ಪರಸ್ಪರ ಸಹಕಾರ ನೀಡಬೇಕೆಂದು ಕೋರಿದ್ದರು. ಹಿಂದೂಗಳು ಮತ್ತು ಮುಸಲ್ಮಾನರು ಕೋಮು ಸಮಸ್ಯೆಗಳಿಗೆ ಕಾರಣವಾದ ಪ್ರಚೋದನೆಗೆ ಬಲಿಯಾಗಬಾರದು ಎಂದಿದ್ದಾರೆ.

ಇದನ್ನೂ ಓದಿ ಃ "ಗಣೇಶ ಕೇಳಿಸಿಕೊಳ್ಳದೇ ಇರುವಾಗ, ಪ್ರಾರ್ಥಿಸುದರ ಅರ್ಥ ಏನು?" ಅಂದವರಿಗೆ ಮಹಿಳೆಯಿಂದ ಮಂಗಳಾರತಿ

"ಕೆಲವು ಜನರು ಕೋಮು ಉದ್ವಿಗ್ನತೆಯನ್ನು ಉಂಟುಮಾಡಿ, ಇದರ ರಾಜಕೀಯ ಪ್ರಯೋಜನವನ್ನು ತೆಗೆದುಕೊಳ್ಳಲು ಪ್ರಯತ್ನಿಸುವ ಜನರಿದ್ದಾರೆ" ಎಂದು ಬುಧವಾರ ಸಂಜೆ ನಡೆದ ದುರ್ಗಾ ಪೂಜಾ ಸಮಿತಿಗಳ ಸಭೆಯಲ್ಲಿ ಮಾತನಾಡಿದ ಅವರು, "ರಾಜಕೀಯ ಪ್ರಯೋಜನವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಕೆಲವು ಜನರಿಂದ ನಾವು ಏಕೆ ಆಪಾದನೆಯನ್ನು ತೆಗೆದುಕೊಳ್ಳಬೇಕು?" ಎಂದು ಅವರು ಕೇಳಿದರು.

ಇದನ್ನೂ ಓದಿ ಃ ಬ್ಯುಸಿ ಮಾರ್ಕೆಟ್ ನಲ್ಲಿ ಹುಡುಗಿ ಕೈ ಕಡಿದ ಯುವಕ - ಶಾಕಿಂಗ್ ನ್ಯೂಸ್

ದುರ್ಗಾ ಪೂಜಾ ಸಮಿತಿ ಮತ್ತು ಮುಹರಂ ಸಮಿತಿಗಳೊಂದಿಗೆ ಮಾತನಾಡಲು ಜಿಲ್ಲೆಯಲ್ಲಿ ಎಸ್.ಎಂ.ಗಳನ್ನು ಬ್ಯಾನರ್ಜಿ ನಿರ್ದೇಶಿಸಿದರು. ಅಕ್ಟೋಬರ್ 1 ರಂದು ಮೊಹರಂ ನಡೆಯಲಿರುವ ಕಾರಣ ಯಾವುದೇ ಮೂರ್ತಿ ವಿಸರ್ಜನೆಗೆ ಅನುಮತಿ ನೀಡಲಾಗುದಿಲ್ಲ ಎಂದು ಹೇಳಿದರು.

"ಎಲ್ಲಾ ಪೂಜಾ ಸಂಘಟಕರು ಸೆಪ್ಟೆಂಬರ್ 30 ರ ದಶಮಿಯ ಸಂಜೆ 6 ಗಂಟೆಗೆ ಒಳಗೆ ಮೂರ್ತಿ ವಿಸರ್ಜಿಸುವಂತೆ ನಾವು ಮನವಿ ಮಾಡಲಿದ್ದೇವೆ. ಅಕ್ಟೋಬರ್ 1 ರಂದು ಮೂರ್ತಿ ವಿಸರ್ಜನೆ ವಿಸರ್ಜನೆಯನ್ನು ಅನುಮತಿಸಲಾಗುವುದಿಲ್ಲ. ಅದರ ಬದಲಿಗೆ ನಾವು ಅಕ್ಟೋಬರ್ 4 ರವರೆಗೆ ಮೂರ್ತಿ ವಿಸರ್ಜಿಸಲು ಅವಕಾಶ ನೀಡುತ್ತೇವೆ." ಎಂದು ಮಮತಾ ಬುಧವಾರ ಹೇಳಿದರು.

ಇದನ್ನೂ ಓದಿ ಃ ಮಹಾನದಿ ಧಾರಾವಾಹಿಯ ನಟಿ ರಚನಾ ಭೀಕರ ಅಪಘಾತಕ್ಕೆ ಬಲಿ - ವಿಡಿಯೋ

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary:Mamatha Banerjee says Durga Idol immersion not allowed on Eid । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.