
ಬೆಂಗಳೂರುಃ ಡೈವೋರ್ಸ್ ಕ್ಯಾನ್ಸಲ್ - ಮತ್ತೆ ಒಂದಾದ ಕಿಚ್ಚ ಸುದೀಪ್ ದಂಪತಿ! ಈ ಸುದ್ಧಿ ಕಿಚ್ಚನ ಅಭಿಮಾನಿಗಳಲ್ಲಿ ಸಂತಸ ತರುವುದಂತೂ ಖಾತರಿ. ನಟ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ 2015 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಅವರ ಪುತ್ರಿ ಸಾನ್ವಿ ಭವಿಷ್ಯಕ್ಕಾಗಿ, ವಿಚ್ಚೇದನ ಕೇಸ್ ಹಿಂಪಡೆದು ಒಟ್ಟಿಗೆ ವಾಸಿಸಲು ಒಪ್ಪಿಕೊಂಡಿದ್ದಾರೆ. ಅವರು ಈಗಾಗಲೇ ತಮ್ಮ ವಿಚ್ಛೇದನ ಅರ್ಜಿಯನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಯಲ್ಲಿ, ಸುದೀಪ್ ಮತ್ತು ಪ್ರಿಯಾ ಒಟ್ಟಿಗೆ ವಾಸಿಸಲು ತಮ್ಮ ಒಪ್ಪಿಗೆಯನ್ನು ನೀಡಿದರು. ಹಲವು ಬಾರಿ ನ್ಯಾಯಾಲಯ ನೋಟಿಸ್ಗಳನ್ನು ನೀಡಿದ್ದರೂ, ಸುದೀಪ್ ಮತ್ತು ಪ್ರಿಯಾ ಇಬ್ಬರೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲಿಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಕಿಚ್ಚ ಸುದೀಪ್ ಅವರ ಈ ಸುದ್ದಿವನ್ನು ಗೌರಿ-ಗಣೇಶ ಹಬ್ಬದ ವಿಶೇಷ ಕೊಡುಗೆ ಎಂದು ಪರಿಗಣಿಸಿದ್ದಾರೆ.
ಚಿತ್ರದಲ್ಲಿ ಸುದೀಪ್ ತಮ್ಮ ಪತ್ನಿ ಮತ್ತು ಮಗಳೊಂದಿಗೆ
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
Tags:
Entertainment