ಹೆಣ್ಣು ಮಗುವಿಗೆ ಜನ್ಮ ನೀಡಿದ ೧೦ ವರ್ಷದ ರೇಪ್ ಸಂತ್ರಸ್ಥೆ

og:image

ಚಂಡೀಗಢ: ಅತ್ಯಾಚಾರಕೊಳಗಾಗಿದ್ದ 10 ವರ್ಷ ವಯಸ್ಸಿನ ಹುಡುಗಿ, ಆಗಸ್ಟ್ 11 ರಂದು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಕೆ) ದಾಖಲಾಗಿದ್ದು, ಗುರುವಾರ ಬೆಳಿಗ್ಗೆ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ಹುಡುಗಿಗೆ ನಾರ್ಮಲ್ ಡೆಲಿವರಿ ಮಾಡಿಸಲು ಆಗದ ಕಾರಣ,  ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಲಾಯಿತು. GMCH ನಲ್ಲಿರುವ ವೈದ್ಯರ ಪ್ರಕಾರ, ಮಗುವಿನ ಮತ್ತು ತಾಯಿಯ ಆರೋಗ್ಯ ಸ್ಥಿರವಾಗಿಲ್ಲ ಮತ್ತು ಅವರು ಚೇತರಿಸಿಕೊಳ್ಳುವವರೆಗೂ ಆಸ್ಪತ್ರೆಯಲ್ಲೇ ಇರಿಸಲಾಗುವುದು.

"ಮಗು 2.2 ಕಿ.ಗ್ರಾಂ ತೂಗುತ್ತದೆ ಮತ್ತು ಕಡಿಮೆ ತೂಕ ಇರುವುದರಿಂದ ತೀವ್ರವಾದ ಆರೈಕೆ ಘಟಕದಲ್ಲಿ ಇರುತ್ತಾಳೆ, ಹಾಗೆಯೇ ಹುಡುಗಿಯನ್ನು ತೀವ್ರವಾದ ಆರೈಕೆಯ ಘಟಕದಲ್ಲಿದ್ದಲ್ಲಿ ಇರಿಸಲಾಗುವುದು." ಎಂದು GMCH ನಲ್ಲಿ ವೈದ್ಯರು ಹೇಳಿದರು.

ಶಸ್ತ್ರಚಿಕಿತ್ಸೆ ಗುರುವಾರ 9.15 ಕ್ಕೆ ನಡೆಯಿತು ಮತ್ತು ಸುಮಾರು ಎರಡು ಗಂಟೆಗಳ ಕಾಲ ಮುಂದುವರೆಯಿತು. ಮಗುವಿನ ಅರೋಗ್ಯ ಸ್ಥಿರವಾದ ನಂತರ, ಅದರ ರಕ್ತ ಪರೀಕ್ಷೆಯನ್ನು ಪಿತೃತ್ವ ಪರೀಕ್ಷೆಗೆ ತೆಗೆದುಕೊಳ್ಳಲಾಗುವುದು. ಎರಡು ದಿನಗಳ ಮುಂಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ನಿರ್ಧರಿಸಿದ್ದರು, ಆದರೆ ಹುಡುಗಿಯು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಾರಣ ಶಸ್ತ್ರಚಿಕಿತ್ಸೆ ಮುಂದೂಡಲ್ಪಟ್ಟಿತು.

10 ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ಥೆಗೆ, ಜುಲೈ 18 ರಂದು ಅಬಾರ್ಶನ್ ಗೆ ಅನುಮತಿ ನೀಡಲು ಕೆಳ ನ್ಯಾಯಾಲಯ ನಿರಾಕರಿಸಿತು. ಒಂದು ಪಿಐಎಲ್ ಸಲ್ಲಿಸಿದ ನಂತರ, ಪ್ರಕರಣವು ಸುಪ್ರೀಂ ಕೋರ್ಟ್ಗೆ ಹೋಗಿದ್ದು, ಅಲ್ಲಿಯೂ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ್ದರು. ಅತ್ಯಾಚಾರ ಸಂತ್ರಸ್ಥೆಯ ಕುಟುಂಬವು ನ್ಯಾಯಾಲಯಕ್ಕೆ ಬಂದಾಗ ಹುಡುಗಿಯು ಗರ್ಭವತಿಯಾಗಿ 26 ವಾರವಾಗಿತ್ತು, ಕೋರ್ಟ್, ಕೇವಲ ಗರ್ಭದಾರಣೆಯ 20 ನೇ ವಾರದವರೆಗೆ ಗರ್ಭಪಾತವನ್ನು ಮಾಡಲು ಅನುಮತಿ ನೀಡುತ್ತದೆ.

English Summary:10-year-old rape survivor delivered a girl baby, both baby and girl are at hospital. She was raped and court rejected appeal for abortion.
Tags : rape, Girl, Delivery, Court, Case, Abortion
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post