28 ಲಕ್ಷ ದುಡ್ಡು ಕಟ್ಟಿದ್ದ ಚಿಟ್ ಫಂಡ್ ಬಂದ್ - ಮಾದಕ ತಾರೆ ಸಂಜನಾಗೆ ಶಾಕ್

og:image

ಬೆಂಗಳೂರು, ಆಗಸ್ಟ್ 20: ಗಂಡ ಹೆಂಡತಿ ಖ್ಯಾತಿಯ ಪ್ರಸಿದ್ಧ ಸಿನಿಮಾ ನಟಿ ಸಂಜಾನಾ ಗಲ್ರಾನಿ, ಅವರು ಚೀಟ್ ಫಂಡ್ನಲ್ಲಿ 28 ಲಕ್ಷ ರೂ. ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆಮಲ್ಲೇಶ್ವರಂ ಪೊಲೀಸ್ ಠಾಣೆಗೆ ಆಕೆ ದೂರು ನೀಡಿದ್ದಾರೆ. ತಾನು ಚೆಕ್ ಕಳುಹಿಸುತ್ತಿದ್ದ ವ್ಯಕ್ತಿ ಫೋನ್ ಗೆ ಸಿಗದೇ ಇದ್ದಾಗ ಗುಮಾನಿಯಿಂದ ಸಂಸ್ಥೆಗೆ ಹೋದಾಗ, ಸಂಸ್ಥೆಗೆ ಬೀಗ ಹಾಕಿತ್ತು ಎಂದು ಸಂಜನಾ ಹೇಳಿದ್ದಾರೆ.

ಚಿಟ್ ಫಂಡ್ ಮತ್ತು ಮಾಲೀಕ ಮಹೇಶ್ ಮತ್ತು ಅವರ ಹೆಂಡತಿ ನಿರುಪ ಈ ಪ್ರಕರಣದಲ್ಲಿ ಆರೋಪಿಗಳಾಗಿರುತ್ತಾರೆ. ಮಹೇಶ್ ಒಡೆತನದ ಚಿಟ್ ಫಂಡ್, ತುಂಬಾ ಪ್ರಸಿದ್ಧಿಯಾಗಿದ್ದು, ಸಂಜಾನಾ ಎರಡು ವರ್ಷಗಳಲ್ಲಿ 28 ಲಕ್ಷ ರೂ. ಹೂಡಿಕೆ ಮಾಡಿದ್ದರು. ನೂರಾರು ಇತರ ಹೂಡಿಕೆದಾರರಿಗೆ ಅದೇ ಚಿಟ್ ಫಂಡ್ ಮಾಲೀಕರು ಸುಮಾರು 18 ಕೋಟಿ ರೂಪಾಯಿಗಳ ಮೋಸ ಮಾಡಿದ್ದಾರೆ. ಮಹೇಶ್ ಮತ್ತು ಅವರ ಹೆಂಡತಿಯ ವಿರುದ್ಧ ಮೋಸಕ್ಕೆ ಸಂಬಂಧಿಸಿದಂತೆ ಆರು ಪ್ರಕರಣಗಳು ದಾಖಲಾಗಿವೆ.

ಎರಡು ತಿಂಗಳ ಹಿಂದೆ, ಮಹೇಶ್ ಇದ್ದಕ್ಕಿದ್ದಂತೆ ತನ್ನ ಚಿಟ್ ಫಂಡ್ ಕಚೇರಿಯನ್ನು ಮುಚ್ಚಿ ತನ್ನ ಹೆಂಡತಿಯೊಂದಿಗೆ ಕಣ್ಮರೆಯಾಗಿದ್ದನು. ದಂಪತಿಗಳು ನೆರೆಹೊರೆಯ ರಾಜ್ಯಕ್ಕೆ ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಮಲ್ಲೇಶ್ವರಂ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

English Summary: Sanjana Galrani shocked as the Chit Fund where she invested 28 lakhs closes without any information.
Tags :
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.