ಕಾಜಲ್ ಕುಂದರ್ - ದೇಯಿಬೈದೆತಿ ತುಳು ಚಿತ್ರದಲ್ಲಿ ಮನೋಜ್ಞ ಅಭಿನಯ

Admin
og:image
ಸೂರ್ಯೋದಯ ಅವರ ನಿರ್ದೇಶನದ ದೇಯೀಬೈದೆತಿ ತುಳು ಚಿತ್ರ ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ಚಿತ್ರದಲ್ಲಿ ಗಮನಸೆಳೆಯುವಂತ ಅಭಿನಯ ನೀಡಿದ್ದು, ಚಿತ್ರರಂಗದ ಆಸ್ತಿಯಾಗಬಲ್ಲ ಪ್ರತಿಭೆ ಕಾಜಲ್ ಕುಂದರ್.

ಕಾಜಲ್ ಕುಂದರ್ ಹುಟ್ಟಿದ್ದು ದಕ್ಷಿಣ ಕನ್ನಡದ ಮಣ್ಣಿನಲ್ಲಿ. ವಾಸ ಇರೋದು ಮುಂಬೈಯಲ್ಲಿ. ಹಿಂದಿ, ಇಂಗ್ಲಿಷ್, ಮರಾಠಿ, ತುಳು, ಕನ್ನಡ ಭಾಷೆಗಳನ್ನು ನಿರರ್ಗಳವಾಗಿ ಮಾತಾಡುವ ಕಾಜಲ್ ಹಲವು ಹಿಂದಿ, ಮರಾಠಿ ಸೀರಿಯಲ್-ಸಿನಿಮಾ ಗಳಲ್ಲಿ ಅಭಿನಯಿಸಿದ ಅನುಭವಿ. ಕನ್ನಡದ ಹರಹರಮಹಾದೇವ ಧಾರಾವಾಹಿಯಲ್ಲೂ ಅಭಿನಯಿಸಿರುವ ನಟಿ, ಈಗಾಗಲೇ ಕನ್ನಡದ ಮಾಯಾ ಕನ್ನಡಿ ಎಂಬ ಚಿತ್ರದಲ್ಲೂ ನಾಯಕಿಯ ಪಾತ್ರ ಮಾಡಿದ್ದು, ಚಿತ್ರ ಇನ್ನೇನು ಬಿಡುಗಡೆಯ ಹಂತದಲ್ಲಿದೆ. 

ದೇಯಿ ಬೈದೆತಿ ಚಿತ್ರದಲ್ಲಿ ಮನೋಜ್ಣ ಅಭಿನಯ ನೀಡಿದ್ದ ಮಠ ಕೊಪ್ಪಳ ಇವರು, ಕಾಜಲ್ ಅಭಿನಯದ ಬಗ್ಗೆ ತನ್ನ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು, "ಕಾಜಲ್ ನಟನೆಯನ್ನು ಕಣ್ತುಂಬಿಕೊಳ್ಳಬೇಕೂಂದ್ರೆ ನೀವುಗಳು #ದೇಯೀಬೈದೆತಿ ಚಿತ್ರವನ್ನು ನೋಡಲೇಬೇಕು. ಬಾಲ ದೇಯಿ ಯಿಂದ ದೊಡ್ಡವಳಾಗುವ ದೇಯಿ ವರೆಗೆ ಈ ಮಗು ನಿರ್ವಹಿಸಿರುವ ಪಾತ್ರಪೋಷಣೆ ಅದ್ಭುತ... ಮಾತಿನ ನಡುವೆ ತುಳುಕಾಡುವ ಮುಗುಳನಗು ಈ ಮಗುವಿನ ಸೌಂಧರ್ಯವನ್ನು ಎತ್ತಿ ಹಿಡಿಯುತ್ತೆ."

ಕಾಜಲ್ ಈಗಾಗಲೇ ಬೇರೆ ತುಳು ಚಿತ್ರಗಳಲ್ಲಿ ನಟಿಸಿದ್ದರೂ, ಆಕೆಯ ನಟನೆಗೆ ಅವಕಾಶ ಸಿಕ್ಕಿದ್ದು, ದೇಯಿ ಬೈದೆತಿ ಚಿತ್ರದಲ್ಲಿ, ಮಠ ಕೊಪ್ಪಳ ಅವರ ಪ್ರಕಾರ "ದೇಯಿ ಬೈದೆತಿಯಲ್ಲಿ ಮಕ್ಕಳಿಲ್ಲದ ಬ್ರಾಹ್ಮಣ ದಂಪತಿಗಳಿಗೆ ಕೈಗೂಸಾಗಿದ್ದಾಗಲೇ ಮಗಳಾಗಿ ಬರುವ ಈ ಮಗು ಬೆಳೆದು ದೊಡ್ಡವಳಾದಾಗ ಎದುರಾಗುವ ಸಮಸ್ಯೆಯೊಂದು ಈಕೆಯನ್ನು ಪಾತಾಳಕ್ಕಿಳಿಸುತ್ತದೆ. ತನ್ನ ನಿಜವಾದ ಹೆತ್ತವರೆಂದೇ ತಿಳಿದು ಹಕ್ಕಿಯಂತೆ ಹಾರಾಡಲು ಬಯಸುತ್ತಾ ಜೀವಿಸುವ ಹೆಣ್ಮಗಳನ್ನು ಅನಿವಾರ್ಯ ಕಟ್ಟುಪಾಡಿನ ಪ್ರಕಾರ ಹೆತ್ತವರೇ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಟ್ಟಾಗ ತನ್ನೊಳಗಿನ ತುಮುಲವನ್ನು ಮುಖಭಾವದ ಬದಲಾವಣೆಯೊಂದಿಗೆ ವ್ಯಕ್ತಪಡಿಸುವ ರೀತಿ ಅದ್ಭುತ... ಕಾಡಿನಲ್ಲಿ ಒಂಟಿಯಾಗಿ ಪ್ರಲಾಪಿಸುತ್ತಿದ್ದ ಹೆಣ್ಮಗುವನ್ನು ಕಂಡು ಮನೆಗೆ ಕರೆದೊಯ್ಯುವ ತನ್ನ ಪೂರ್ವಾಶ್ರಮದ ಸಹೋದರನಿಂದಾಗಿ ತನ್ನ ಜನ್ಮರಹಸ್ಯದ ಕಥೆ ತಿಳಿದಾಗಿನ ಈ ಮಗುವಿನ ಮುಖಭಾವ ಬದಲಾಗುವ ಅಭಿನಯದ ಅಂದವನ್ನು ಚಿತ್ರ ನೋಡೀನೇ ಅನುಭವಿಸಬೇಕು."

ಕಾಜಲ್ ಈಗಾಗಲೇ ಮಾಯಾ ಕನ್ನಡಿ ಎಂಬ ಚಿತ್ರದಲ್ಲಿ ನಟಿಸಿದ್ದು, ತನ್ನ ಶ್ರದ್ಧೆ ಮತ್ತು ನಟನೆಯಿಂದ ಎಲ್ಲರ ಪ್ರೀತಿಪಾತ್ರರಾಗಿದ್ದಾರೆ. ಅರಳು ಹುರಿದಂತೆ ಎಲ್ಲರೊಂದಿಗೂ ನಗುನಗುತ್ತಾ ಆತ್ಮೀಯತೆಯಿಂದ ಮಾತಾಡುವ ಕಾಜಲ್ ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆ ಅವಕಾಶ ಸಿಕ್ಕಿ ತನ್ನೊಳಗಿನ ಪ್ರತಿಭೆಯಿಂದ ಗೆದ್ದು ಹೆಸರುವಾಸಿಯಾಗಲೆಂದು ಶುಭಹಾರೈಸುತ್ತಿದ್ದೇವೆ.

ಇನ್ನು ಕಾಜಲ್ ಈಗಷ್ಟೇ ಫೇಸ್ ಬುಕ್ ನಲ್ಲಿ ತನ್ನೊಂದು ಪೇಜ್ ಮಾಡಿದ್ದು, ಅದರ ಲಿಂಕ್ ಇಲ್ಲಿದೆ. https://www.facebook.com/KaajalKunderOfficial/







ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

#buttons=(Accept !) #days=(20)

Our website uses cookies to enhance your experience. Learn More
Accept !