ವೀಡಿಯೊದಲ್ಲಿ ಮಹಿಳೆ ಪ್ರಕಾರ, "ನಾನು ಸೇನಾ ಅಧಿಕಾರಿಯೊಬ್ಬಳ ಹೆಂಡತಿ" ಎಂದು ಹೇಳುವ ಮೂಲಕ ಅವಳು ಪ್ರಾರಂಭಿಸುತ್ತಾಳೆ. "... ಯಾವ ರೀತಿಯ ಒತ್ತಡವನ್ನು ಅಭಿನಂದನ್ ಪತ್ನಿ ಅನುಭವಿಸುತ್ತಿರಬಹುದು ಎಂದು ಊಹಿಸಿ" ಎಂದಿದ್ದಾರೆ. ಇದರ ಮೂಲಕ ಸಾಬೀತಾಗುವುದು ಏನೆಂದರೆ, ಆ ಮಹಿಳೆ ಅಭಿನಂದನ್ ಪತ್ನಿ ಅಲ್ಲ ಎಂಬುದು.
ಅಭಿನಂದನ್ ಅವರ ಪತ್ನಿಯ ಛಾಯಾಚಿತ್ರಗಳು ಮಾಧ್ಯಮ ದಲ್ಲಿ ಅಪ್ಲೋಡ್ ಮಾಡಲ್ಪಟ್ಟಿವೆ ಮತ್ತು ಈ ವೀಡಿಯೊದಲ್ಲಿರುವ ಮಹಿಳೆಗೆ ಮತ್ತು ಅ ಫೋಟೋ ಗಳಿಗೆ ಸಾಮ್ಯತೆಗಳಿಲ್ಲ.
ಇಡೀ ಭಾರತವೇ ಅಭಿನಂದನ್ ರನ್ನು ಭಾರತಕ್ಕೆ ವಾಪಸ್ಸ್ ಕರೆಸಿಕೊಳ್ಳುವಳ್ಳಿ ಭಾರತದ ಪ್ರದಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕ ಒತ್ತಡವನ್ನು ಶ್ಲಾಘಿಸುತ್ತಿದ್ದರೆ, ಕೆಲವು ಭಾರತೀಯ ಮಾಧ್ಯಮಗಳು ಇದೇ ವಿಷಯವನ್ನು ರಾಜಕೀಯವಾಗಿ ಬಳಸುತ್ತಿರುವುದು ಖೇದಕರ.
