ಲಾಕ್ ಡೌನ್ ನಡುವೆ ಕನ್ನಡ ನಟಿ ಕಾಜಲ್ ಕುಂದರ್ ವಿಭಿನ್ನ ಫೋಟೋಗ್ರಫಿ

og:image

ಬೆಂಗಳೂರು: ಭಾರತ ಈಗಾಗಲೇ ಕೊರೊನ ಧಾಳಿಗೆ ತತ್ತರಿಸಿ, ಜನರ ಸಾಮಾನ್ಯ ಜೀವನ ಅಸ್ತವ್ಯಸ್ತವಾಗಿದೆ. ದಿನಗೂಳಿ ನೌಕರರಿಂದ ಹಿಡಿದು, ದೊಡ್ಡ ದೊಡ್ಡ ಬುಸಿನೆಸ್ ಸಂಸ್ಥೆಗಳೂ ಯಾವುದೇ ವ್ಯವಹಾರಗಳಿಲ್ಲದೆ, ಮನೆಯಲ್ಲೇ ಇರುವಂತೆ ಮಾಡಿದೆ. ಆದರೆ ತಾವು ಮನೆಯಲ್ಲೇ ಇರುವ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ಕೆಲವು ಮಂದಿ, ಲಾಕ್ ಡೌನ್ ನಡುವೆಯೂ ತಮ್ಮ ಕೆಲಸ ಮುಂದುವರೆಸಿಕೊಂಡು ಹೋಗಿದ್ದಾರೆ.

ನೇರ ನ್ಯೂಸ್ ಮುಖಾಂತರ ಇಂತಹ ಹಲವಾರು ಸುದ್ಧಿಗಳು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದ್ದು, ಇದನ್ನು ನೀವು ಪಡೆಯಲು ನಮ್ಮ ಫೇಸ್ ಬುಕ್ ಪೇಜ್ ಈ ಕೂಡಲೇ ಲೈಕ್ ಮಾಡಿ. 

ಕನ್ನಡದ ಚಿತ್ರರಂಗಕ್ಕೆ ಈಗಾಗಲೇ 'ಮಾಯಾ ಕನ್ನಡಿ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿ, ಇನ್ನೇನು ತನ್ನ ಛಾಪು ಚಿತ್ರರಂಗದಲ್ಲಿ ಮಾಡಬೇಕೆಂದು ಕನಸು ಕಾಣುತ್ತಿದ್ದ, ಮಂಗಳೂರು ಬೆಡಗಿ ಕಾಜಲ್ ಕುಂದರ್, ಕೊರೊನಾದಿಂದ ಯಾವುದೇ ಶೂಟಿಂಗ್ ಇಲ್ಲದೆ ಮನೆಯಲ್ಲೇ ಇರುವಂತಾಗಿದೆ. ಆದರೆ ಮನೆಯಲ್ಲೇ ಇರುವ ಸಮಯವನ್ನು ಸದುಪಯೋಗ ಪಡಿಸಬೇಕೆಂಬ ಅವರ ಯೋಚನೆಗೆ ಅವರ ಗೆಳತಿ ಅರ್ಚನಾ ಚೌದರಿ ಜೊತೆಗೂಡಿದ್ದು, ಫೋಟೋಗ್ರಾಫಿ ಮೂಲಕ ತಮ್ಮ ಕ್ರಿಯೇಟಿವಿಟಿ ತೋರಿಸಿದ್ದಾರೆ.

ಕಾಜಲ್ ಕುಂದರ್ ಪ್ರಕಾರ "ಸಾಮಾನ್ಯವಾಗಿ ಫೋಟೋಗ್ರಫಿ ಅಂದ್ರೆ, ರೂಪದರ್ಶಿ ಮತ್ತು ಫೋಟೋಗ್ರಾಫರ್ ಒಂದೇ ಕಡೆ ಸೇರಿ ಫೋಟೊ ತೆಗೆಯುವುದು ಸಂಪ್ರದಾಯ. ಆದರೆ, ಲಾಕ್ ಡೌನ್ ಇರುವುದರಿಂದ, ಇಬ್ಬರೂ ಭೇಟಿಯಾಗುವುದು ದೂರದ ಮಾತು. ಅದಕ್ಕೇ ನನ್ನ ಗೆಳತಿ ಅರ್ಚನಾ ಚೌದರಿ ಫೋನ್ ಮಾಡಿ ದೂರದಲ್ಲೇ ಇದ್ದು ವಿಡಿಯೊ ಕಾಲ್ ಮೂಲಕ  ಫೋಟೋಗ್ರಫಿ ಮಾಡುವ ಬಗ್ಗೆ ವಿವರಿಸಿದಳು."

"ಅದರ ಪ್ರಾಕರ, ಅರ್ಚನಾ ನನ್ನ ಮೊಬೈಲ್ಗೆ ವಿಡಿಯೊ ಕಾಲ್ ಮಾಡ್ತಾಳೆ, ನಾನು ಸೂರ್ಯನ ಬೆಳಕು ಇರುವ ಸ್ಥಳದಲ್ಲಿ ನನ್ನ ಫೋನ್ ಮೂಲಕ ಫೋಟೊಗೆ ಪೋಸು ಕೊಡಬೇಕು, ಅದನ್ನು ವಿಡಿಯೋ ಕಾಲ್ ಮೂಲಕ ದೂರದಲ್ಲಿ ಇರುವ ಅರ್ಚನ ತನ್ನ ಫೋಫೆಸನಲ್ ಕ್ಯಾಮೆರಾ ಮೂಲಕ ಸೆರೆ ಹಿಡಿಯುತ್ತಾಳೆ."


ಈ ಮೂಲಕ ಸುಮಾರು ಫೋಟೊಸ್ ಕ್ಲಿಕ್ ಮಾಡಿ, ತಮ್ಮ ಲಾಕ್ ಡೌನ್ ಮದ್ಯೆನೂ ಸಮಯದ ಸದುಪಯೋಗ ಮಾಡಿಕೊಂಡಿದಾರೆ.


"ಲಾಕ್ ಡೌನ್ ಆದಮೇಲೆ ಪರಿಸ್ಥಿತಿ ಕೆಟ್ಟದಾಗಿದೆ, ಆದರೆ ಯಾವುದೇ ಪರಿಸ್ಥಿತಿಯೂ ನಮ್ಮನ್ನು ಕಟ್ಟಿಹಾಕಲು ಅವಕಾಶ ಕೊಡಬಾರದು, ಯಾವಾಗಲೂ ನಮಗೆ ಇಷ್ಟವಾಗಿದ್ದು ಮಾಡಲು ಏನಾದರೂ ದಾರಿ ಇರುತ್ತದ್ದೆ. " ಎಂದು ಈ ಕೊರೊನಾದಿಂದ ದೇಶ ಆದಷ್ಟು ಬೇಗ ಹೊರಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಕಾಜಲ್ ಕುಂದರ್.
ಎಲ್ಲಾ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂ ಮೂಲಕ ಕಾಜಲು ಕುಂದರ್ ಶೇರ್ ಮಾಡಿದ್ದಾರೆ.

 

ಇದನ್ನೂ ಓದಿ :English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post