ನವದೆಹಲಿ : ನಿನ್ನೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ಗೆ ಎಲ್ಲಾ ಗಣ್ಯರೂ ಶ್ರದ್ದಾಂಜಲಿ ಕೋರಿ ಟ್ವೀಟ್ ಮಾಡಿದ್ದು, ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಇವೆಲ್ಲದರ ಮಧ್ಯೆ, ರಾಹುಲ್ ಗಾಂಧಿ ಮಾಡಿದ್ದಾರೆನ್ನಲಾದ ಟ್ವೀಟ್ ನ ಸ್ಕ್ರೀನ್ ಶಾಟ್ ಎಲ್ಲಾ ಕಡೆ ಹಂಚಲಾಗಿದ್ದು, ಅದರಲ್ಲಿ, "ಯುವ ಮತ್ತು ಪ್ರತಿಭಾವಂತ ಕ್ರಿಕೆಟಿಗ ಸುಶಾಂತ್ ಸಿಂಗ್ ಸಾವಿನ ಸುದ್ಧಿ ಕೇಳಿ ಬೇಸರ ಗೊಂಡಿದ್ದೇವೆ." ಎಂದು ಅರ್ಥ ಬರುತ್ತದೆ. ಸುಷಾಂತ್ ಸಿಂಗ್ "ಎಮ್. ಎಸ್ ಧೋನಿ" ಎಂಬ ಚಿತ್ರದಲ್ಲಿ ನಟಿಸಿದ್ದು, ಕ್ರಿಕೆಟಿಗನ ಧೋನಿ ಜೀವನ ಆಧರಿಸಿದ ಚಿತ್ರವಾಗಿದ್ದು, ರಾಹುಲ್ ಗಾಂಧಿ, ಸುಶಾಂತ್ ಸಿಂಗ್ ಅವರನ್ನು ಕ್ರಿಕೆಟಿಗ ಎಂದು ಯೋಚಿಸಿದ್ದಾರೆ ಎಂದು ಎಲ್ಲರು ತಿಳಿಯಲಿ ಎಂಬರ್ಥದಲ್ಲಿ ಈ ಟ್ವೀಟ್ ಇದೆ.
ಆದರೆ, ಟ್ವೀಟ್ ನ ಸ್ಕ್ರೀನ್ ಶಾಟ್ ಪರಿಶೀಲಿಸಿದಾಗ, ಅದೊಂದು ಎಡಿಟ್ ಮಾಡಿರುವ ಟ್ವೀಟ್ ಎನ್ನುವುದು ತಿಳಿದುಬರುತ್ತದೆ. ನಿಜವಾಗಿ, ರಾಹುಲ್ ಗಾಂಧಿಯವರು, "ಯುವ ಮತ್ತು ಪ್ರತಿಭಾವಂತ ನಟ ಸುಶಾಂತ್ ಸಿಂಗ್ ಸಾವಿನ ಸುದ್ಧಿ ಕೇಳಿ ಬೇಸರ ಗೊಂಡಿದ್ದೇವೆ." ಎಂದು ಟ್ವೀಟ್ ಮಾಡಿದ್ದರು. ಆದರೆ ಯಾರೋ ಕಿಡಿಗೇಡಿಗಳು ಅದನ್ನು ತಿರುಚಿ, ಕ್ರಿಕೆಟಿಗ ಎಂದು ಬದಲಾಯಿಸಿದ್ದಾರೆ.