ಬಾಲಿವುಡ್ ನಟ ಸಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆಗೆ ಶರಣಾಗಿ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದರೂ, ಅವರ ಅಭಿಮಾನಿಗಳೂ ಇನ್ನೂ ಅವರ ನೆನಪಲ್ಲೇ ದುಃಖಿತರಾಗಿದ್ದಾರೆ. ಟ್ವಿಟ್ಟರ್ ಮೂಲಕ ಸುಶಾಂತ್ ಸಾವಿಗೆ ನ್ಯಾಯ ಒದಗಿಸಿ ಎಂದು ಎಷ್ಟೋ ದಿನದ ವರೆಗೆ ಪ್ರದಾನಿ ನರೇಂದ್ರ ಮೋದಿಯವರಿಗೂ ಮನವಿ ಮಾಡಿದ್ದರು.
ಇವೆಲ್ಲದರ ನಡುವೆ, ಸುಶಾಂತ್ ಅಭಿನಯದ ಕೊನೆಯ ಚಿತ್ರ 'ದಿಲ್ ಬೆಚಾರ' ಬಿಡುಗಡೆಗೆ ರೆಡಿಯಾಗಿದ್ದು, ಡಿಸ್ನಿ ಹಾಟ್ ಸ್ಟಾರ್ ಮೂಲಕ ಎಲ್ಲರ ಮೊಬೈಲ್ ಮತ್ತು ಟಿವಿ ಗೆ ಬರಲಿದೆ. ಇನ್ನೊಂದು ವಿಶೇಷ ಏನೆಂದರೆ, ಈ ಚಿತ್ರನೋಡಲು ನೀವು ಹಣ ಪಾವತಿಸುವ ಅವಶ್ಯಕಥೆ ಇಲ್ಲ. ಹಾಟ್ ಸ್ಟಾರ್ ಆಪ್ ಡೌನ್ಲೋಡ್ ಮಾಡಿ ಉಚಿತವಾಗಿ ನೋಡಬಹುದು.
ಇನ್ನು, ಇವತ್ತು ಈ ಚಿತ್ರದ ಟ್ರೇಲರ್ ಯೂಟ್ಯೂಬ್ ಮೂಲಕ ಬಿಡುಗಡೆಯಾಗಿದ್ದು, ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುವುದರ ಮೂಲಕ ಅಭಿಮಾನಿಗಳು ಸುಶಾಂತ್ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.
Tags:
Entertainment