ಸುಶಾಂತ್ ಸಿಂಗ್-ಗೆ "ಅಬ್ಬಾ! ನೀನು ಎಷ್ಟೊಂದು ಪ್ರಶ್ನೆ ಕೇಳುತ್ತೀಯ?" ಎಂದ ಮಹೇಂದ್ರ ಸಿಂಗ್ ಧೋನಿ

og:image
ಇವತ್ತು ಭಾರತದ ಕೂಲ್ ಕಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಹುಟ್ಟಿದ ಹಬ್ಬ. ಸುಶಾಂತ್ ಸಿಂಗ್ ರಾಜಪೂತ್ ಅವರು ದೋನಿಯವರ ಆತ್ಮಕಥೆ ಆದಾರಿತ ಚಿತ್ರದಲ್ಲಿ ಅಭಿನಯಿಸಿದ್ದು, ಅ ಚಿತ್ರದ ಬಿಡುಗಡೆ ಸಂಧರ್ಬದಲ್ಲಿ ನಡೆದ ಕೆಲವು ಘಟನೆಗಳನ್ನು ಇಲ್ಲಿ ನೆನಪಿಸೋಣ. 

ಚಿತ್ರದ ಟ್ರೈಲರ್ ಲಾಂಚ್‌ನಲ್ಲಿ ಸುಶಾಂತ್ ಮತ್ತು ಧೋನಿ ವೇದಿಕೆಯನ್ನು ಹಂಚಿಕೊಂಡಿದ್ದರು. ಮಾಧ್ಯಮ ಮಿತ್ರರು ಧೋನಿಯವರ ಬಳಿ, ಅವರ ಜೀವನವು ಪರದೆಯ ಮೇಲೆ ತೆರೆದುಕೊಳ್ಳುವುದನ್ನು ನೋಡಲು ಆತಂಕಕ್ಕೊಳಗಾಗಿದ್ದೀರಾ ಎಂದು ಕೇಳಿದಾಗ, ಧೋನಿ, “ಸುಶಾಂತ್ ಹೆಚ್ಚು ಆತಂಕಗೊಂಡಿರಬೇಕು, ಏಕೆಂದರೆ ಅವನು ನನ್ನ ಒಳಗೆ ನಾನು ಏನನ್ನು ಅನುಭವಿಸುತ್ತಿದ್ದೇನೆ ಎಂಬುದನ್ನು ತೋರಿಸುವುದು ಮತ್ತು ಪ್ರೇಕ್ಷಕರು ಅವನನ್ನು ನಂಬುವಂತೆ ಮಾಡುವುದು ತುಂಬಾ ಕಷ್ಟದ ಕೆಲಸ. ಅದನ್ನು ಅವನು ಚೆನ್ನಾಗಿ ಮಾಡಿದ್ದಾನೆ.  ಸುಶಾಂತ್ ಅವರು,  ಚಿತ್ರ ನೋಡುವ ಸಮಯದಲ್ಲಿ ನಾನು ಹೇಗೆ ಭಾವಿಸಿದೆ, ಈಗ ನಾನು ಹೇಗೆ ಭಾವಿಸುತ್ತೇನೆ ಎಂದು ಅವರು ನನ್ನನ್ನು ಕೇಳುತ್ತಿದ್ದರು. ನಾನು ಅವನಿಗೆ, ನೀವು ಎಷ್ಟೊಂದು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೀರಿ? ಎಂದು ಕೇಳಿದ್ದೆ. ಆದರೆ ವಾಸ್ತವದಲ್ಲಿ, ನಾವು ಒಟ್ಟಿಗೆ ಕಡಿಮೆ ಸಮಯವನ್ನು ಕಳೆದಿದ್ದೇವೆ. ಎಂದು ಧೋನಿ ಅಂದಿದ್ದರು. 

ಧೋನಿ ಪ್ರಕಾರ, "ಆದರೆ ಅವರು ಚಿತ್ರದಲ್ಲಿ ತುಂಬಾ ರೀತಿಯ ಪ್ರಯತ್ನ ಮಾಡಿದ್ದಾರೆ, ಏಕೆಂದರೆ ಚಿತ್ರದ ಅಗತ್ಯ ಭಾಗವೆಂದರೆ ಕ್ರಿಕೆಟ್. ಖಂಡಿತ, ನಾವೆಲ್ಲರೂ ಕ್ರಿಕೆಟ್ ಆಡುತ್ತೇವೆ ಆದರೆ ನೀವು ಅದನ್ನು ಪರದೆಯ ಮೇಲೆ ತೋರಿಸಬೇಕಾದಾಗ, ನೀವು ಕೆಲವು ವಿಷಯಗಳನ್ನು ಕಲಿಯಬೇಕು, ವಿಶೇಷವಾಗಿ ಕ್ರಿಕೆಟ್ ಹೊಡೆತಗಳು. ಅವರು ಚಲನಚಿತ್ರದಲ್ಲಿ ಹೆಲಿಕಾಪ್ಟರ್ ಶಾಟ್ ಅನ್ನು ಹೊಡೆದಿದ್ದಾರೆ ಮತ್ತು ಅದು ನಿಖರವಾಗಿ ನಾನು ಆಡೋದನ್ನು ಕಾಪಿ ಮಾಡಿದ್ದಾರೆ.  ಆದ್ದರಿಂದ ಸುಶಾಂತ್ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ”

ಚಿತ್ರದ ಶೂಟಿಂಗ್ ಸಮಯದಲ್ಲಿ ಸುಶಾಂತ್ ಧೋನಿಗೆ ಹತ್ತಿರವಾದರು. ಅವರ ಬಗ್ಗೆ ಅಪಾರ ಗೌರವ ಹೊಂದಿದ್ದ ಅವರು,  ಮೊದಲು ಭಾರತದ ಮಾಜಿ ನಾಯಕನೊಂದಿಗೆ ಸಂಪರ್ಕದಲ್ಲಿದ್ದರು. ಹೀಗಾಗಿ, ಧೋನಿಯ ವ್ಯವಸ್ಥಾಪಕ ಅರುಣ್ ಪಾಂಡೆ, ಸುಶಾಂತ್ ನಿಧನರಾದ ನಂತರ 38 ವರ್ಷದ ಧೋನಿಯ ಮನಸ್ಥಿತಿಯನ್ನು ಬಹಿರಂಗಪಡಿಸಿದರು.

ಪಾಂಡೆಯವರು ಮಾಧ್ಯಮದ ಜೊತೆ ಮಾತನಾಡುತ್ತಾ, "ಏನಾಯಿತು ಎಂದು ನಾವು ಸಹ ನಂಬಲು ಸಾಧ್ಯವಿಲ್ಲ. ನನ್ನ ದುಃಖವನ್ನು ವ್ಯಕ್ತಪಡಿಸುವ ಸ್ಥಿತಿಯಲ್ಲಿ ನಾನು ಇಲ್ಲ. ಮಹೀ ಕೂಡ ತುಂಬಾ ದುಃಖಿತನಾಗಿದ್ದಾನೆ. ಇದೊಂದು ದುರಂತ ಘಟನೆ" ಎಂದು ಹೇಳಿದರು. English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post