ರಾಮ ರಾಜ್ಯದ ಕನಸು ತೋರಿಸಿ ಗೂಂಡಾ ರಾಜ್ಯ ಕೊಟ್ಟ ಯೋಗಿ - ರಾಹುಲ್ ಟೀಕೆ

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

og:image

ದೆಹಲಿ ಸಮೀಪದ ಗಾಜಿಯಾಬಾದ್‌ನಲ್ಲಿ ಪತ್ರಕರ್ತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ್ದಾರೆ.

ಗಾಜಿಯಾಬಾದ್‌ನಲ್ಲಿ ತನ್ನ ಹೆಣ್ಣುಮಕ್ಕಳ ಮುಂದೆ ಹತ್ಯೆಗೊಳಗಾದ ವಿಕ್ರಮ್ ಜೋಶಿ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ ರಾಹುಲ್ ಗಾಂಧಿ, "ಪತ್ರಕರ್ತ ವಿಕ್ರಮ್ ಜೋಶಿ ತಮ್ಮ ಸಂಬಂಧಿಯ ಕಿರುಕುಳವನ್ನು ವಿರೋಧಿಸಿದ್ದಕ್ಕಾಗಿ ಕೊಲ್ಲಲ್ಪಟ್ಟರು. ದುಃಖಿತ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದು ಹೇಳಿದರು.

ಯುಪಿ ಸರ್ಕಾರವನ್ನು ಟೀಕೆ ಮಾಡಿದ್ದ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ, "ಅವರು [ಯುಪಿ ಸರ್ಕಾರ] ರಾಮ  ರಾಜ್ಯ ದ ಭರವಸೆ ನೀಡಿದ್ದರು, ಬದಲಿಗೆ ಗುಂಡಾ ರಾಜ್ ನೀಡಿದ್ದಾರೆ."

ಗಾಜಿಯಾಬಾದ್ ಮೂಲದ ಪತ್ರಕರ್ತ ವಿಕ್ರಮ್ ಜೋಶಿಯವರನ್ನು ತಲೆಗೆ ಗುಂಡು ಹಾರಿಸುವ ಮುಖಾಂತರ ಸೋಮವಾರ ಹಲ್ಲೆಕೋರು ಬುಧವಾರ ಮುಂಜಾನೆ ಹತ್ಯೆ ಮಾಡಿದ್ದಾರೆ. 

ವಿಕ್ರಮ್ ಜೋಶಿ ಜುಲೈ 16 ರಂದು ತನ್ನ ಸೊಸೆಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಸೋಮವಾರ ರಾತ್ರಿ 10.30 ರ ಸುಮಾರಿಗೆ ವಿಜಯ್ ನಗರ ಪ್ರದೇಶದ ತನ್ನ ಮನೆಯ ಬಳಿ ಗುಂಡು ಹಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೋಶಿ ಗಾಜಿಯಾಬಾದ್‌ನಲ್ಲಿ ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಪೊಲೀಸರನ್ನು ಸಹ ಅಮಾನತುಗೊಳಿಸಲಾಗಿದೆ.
'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ  ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.  

ಇದನ್ನೂ ಓದಿ :


English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

English Summary: - Nera News - Kannada breaking news fastest growing online News website delivers the Top News, Cinema News, Sports, Cricket, Karnataka, Politics, Photo Gallery, and Videos in Kannada Live news Channel, Kannada breaking news

Latest Kannada Breaking News