‘I Quit’ ಎಂದು ಪೋಸ್ಟ್ ಮಾಡಿದ ಬಿಗ್ಗ್ ಬಾಸ್ ಜಯಶ್ರೀ ! ಆತಂಕ ಸೃಷ್ಟಿಸಿದ ಫೇಸ್ ಬುಕ್ ಪೋಸ್ಟ್

og:image

ಜಯಶ್ರೀ ರಾಮಯ್ಯ  ಇಂದು ಬೆಳಿಗ್ಗೆ, "ನಾನು ತೊರೆಯುತ್ತಿದ್ದೇನೆ, ಈ ಕೆಟ್ಟ ಪ್ರಪಂಚ ಮತ್ತು ಖಿನ್ನತೆಗೆ ಬಾಯ್ " ಎಂದು ಫೇಸ್-ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.  ಬಿಗ್ ಬಾಸ್ ಸೀಸನ್ 3 ರ ಸ್ಪರ್ದಿ ಹಾಗೂ ಕಿರುತೆರೆ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ಟಿವಿ 9 ಕೂಡಾ ವರದಿ ಮಾಡಿತ್ತು. 



 ಪೋಸ್ಟ್ಗೆ ರಿಪ್ಲೈ ಮಾಡಿರುವ ನಟು ಅದ್ವಿತಿ ಶೆಟ್ಟಿ, "ಜಯಶ್ರೀ ಅವರು ಆಸ್ಪತ್ರೆ ಹತ್ತಿರ ಇದ್ದಾರೆ, ಚಿಕಿತ್ಸೆಗೆ ನೆರವಾಗುತ್ತಾರೆ. ಇದನ್ನು ಆದಷ್ಟೂ ಬೇಗ ಬಗೆಹರಿಸುತ್ತೇವೆ." ಎಂದು ಬರೆದಿದ್ದಾರೆ. 



ಜಯಶ್ರೀ ರಾಮಯ್ಯ ಅವರು ಬಿಗ್ಗ್ ಬಾಸ್ ಸೀಸನ್ 3 ರ ಸ್ಪರ್ದಿಯಾಗಿದ್ದು, ಕನ್ನಡ್ ಗೊತ್ತಿಲ್ಲಾ, ಉಪ್ಪು ಹುಳಿ ಖಾರ ಚಿತ್ರಗಳಲ್ಲಿ ನಟಿಸಿದ್ದರು. 

ಬಿಗ್ ಬಾಸ್ ಸೀಸನ್ 3ರ ಸ್ಪರ್ಧಿಯಾಗಿದ್ದ ಜಯಶ್ರೀ, ಖಿನ್ನತೆಯಿಂದ ನೊಂದಿದ್ದರು ಎನ್ನಲಾಗಿದೆ. ಕಳೆದ ವರ್ಷ ಸೋದರಮಾವ ಕಿರುಕುಳ ನೀಡ್ತಿದ್ದಾರೆ ಅಂತಾ ಜಯಶ್ರೀ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದರು. ಆ ಪ್ರಕರಣ ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿತ್ತು. 

ಅದರಿಂದಾಗಿ ಇಂದು ಜಯಶ್ರೀ ಮಾಡಿರುವ ಪೋಸ್ಟ್​ ನೋಡಿ ಎಲ್ಲರೂ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸದ್ಯ ಜಯಶ್ರೀ ಅವರ ನಂಬರ್ ಕೂಡ ಸ್ವಿಚ್ ಆಫ್ ಆಗಿದ್ದು, ಆತಂಕ ಹೆಚ್ಚು ಮಾಡಿದೆ. 

ಹಲವಾರು ಅಭಿಮಾನಿಗಳು ಫೇಸ್ ಬುಕ್ ಪೋಸ್ಟ್ಗೆ ರಿಪ್ಲೈ ಮಾಡಿದ್ದು, ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ. 


ಇದೀಗ ಬಂದ ಸುದ್ಧಿ;
"ನಾನು ಆರೋಗ್ಯವಾಗಿದ್ದೀನಿ, ಲವ್ ಯೂ ಆಲ್" ಎಂದು ಪೋಸ್ಟ್ ಮಾಡಿ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ. 



English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ  ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.  

Previous Post Next Post