ಚೀನಾದ ಪ್ರಧಾನ ಸಂಪಾದಕನ ಟ್ವೀಟ್-ಗೆ ಖಡಕ್ ಚಾಟಿ ಬೀಸಿದ ಸೆಲೀನಾ ಜೇಟ್ಲಿ

og:image
ಭಾರತ ಇತ್ತೀಚೆಗೆ ಚೈನಾದ ಆಪ್-ಗಳಿಗೆ ನಿಷೇಧ ಹೇರಿದ ನಂತರ, ಚೀನಾದ ಕಂಪನಿಗಳು ಕೋಟ್ಯಾಂತರ ರೂಪಾಯಿಗಳನ್ನು ಕಳೆದುದರ ಬಗ್ಗೆ ವರದಿಯಾಗಿತ್ತು. 

ಆದರೆ ಎಲ್ಲದರ ಮಧ್ಯೆ ಗಮನ ಸೆಳೆದಿದ್ದು, ಚೀನಾದ ಮಾಧ್ಯಮ ಪ್ರತಿನಿಧಿ ಮಾಡಿದ್ದ ಟ್ವೀಟ್ ಮತ್ತು ಅದಕ್ಕೆ ಬಾಲಿವುಡ್ ನಟಿಯೊಬ್ಬರು ಕೊಟ್ಟಿರುವ ಉತ್ತರ. 

ಹು ಕ್ಸಿಜಿನ್ ಎಂಬ 'ಗ್ಲೋಬಲ್ ಟೈಮ್' ನ ಚೀನೀ ಮತ್ತು ಇಂಗ್ಲಿಷ್ ಆವೃತ್ತಿಗಳ ಪ್ರಧಾನ ಸಂಪಾದಕರೊಬ್ಬನು ಭಾರತ ಚೈನೀಸ್ ಆಪ್ಗಗಳನ್ನು ಬ್ಯಾನ್ ಮಾಡಿದಕ್ಕೆ ಭಾರತವನ್ನು ಲೇವಡಿ ಮಾಡಿದ್ದರು. ಅವನ ಪ್ರಕಾರ "ಚೀನಾದ ಜನರು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಲು ಬಯಸಿದ್ದರೂ ಸಹ, ಭಾರತೀಯ ವಸ್ತುಗಳನ್ನು ಹುಡುಕಲು ಸಾಧ್ಯವಿಲ್ಲ. ಭಾರತೀಯ ಸ್ನೇಹಿತರೇ, ನೀವು ರಾಷ್ಟ್ರೀಯತೆಗಿಂತ ಮುಖ್ಯವಾದ ಕೆಲವು ವಿಷಯಗಳನ್ನು ಹೊಂದಿರಬೇಕು." ಎಂದು ಟ್ವೀಟ್ ಮಾಡಿದ್ದನು. 


ಇದನ್ನು ಹಲವಾರು ವಿರೋಧಿಸಿದ್ದರು ಮತ್ತು ಸರಿಯಾಗಿ ಉತ್ತರ ಕೊಟ್ಟಿದ್ದರು. ಆದರೆ ಬಾಲಿವುಡ್ ಚೆಲುವೆ ಸೆಲೀನಾ ಜೇಟ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದು, ಹು ಕ್ಸಿಜಿನ್ ಗೆ ಸರಿಯಾದ ಉತ್ತರವನ್ನೇ ಕೊಟ್ಟಿದ್ದಾರೆ. 

ಖಡಕ್ ಆಗಿ ಉತ್ತರಿಸಿರುವ ಸೆಲೀನಾ ಜೇಟ್ಲಿ "ಸರ್, ನೀವು ನಮ್ಮನ್ನು “ಸ್ನೇಹಿತ” ಎಂದು ಕರೆದಿದ್ದೀರಾ? ಸ್ನೇಹಿತರು ಸ್ನೇಹಿತರನ್ನು ಯಾವತ್ತೂ ಕೊಲ್ಲುವುದಿಲ್ಲ! ನಾವು ನಮ್ಮ ದೇಶಕ್ಕಾಗಿ ಸಾಯಲು ಸಿದ್ಧರಿದ್ದೇವೆ ಮತ್ತು ನೀವು ದೇಶಕ್ಕಾಗಿ ಕೊಲ್ಲುವಿರಿ. ನಾವು ಜಾಗತೀಕರಣವನ್ನು ಆರಿಸಿದ್ದೇವೆ ನೀವು ಯುದ್ಧವನ್ನು ಆರಿಸಿದ್ದೀರಿ ಮತ್ತು ಈಗ ನಮ್ಮ ಪ್ರತಿಯೊಬ್ಬ ಹುತಾತ್ಮ ಪುರುಷರು ನಿಮಗೆ ಶತಕೋಟಿ ವೆಚ್ಚವಾಗಲಿದೆ. ಹೇಗಾದರೂ ಶಾಂತಿಯಾಗಿರಿ !!" ಎಂದು ಟ್ವೀಟ್ ಮಾಡಿದ್ದಾರೆ. 


ಅಷ್ಟಕ್ಕೇ ಸುಮ್ಮನಾಗದ ಸೆಲೀನಾ "ಇನ್ನೊಂದು ವಿಷಯ ಸರ್, ಇದು ನಿಮಗೆ ಬೇಸರದ 'ಬಹಿಷ್ಕಾರದ ಸಂದಿಗ್ಧತೆ'ಯನ್ನು ಉಂಟುಮಾಡುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ನೀವು ಒಂದು ಪ್ರಮುಖ ಭಾರತೀಯ ಉತ್ಪನ್ನ / ರಫ್ತು ಅನ್ನು ಮರೆತಿದ್ದೀರಾ? ಶತಮಾನಗಳಿಂದ ನಿಮ್ಮ ಸಂಸ್ಕೃತಿಯನ್ನು ರೂಪಿಸಿದ ಯಾವುದನ್ನಾದರೂ ಮರೆತಿದ್ದೀರಿ ಎಂದು ನಾನು ನಿಮಗೆ ನೆನಪಿಸುತ್ತೇನೆ. ಇದನ್ನು ಬೌದ್ಧದರ್ಮ ಎಂದು ಕರೆಯಲಾಗುತ್ತದೆ. (ಈಗ ನೀವು ಆಲೋಚಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು)" ಎಂದು ಚಾಟಿ ಬೀಸಿದ್ದಾರೆ. .


ಗಮನಿಸಬೇಕಾದ ಅಂಶವೆಂದರೆ, ಚೀನಾದಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಬೌದ್ಧ ಧರ್ಮೀಯರನ್ನು ಹೊಂದಿದ್ದು, ಬೌದ್ಧ ಧರ್ಮವು ಇಲ್ಲಿನ ಅತಿ ದೊಡ್ಡ ಸಂಘಟಿತ ಧರ್ಮಶ್ರದ್ಧೆಯಾಗಿದೆ. 

English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post