ಸುಮೇದ್ ಮುದ್ಗಾಲ್ಕರ್ ಮತ್ತು ಮಲ್ಲಿಕಾ ಸಿಂಗ್ ಕ್ರಮವಾಗಿ 'ಕೃಷ್ಣನ್' ಮತ್ತು 'ರಾಧಾ' ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಧಾರವಾಹಿ ಕನ್ನಡದಲ್ಲೂ ಮೇ 18ರಿಂದ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ರಾಧಾ ಕೃಷ್ಣ' ಧಾರಾವಾಹಿ ಪ್ರಸಾರವಾಗುತ್ತಿದೆ.
ಅಂದ ಹಾಗೆ ಹಲವಾರು ವೀಕ್ಷಕರು ರಾಧೆಯ ಮುಗ್ಧತೆಗೆ ಮಾರು ಹೋಗಿದ್ದು, ಅವರ ಕುರಿತು ಗೋಗಲ್ನಲ್ಲಿ ಸರ್ಚ್ ಮಾಡಿದ್ದಾರೆ.
ಮುಗ್ದ ಮುಖದ ರಾಧೆಯಾಗಿ ಬಣ್ಣಹಚ್ಚಿದ್ದು ಕಾಶ್ಮೀರದ ಕುವರಿ ಮಲ್ಲಿಕಾ ಸಿಂಗ್. ಅಂದ ಹಾಗೆ ಮಲ್ಲಿಕಾಳಿಗೆ ಸೀರಿಯಲ್ ಜಗತ್ತು ಪ್ರಾರಂಭವಾಗಿದ್ದೇ ರಾಧಾಕೃಷ್ಣ ಧಾರಾವಹಿಯ ಮೂಲಕ. ಇದು ಆಕೆಯ ಮೊದಲ ಧಾರಾವಾಹಿ.
ಮೂಲತಃ ಕಾಶ್ಮೀರದ ಈ ಚೆಲುವೆ, 10ನೇ ತರಗತಿ ಓದುತ್ತಿರುವಾಗಲೆ ರಾಧಾಕೃಷ್ಣ ಧಾರಾವಾಹಿಗೆ ಆಡಿಷನ್ ನೀಡಿದ್ದಾರೆ. ಆಡಿಷನ್ ನೀಡಿ ಎರಡುವರೆ ವರ್ಷದ ನಂತರ ಈ ಧಾರಾವಾಹಿ ಪ್ರಾರಂಭವಾಗಿದೆ. ಧಾರಾವಾಹಿ ಮಾಡುವಾಗ ಮಲ್ಲಿಕಾಗೆ ಇನ್ನೂ 18 ವರ್ಷ. ಈಗ ಧಾರಾವಾಹಿಗಾಗಿಯೆ ವಾಸಸ್ಥಾನ ಬದಲಿಸಿರುವ ಮಲ್ಲಿಕಾ, ಕಾಶ್ಮೀರದಿಂದ ಮುಂಬೈಗೆ ಬಂದು ನೆಲೆಸಿದ್ದಾರೆ. ಅಂದರೆ 2018ರಲ್ಲಿ ರಾಧಾಕೃಷ್ಣ ಧಾರಾವಾಹಿ ಪ್ರಾರಂಭವಾಗಿದೆ, ಇತ್ತೀಚೆಗಷ್ಟೇ ಕನ್ನಡದಲ್ಲಿ ಪ್ರಸಾರಗೊಳ್ಳಲು ಪ್ರಾರಂಭವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಆಗಿರುವ ಮಲ್ಲಿಕಾ ಸಿಂಗ್ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಾಧೆಯಾಗಿ ಯುವಕರ ಮನದಲ್ಲಿ ಜಾಗಪಡೆದಿರುವ ಮುಗ್ಧ ಮಲ್ಲಿಕಾ ಅವರ ಫೋಟೋಗಳು ಮಾತ್ರ ಅಭಿಮಾನಿಗಳನ್ನು ಅಚ್ಚರಿ ಪಡುವಂತೆ ಮಾಡುತ್ತಿವೆ. ಫೋಟೊಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ :

