ಕೊನೆಗೂ ಗುಡ್ ನ್ಯೂಸ್ - ಕೊರೊನಾ ಲಸಿಕೆ ಕಂಡು ಹಿಡಿಯುವಲ್ಲಿ ಯಶಸ್ಸಿನತ್ತ ಆಕ್ಸ್ಫರ್ಡ್ ಯುನಿವರ್ಸಿಟಿ!
ಕರೋನಾ ವೈರಸ್ ಲಸಿಕೆ ತಯಾರಿಸುವಲ್ಲಿ ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಯಶಸ್ಸನ್ನು ಸಾಧಿಸಲು ಹತ್ತಿರದಲ್ಲಿದೆ ಎಂದು ವರದಿಗಳು ತಿಳಿಸುತ್ತಿವೆ. ಆಕ್ಸ್‌ಫರ್ಡ್ ಲಸಿಕೆ ಪ್ರಯೋಗವು…
By Admin
ಕರೋನಾ ವೈರಸ್ ಲಸಿಕೆ ತಯಾರಿಸುವಲ್ಲಿ ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಯಶಸ್ಸನ್ನು ಸಾಧಿಸಲು ಹತ್ತಿರದಲ್ಲಿದೆ ಎಂದು ವರದಿಗಳು ತಿಳಿಸುತ್ತಿವೆ. ಆಕ್ಸ್‌ಫರ್ಡ್ ಲಸಿಕೆ ಪ್ರಯೋಗವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಾಬೀತಾಗಿದೆ ಹಾಗೂ ಅದು ಮಾನವನ ಉಪಯೋಗಕ್ಕೆ ಸುರಕ್ಷಿತ ವಾಗಿವೆ ಎನ್ನಲಾಗಿದೆ. ಫಲಿತಾಂಶಗಳು ಬಹಳ ಉತ್ತೇಜನಕಾರಿಯಾಗಿದ್ದವು ಎಂದು ವರದಿಗಳು ತಿಳಿಸಿವೆ.
ಪರೀಕ್ಷೆಯಲ್ಲಿ ಸುಮಾರು 1,077 ಜನರು ಭಾಗವಹಿಸಿದ್ದರು ಮತ್ತು ಲಸಿಕೆ ನೀಡಿದವರಲ್ಲಿ ಪ್ರತಿಕಾಯಗಳು ಮತ್ತು ಕರೋನಾ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯವಿರುವ ಬಿಳಿ ರಕ್ತ ಕಣಗಳಿವೆ ಎಂದು ತಿಳಿದುಬಂದಿದೆ.
ಇನ್ನೂ ದೊಡ್ಡ ಪ್ರಮಾಣದ ಪ್ರಯೋಗ ನಡೆಯಬೇಕಿದೆ. ಬ್ರಿಟನ್ ಈಗಾಗಲೇ 100 ಮಿಲಿಯನ್ ಡೋಸ್ ಲಸಿಕೆಯನ್ನು ಪಡೆದುಕೊಂಡಿದೆ. ಈ ಲಸಿಕೆಯನ್ನು ಭಾರತದಲ್ಲಿಯೂ ಉತ್ಪಾದಿಸಲಾಗುತ್ತಿದೆ. ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆಕ್ಸ್‌ಫರ್ಡ್ ಲಸಿಕೆ ತಯಾರಿಸುವ ಜವಾಬ್ದಾರಿಯನ್ನು ಹೊಂದಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾದ ಲಸಿಕೆ ಪ್ರಸ್ತುತ ಕರೋನಾ ವೈರಸ್ ಲಸಿಕೆ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದೆ. ಅನೇಕ ಲಸಿಕೆಗಳು ತಮ್ಮ ಅಂತಿಮ ಹಂತ ಅಥವಾ ಸುಧಾರಿತ ಹಂತವನ್ನು ತಲುಪುತ್ತಿದ್ದರೆ, ಆಕ್ಸ್‌ಫರ್ಡ್ ಲಸಿಕೆ ಈಗಾಗಲೇ ಈ ಹಂತದಲ್ಲಿದೆ. ಎಲ್ಲವೂ ಸರಿಯಾಗಿ ನಡೆದರೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಸಿದ್ಧಪಡಿಸಿದ ಈ ಲಸಿಕೆ ಸೆಪ್ಟೆಂಬರ್ ವೇಳೆಗೆ ಜನರಿಗೆ ಲಭ್ಯವಾಗುತ್ತದೆ.
English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.
Social media users are angry because international news outlets repeatedly chose images of cyclists, mopeds and ordinary roadside scenes for their coverage of the 2026 BRICS Summit in New Delhi. No one is claiming that…
Pickaxe Mountain is the informal name for Kuh-e Kolang Gaz La, a heavily fortified underground complex about 2 kilometres from Iran's Natanz uranium-enrichment site. Donald Trump warned that the United States could…
The Iran US war may have reached a new diplomatic opening after Iranian President Masoud Pezeshkian said it was better to end the conflict now while Tehran remained in a position of strength and dignity. His statement…