
ಮಂಗಳೂರಿನ ಟ್ರೋಲ್ ಪೇಜ್ಗಳು ಇವತ್ತು ಬೆಳಿಗ್ಗೆಯಿಂದ 'ಚೆಂಡೆದ ಪೊಣ್ಣು' ಎಂಬ ಹೆಸರಿನಲ್ಲಿ ಟ್ರೋಲ್ ಮಾಡಲು ಪ್ರಾರಂಭಿಸಿದಾಗ, ಎಲ್ಲಾ ನೆಟ್ಟಿಗರಲ್ಲಿ ಈ ಚೆಂಡೆದ ಪೊಣ್ಣು ಯಾರು? ಏನು ವಿಷಯ ಎಂಬ ಕುತೂಹಲ ಉಂಟಾಗಿತ್ತು. ಟ್ರೋಲ್ ಮಾಡಿರುವ ಪೇಜ್ಗಳಲ್ಲೇ ಜನರು ಆ ಆಡಿಯೋ ನಮಗೂ ಕಳುಹಿಸಿ ಎಂದು ಆಗ್ರಹಿಸಿದರೆ, ಇನ್ನು ಕೆಲವರು ಟ್ರೋಲ್ ಏನೆಂದೇ ಅರ್ಥವಾಗದೆ ತಲೆ ಕೆರೆದುಕೊಂಡರು.
ಅಸಲಿಯಾಗಿ, ಆ ಆಡಿಯೋ ಕ್ಲಿಪ್ ಮಂಗಳೂರು ಮೂಲದ ಸಾಂಪ್ರದಾಯಿಕ ಚೆಂಡೆ ಗ್ರೂಪ್ ಗೆ ಸೇರಿದ ಹುಡುಗಿ ತನ್ನ ಗೆಳೆಯನೊಂದಿಗೆ ಮಾತನಾಡಿರುವ ಆಡಿಯೋ ಕ್ಲಿಪ್ ಆಗಿದ್ದು, ಅದನ್ನು ಅವಳ ಜೊತೆ ಮಾತನಾಡಿರುವ ವ್ಯಕ್ತಿಯೇ ಲೀಕ್ ಮಾಡಿರುವ ಸಾಧ್ಯತೆಗಳಿವೆ.
ಇನ್ನು ತನ್ನ ಗೆಳೆಯನ ಬಗ್ಗೆ ಮಾತನಾಡಿರುವ ಯುವತಿ, ತನ್ನ ಚೆಂಡೆ ಗ್ರೂಪಿನಲ್ಲಿ ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದಾಳೆ. ಚೆಂಡೆ ಗ್ರೂಪಿನ ಅಂಕಲ್ ಒಬ್ಬರು ತನ್ನ ಜೊತೆ ಅನುಚಿತವಾಗಿ ವರ್ತಿಸ್ಸಿದ್ದು, ತನ್ನ ಮೇಲೆ ಲೈಂಗಿಕ ದೌರ್ಜನ್ಯದಿಂದಾಗಿ ಚೆಂಡೆ ಗ್ರೂಪನ್ನು ಬಿಟ್ಟಿರುವುದಾಗಿ ವಿವರಿಸಿದ್ದಾಳೆ.
ಅದರೊಂದಿಗೆ ತಾನು ಬೇರೆ ಬೇರೆ ಹುಡುಗರ ಜೊತೆ ಕೂಡಾ ಲೈಂಗಿಕವಾಗಿ ಬೆರೆತಿರುವುದನ್ನ ಅವಳು ವಿವರಿಸುತ್ತಿದ್ದು, ಸಣ್ಣ ವಯಸ್ಸಿನಲ್ಲೇ ಲೈಂಗಿಕವಾಗಿ ದುರುಪಯೋಗ ಪಟ್ಟು, ತಾನು ಮಾಡುತ್ತಿರುವುದು ತಪ್ಪೆಂದು ಅರಿವಿಲ್ಲದೇ ಇರುವ ಯುವತಿ ತಾನು ಮಾತನಾಡುತ್ತಿರುವ ವ್ಯಕ್ತಿಯನ್ನು ನಂಬಿ ಎಲ್ಲಾ ವಿವರಗಳನ್ನು ನೀಡಿದ್ದಾಳೆ.
ಏನೇ ಆಗಲೀ, ಟ್ರೋಲ್ ಮಾಡಿರುವ ಆಡಿಯೋದಲ್ಲಿ ಇರುವ ಹುಡುಗಿಯ ಮೇಲೆ "ಅಂಕಲ್" ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ. ಮಂಗಳೂರಿನಲ್ಲಿರುವ ಮಹಿಳಾ ಸಂಘಟನೆಗಳು ಈ ಹುಡುಗಿಯನ್ನು ಪತ್ತೆ ಮಾಡಿ, ಅವಳ ಮೇಲಾದ ಅನ್ಯಾಯಕ್ಕೆ ನ್ಯಾಯಒದಗಿಸ ಬೇಕಾಗಿದೆ. ಮತ್ತು ದಾರಿ ತಪ್ಪಿ ಏನದಾರೂ ಆನಾಹುತ ಮಾಡಿಕೊಳ್ಳುವ ಮೊದಲೇ ಕ್ರಮ ಕೈಗೊಂಡರೆ ಆ ಹುಡುಗಿಯ ರಕ್ಷಣೆಯಾಗಬಹುದು.