ವಿಜಯಕುಮಾರ್ ಕೊಡಿಯಾಲ್‌ಬೈಲ್-ರಿಗೆ ಒಲಿದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |

ಮಂಗಳೂರು, ಜನವರಿ 9: ಪ್ರಸಿದ್ಧ ತುಳು ರಂಗಭೂಮಿ ಕಲಾವಿದ, ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ ವಿಜಯಕುಮಾರ್ ಕೊಡಿಯಾಲ್‌ಬೈಲ್-ರಿಗೆ, 2019-20ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕೊಡಿಯಾಲ್‌ಬೈಲ್ ಅವರೊಂದಿಗೆ ಇತರ 24 ಮಂದಿ ಕೂಡಾ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದರು.
ವಿಜಯಕುಮಾರ್ ಕೊಡಿಯಾಲ್‌ಬೈಲ್ ತುಳು ಸಾಹಿತ್ಯ, ನಾಟಕ ರಂಗ ಮತ್ತು ಚಿತ್ರರಂಗದಲ್ಲಿ ಹೆಸರು ಮಾಡಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು ಪಡೆದಿದ್ದಾರೆ. ಈ ನ್ಯೂಸನ್ನು ನಿಮ್ಮ ಫೇಸ್ಬುಕು ಮತ್ತು ಟ್ವಿಟ್ಟರ್ನಲ್ಲಿ ಶೇರ್ ಮಾಡಿ.
ನಾಗೇಂದ್ರ ಶಾ, ಕೆ.ಪಿ.ಪ್ರಕಾಶ್, ಡಾ.ಎಂ.ಬೈರೆಗೌಡ, ಮಂಜುಳ ಮಂಜುನಾಥ್, ಮಾಲೂರು ಸಿದ್ದಪ್ಪ, ಕೆ.ಜಂಬುಜುನಾಥ್, ಸಿದ್ದಲಿಂಗಪ್ಪ ತುಮಕುರು, ಭಾಸ್ಕರ್ ಮಣಿಪಾಲ, ಎಂ.ಎಸ್.ವೇಣುಗೋಪಾಲ್, ಬಿ.ನಗರಾಜ್‌ಗೌಡಾ, ಪಿ.ಶದ್ರಕ್, ಪರಮೇಶುರಹತ್ತೆ ಬಸವರಾಜು ಹೆಸರುರು, ಮಧುಕುಮಾರ ಯು ಹರಿಜನ, ಬಿ.ಎನ್.ಶಶಿಕಲಾ, ಬಿ.ಎಲ್.ರವಿಕುಮಾರ್, ಸಿ.ಎಸ್.ಪಾಟೀಲ್ ಕುಲಕರ್ಣಿ, ಜಾಕಿರ್ ನಡಾಫ್, ಶಾಂತಮ್ಮ ಬಿ ಮಲ್ಲಕಲ್ಲ, ಸನಗಮೇಶ್ ದೇವೇಂದ್ರ ಬಾದಾಮಿ, ಶಶಿಪ್ರಭ ಆರಾಧ್ಯ ಮತ್ತು ಗಣಪತಿ ಬಿ ಹೆಗ್ಡೆ ಇವರೆಲ್ಲಾ 2019-20ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದವರು.
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |