ಪಶ್ಚಿಮ ಬಂಗಾಳದಲ್ಲಿ ದೀದಿ ಕುರ್ಚಿ ಗಟ್ಟಿ, ಅಸ್ಸಾಂ ಬಿಜೆಪಿಗೆ- ಎಕ್ಸಿಟ್ ಪೋಲ್ ರಿಸಲ್ಟ್
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |

ನವದೆಹಲಿ: ಮಮತಾ ಬ್ಯಾನರ್ಜಿಯ ತೃಣಮೂಲ ಬಂಗಾಳದ 294 ಸ್ಥಾನಗಳಲ್ಲಿ 149 ಸ್ಥಾನಗಳನ್ನು ಗೆಲ್ಲಲಿದ್ದು, ಅದರ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿ 116 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಎಂದು ರಾಜ್ಯ ಚುನಾವಣೆಯ ನಂತರ ನಿರ್ಗಮನ ಸಮೀಕ್ಷೆಯಲ್ಲಿ ಹೇಳಿದೆ.
ಅಸ್ಸಾಂನಲ್ಲಿ, ಕಾಂಗ್ರೆಸ್ ನಿರಾಶೆಗೆ ಉಂಟಾಗಲಿದ್ದು, ನಿರ್ಗಮನ ಸಮೀಕ್ಷೆಯ ಪ್ರಕಾರ, ಬಿಜೆಪಿ 126 ಸ್ಥಾನಗಳಲ್ಲಿ 75 ಮತ್ತು ಕಾಂಗ್ರೆಸ್ 50 ಸ್ಥಾನಗಳನ್ನು ಪಡೆಯಲಿದೆ ಎಂದು ವರದಿಮಾಡಲಾಗಿದೆ.
ಆದರೆ ರಿಪಬ್ಲಿಕ್ ಚಾನೆಲ್, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜಯಭೇರಿಗಳಿಸಲಿದೆ ಎಂದು ವರದಿ ಮಾಡಿದೆ.
ಆದಾಗ್ಯೂ, ಮಮತಾ ಬ್ಯಾನರ್ಜಿ ತನ್ನ ಕುರ್ಚಿ ಉಳಿಸಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ, ಕೇರಳದಲ್ಲಿ ಪಿನರಾಯ್ ನೇತ್ರತ್ವದ ಎಡರಂಗ ತನ್ನ ಸೀಟು ಉಳಿಸುವಲ್ಲಿ ಸಫಲವಾಗುವುದು ಖಚಿತವಾಗಿದೆ. ಪುದುಚೆರಿಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಗಳಿವೆ ಎಂದು ಹಲವಾರು ಸಮೀಕ್ಷೆಗಳು ವರದಿ ಮಾಡಿದ್ದರೆ, ತಮಿಳುನಾಡಿನಲ್ಲಿ ಎಲ್ಲರ ನಿರೀಕ್ಷೆಯಂತೆ ಡಿಎಂಕೆ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ.
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |