ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಕೇಂದ್ರದ ವ್ಯಾಕ್ಸಿನ್ ವಿರುದ್ದ ಮಾಡಿರುವ ಕಾರ್ಟೂನುಗಳು ಅವರಿಗೇ ತಿರುಗುಬಾಣವಾದಂತೆ ಕಾಣುತ್ತಿದೆ. ವ್ಯಾಕ್ಸಿನ್ ಅನ್ನು ವೋಟಿಗೋಸ್ಕರ ಬಳಸಿರುವಂತೆ ಮತ್ತು ಟ್ರಯಲ್ ಸಂಪೂರ್ಣವಾಗದೇ ಜನರ ಮೇಲೆ ವ್ಯಾಕ್ಸಿನ್ ಪ್ರಯೋಗಿಸಿರುವುದರ ವಿರುದ್ಧ ಸತೀಶ ಆಚಾರ್ಯ ಕಾರ್ಟೂನು ಬರೆದಿದ್ದರು. ಆದರೆ ಇತ್ತೀಚೆಗೆ ತಾವೇ ಸ್ವತಃ ವ್ಯಾಕ್ಸಿನ್ ಹಾಕಿಸಿಕೊಂಡಿದ್ದು, ಸತೀಶ್ ಆಚಾರ್ಯರ ಈ ದ್ವಂದ್ವ ನಿಲುವಿನಿಂದಾಗಿ ಜನರ ಕೆಂಗಣ್ಣಿಗೆ ಕಾರಣರಾಗಿರುದ್ದಾರೆ.
This IT cell post says in public I criticise vaccine but in private I took it! If IT cell warriors had any common sense to realise that these were criticising politicisation of vaccine(vote for vaccine, rushing vaccine without enough trials), they wouldn't be in brainless IT cell pic.twitter.com/453C37HEGX
— Satish Acharya (@satishacharya) April 29, 2021
ಆದರೆ ಇದಕ್ಕೆ ಉತ್ತರಿಸಿರುವ ಸತೀಶ್ ಆಚಾರ್ಯ, ಇದೊಂದು ಬಿಜೆಪಿ ಐಟಿ ಸೆಲ್ ಕೆಲ್ಸ ಎಂದು ಒಬ್ಬ ರಾಜಕೀಯ ನಾಯಕರಂತೆ ತಿಪ್ಪೆ ಸಾರಿಸಿದ್ದಾರೆ. ಅದಕ್ಕೂ ಉತ್ತರಿಸಿರುವ ನೆಟ್ಟಿಗರು, ನಿಮ್ಮನ್ನು ಪ್ರಶ್ನಿಸುವ ಎಲ್ಲರನ್ನೂ ಐಟಿ ಸೆಲ್ ಎಂದು ಹೇಳಬೇಡಿ ಎಂದು ಚೇಡಿಸಿದ್ದಾರೆ.
ಕಾರ್ಟೂನುಗಳು ಅಧಿಕಾರದಲ್ಲಿರುವ ಪಕ್ಷವನ್ನು ಪ್ರಶ್ನಿಸುವುದಕ್ಕೆ ಇರುವುದು ನಿಜ, ಆದರೆ ಅದೇ ಕಾರ್ಟೂನು ಜನರ ಮನದಲ್ಲಿ ಭೀತಿ ಹುಟ್ಟಿಸಲು ಉಪಯೋಗಿಸುವುದು ತಪ್ಪು. ಅಧಿಕಾರದಲ್ಲಿರುವ ಎಲ್ಲಾ ಪಕ್ಷದ ಮಂತ್ರಿಗಳನ್ನು ಪ್ರಶ್ನಿಸುವ ಕಾರ್ಟೂನುಗಳೂ ಬರಲಿ. ಜನರಲ್ಲಿ ಜಾಗ್ರತಿ ಮೂಡಿಸಲಿ.
English Summary:
। NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Tags:
Corona