ನವದೆಹಲಿ: ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳಲ್ಲಿನ ಭೀಕರ ಕೋವಿಡ್ ಪರಿಸ್ಥಿತಿಗೆ ಜಾಣ ಕಿವುಡು ಪ್ರದರ್ಶಿಸಿದ್ದ ಅಮೇರಿಕಾ ಸರ್ಕಾರ, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗಳನ್ನು ಎದುರಿಸಿದ ನಂತರ ಹಾನಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ.
ಕೋವಿಡ್ನ ತೀವ್ರವಾದ ಎರಡನೇ ಅಲೆಯನ್ನು ಎದುರಿಸಲು ಸಹಾಯ ಮಾಡಲು ಯುಎಸ್, ಭಾರತ ಮತ್ತು ಅದರ ಆರೋಗ್ಯ ವೀರರಿಗೆ ಹೆಚ್ಚುವರಿ ಬೆಂಬಲವನ್ನು ಶೀಘ್ರವಾಗಿ ನಿಯೋಜಿಸಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಘೋಷಿಸಿದರು.
"ಭಯಾನಕ ಕೋವಿಡ್ -19 ಏಕಾಏಕಿ ಹೆಚ್ಚುವರಿಯಾದ ಮಧ್ಯೆ ನಮ್ಮ ಹೃದಯಗಳು ಭಾರತೀಯ ಜನರಿಗಾಗಿ ಮಿಡಿಯುತ್ತಿದೆ" ಎಂದು ಬ್ಲಿಂಕೆನ್ ಶನಿವಾರ ರಾತ್ರಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
"ಈ ಸಾಂಕ್ರಾಮಿಕ ರೋಗವನ್ನು ಧೈರ್ಯದಿಂದ ಎದುರಿಸಿ ಹೋರಾಡುವಾಗ ಭಾರತದ ನಮ್ಮ ಸ್ನೇಹಿತರು ಮತ್ತು ಪಾಲುದಾರರಿಗೆ ಹೆಚ್ಚಿನ ಸರಬರಾಜು ಮತ್ತು ಬೆಂಬಲವನ್ನು ನಿಯೋಜಿಸಲು ನಾವು ದಿನಕ್ಕೆ ಇಪ್ಪತ್ನಾಲ್ಕು ತಾಸು ಕೆಲಸ ಮಾಡುತ್ತಿದ್ದೇವೆ." ಎಂದು ಸುಲ್ಲಿವಾನ್ ಹೇಳಿದರು. ಭಾರತದಲ್ಲಿ ಕೋವಿಡ್ ಏಕಾಏಕಿ ಹೆಚ್ಚುತ್ತಿದ್ದು, ಯುನೈಟೆಡ್ ಸ್ಟೇಟ್ಸ್ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಹೇಳಿದ್ದಾರೆ.