ಕಾಂಗ್ರೆಸ್ ಟೂಲ್ ಕಿಟ್ ಸೃಷ್ಟಿಕರ್ತೆ ಪತ್ತೆ! ಯಾರೀಕೆ? ಕಾಂಗ್ರೆಸ್ಗೆ ಏನು ಸಂಬಂಧ?

og:image

ಎರಡು ದಿನದ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತವನ್ನು ಅಂತರಾಷ್ಟ್ರೀಯ ಮಾಧ್ಯಮಗಳ ಮೂಲಕ ಭಾರತದ ಹೆಸರಿಗೆ ಕಳಂಕ ತರಲು "ಟೂಲ್ ಕಿಟ್" ಕಾಂಗ್ರೆಸ್ ಪಕ್ಷ ತಯಾರಿಸಿದೆ ಎಂದು ಬಿಜೆಪಿ ಅರೋಪ ಮಾಡಿತ್ತು. 
ಆದರೆ "ಟೂಲ್ ಕಿಟ್" ನಕಲಿ ಎಂದು ಕಾಂಗ್ರೆಸ್ ವಾಧಿಸುತ್ತಿರುವ ಬೆನ್ನಲ್ಲೇ, ಇಂದು "ಟೂಲ್ ಕಿಟ್" ಸ್ರಷ್ಟಿ ಮಾಡಿರುವವರ ಹೆಸರು ಬಯಲಿಗೆ ಬಂದಿದೆ. 

ಟ್ವಿಟರ್ ಬಳಕೆದಾರ ಮತ್ತು ಸಲಹೆಗಾರ ಅಂಕುರ್ ಸಿಂಗ್ ಅವರು, ಕಾಂಗ್ರೆಸ್ ಟೂಲ್ ಕಿಟ್ ಕಾಂಗ್ರೆಸ್ ಮೂಲದ ಸೌಮ್ಯ ವರ್ಮಾ ರಚಿಸಿದ್ದಾರೆ ಎಂದು ಹೇಳಲಾದ ಡಾಕ್ಯುಮೆಂಟ್‌ನ ಮೂಲವನ್ನು ಎತ್ತಿ ತೋರಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. 


ಮೈಕ್ರೋಸಾಫ್ಟ್ ವರ್ಡ್ ಸಾಫ್ಟ್ವೇರ್ ಮೂಲಕ ಯಾವುದಾದರೂ ಡಾಕ್ಯುಮೆಂಟ್ ತಯಾರಿ ಮಾಡಿದರೆ, ಅದರಲ್ಲಿ ಅವರ ಹೆಸರು ಮತ್ತು ಇತರ ವಿವರಗಳು ಡಾಕ್ಯುಮೆಂಟ್ ಪ್ರಾಪರ್ಟಿ ಅಂತ ಸೇವ್ ಆಗುತ್ತದೆ. ಅದನ್ನು ಪರಿಶೀಲಿಸಿದರೆ ಆ ಡಾಕ್ಯುಮೆಂಟ್ ಯಾರು ತಯಾರಿ ಮಾಡಿರುವುದು ಎಂದು ಕಂಡು ಹಿಡಿಯ ಬಹುದಾಗಿದೆ. ಹಾಗೇ ಕಾಂಗ್ರೆಸ್ಸ್ ಮಾಡಿರುವುದು ಎನ್ನಲಾದ "ಟೂಲ್ ಕಿಟ್’ ಡಾಕ್ಯುಮೆಂಟ್ ಪ್ರಾಪರ್ಟೀಸ್ ಚೆಕ್ ಮಾಡಿದಾಗ ಸೌಮ್ಯ ಅವರ ಹೆಸರು ಬಂದಿದೆ. 

ಇನ್ನು ಈ ಸೌಮ್ಯ ಅಂದರೆ ಯಾರು ಎಂದು ಪರಿಕ್ಷಿಸಿಲಿದರೆ,  ಅವರು ಏಪ್ರಿಲ್ 2017 ರಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಾಜೀವ್ ಗೌಡ ಅವರ ಕಚೇರಿಯಲ್ಲಿ ಕೆಲಸ ಮಾಡುವ ನೀತಿ ಮತ್ತು ರಾಜಕೀಯ ಸಂಶೋಧನಾ ಸಲಹೆಗಾರರಾಗಿದ್ದಾರೆ ಎಂದು ಸೌಮ್ಯಾ ವರ್ಮಾ ಅವರ ಲಿಂಕ್ಡ್ಇನ್ ಪ್ರೊಫೈಲ್ ಬಹಿರಂಗಪಡಿಸಿದೆ.

ಆದರೆ ಈ ಸುದ್ಧಿ ಹೊರಬೀಳುತ್ತಿರುವಂತೆಯೇ, ಸೌಮ್ಯ ಕೂಡಲೇ ತಮ್ಮ ಟ್ವಿಟ್ಟರ್ ಮತ್ತು ಲಿಂಕ್ಡ್ ಇನ್ ಪ್ರೊಫೈಲ್ ಡಿಲೀಟ್ ಮಾಡಿದ್ದಾರೆ. 
Previous Post Next Post