"ಸ್ವಾರ್ಥ ಮತ್ತು ಬೇಜಾವಬ್ಧಾರಿ ಕ್ರಮ" ಸರ್ಕಾರಕ್ಕೆ ನಟಿ ಪಾರ್ವತಿ ಟ್ವೀಟ್ ಚಾಟಿ

og:image

ಕೇರಳ: ಸಿಪಿಐ (ಎಂ) ನೇತೃತ್ವದ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಕೇರಳದಲ್ಲಿ ಸತತ ಎರಡನೇ ಬಾರಿಗೆ ಜಯಗಳಿಸಿದೆ. ಎರಡನೇ ಭಾರಿ ಅಧಿಕಾರ ಪಡೆದಿರುವ ಸಿಪಿಐ ಸರ್ಕಾರ, ತಿರುವನಂತಪುರಂ ಸೆಂಟ್ರಲ್ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಆಯೋಜಿಸಲು ಪಕ್ಷ ನಿರ್ಧರಿಸಿದೆ. ಈ ಕಾರ್ಯಕ್ರಮಕ್ಕೆ ಸುಮಾರು 500 ಜನರನ್ನು ಅತಿಥಿಗಳಾಗಿ ಆಹ್ವಾನಿಸುವ ಯೋಜನೆ ಸರ್ಕಾರ ಮಾಡಿದೆ. 

ರಾಜ್ಯದಾದ್ಯಂತ ಕರೋನವೈರಸ್ ಪ್ರಕರಣಗಳ ಹೆಚ್ಚಳದ ಮಧ್ಯೆ,  ಕೇರಳದ ಪಿನರಾಯಿ ನೇತ್ರತ್ವದ ಸರ್ಕಾರ 500 ಜನರ ಅತಿಥಿಗಳೊಂದಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ನಡೆಸುವ ಕ್ರಮವನ್ನು ಖಂಡಿಸಿ ಮಲಯಾಳಂ ಮತ್ತು  ಕನ್ನಡ ನಟಿ ಪಾರ್ವತಿ  ಟ್ವೀಟ್ ಮೂಲಕ ತಮ್ಮ ಪ್ರತಿಭಟನೆ ಸಲ್ಲಿಸಿದ್ದಾರೆ.  

ಮಂಗಳವಾರ ಮಾಡಿದ ಸುದೀರ್ಘ ಸರಣಿ ಟ್ವೀಟ್‌ಗಳಲ್ಲಿ, ಪಾರ್ವತಿ ಅವರು "ಕೇವಲ ಒಂದು ಕ್ಷುಲ್ಲಕ ಕಾರ್ಯಕ್ರಮ ನಡೆಸುವ ನಿರ್ಧಾರದಿಂದ ರಾಜ್ಯದ ಜನರಿಗೆ  ನೀಡಬೇಕಾದ ಪರಿಹಾರ ಕಾರ್ಯಗಳಿಗೆ ವಿಶ್ರಾಂತಿ ನೀಡಬಾರದು" ಎಂದು ಉಲ್ಲೇಖಿಸಿದ್ದಾರೆ. ಸಾಂಕ್ರಾಮಿಕ ರೋಗದ ಮಧ್ಯೆ ಸಮಾರಂಭವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆಸುವುದು ಪಕ್ಷದ ಬೇಜವಾಬ್ದಾರಿ ಮತ್ತು ಸ್ವಾರ್ಥವನ್ನು ತೋರಿಸುತ್ತದೆ ಎಂದು ಅವರು ಹೇಳಿದರು. 

ಅವರ ಟ್ವೀಟ್ ಹೀಗಿದೆ, “ರಾಜ್ಯ ಸರ್ಕಾರವು ಕೊರೊನಾ ನಿಯಂತ್ರಣದಲ್ಲಿ ಹಲವಾರು ಕೆಲಸಗಳನ್ನು ಮಾಡಿದೆ ಮತ್ತು ಮುಂಚೂಣಿ ಕಾರ್ಮಿಕರಿಗೆ ಸಹಾಯ ಮಾಡಲು ಮತ್ತು ಈ ಸಾಂಕ್ರಾಮಿಕ ರೋಗವನ್ನು ತಡೆಯಲು ಸಹಾಯ ಮುಂದುವರಿಯುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಅದಕ್ಕಾಗಿಯೇ 20 ರಂದು ನಡೆಯುವ ಪ್ರಮಾಣವಚನ ಸಮಾರಂಭಕ್ಕಾಗಿ 500 ಜನಸಮೂಹವನ್ನು ಕೇರಳ ಸರ್ಕಾರ ಆಹ್ವಾನಿಸಲು ಯೋಜಿಸಿರುವುದು ಆಘಾತಕಾರಿ ಮತ್ತು ಸ್ವೀಕಾರಾರ್ಹವಲ್ಲ. ಪ್ರಕರಣಗಳು ಇನ್ನೂ ಹೆಚ್ಚುತ್ತಿವೆ ಮತ್ತು ನಾವು ಎಲ್ಲಿಯೂ ಕೊರೋನಾ ರೋಗದ ಅಂತಿಮ ಗೆರೆಯ ಸಮೀಪದಲ್ಲಿಲ್ಲದ ಕಾರಣ, ಇದು ಅತ್ಯಂತ ತಪ್ಪು ಕ್ರಮವಾಗಿದೆ.  ಈ ವಿನಂತಿಯನ್ನು ದಯವಿಟ್ಟು ಪರಿಗಣಿಸಿ ಮತ್ತು ಅಂತಹ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸುವಂತೆ ನಾನು ಕೇರಳ ಮುಖ್ಯಮಂತ್ರಿಗೆ ವಿನಂತಿಸುತ್ತೇನೆ.” ಎಂದು ಟ್ವೀಟ್ ಮಾಡಿದ್ದಾರೆ. 

ದಯವಿಟ್ಟು ಓನ್ಲೈನ್ ಮೂಲಕ ಸಮಾರಂಭ ನಡೆಸಿ ಎಂದೂ ಕೂಡಾ ಸಲಹೆ ನೀಡಿದ್ದಾರೆ. 
Previous Post Next Post