ಬೆಂಗಳೂರು ತಲುಪಿದ ’ಎಲ್ಲಾ ಮಹಿಳಾ ಸಿಬ್ಬಂದಿಗಳು’ ಚಲಾಯಿಸಿದ ಆಕ್ಸಿಜನ್ ಟ್ರೇನ್

Admin
og:image

ಬೆಂಗಳೂರು: ಜಮ್ಸೆಡ್ಪುರದಿಂದ 120 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕದೊಂದಿಗೆ ಮಹಿಳಾ ಸಿಬ್ಬಂದಿಗಳೇ ಚಾಲನೆ ಮಾಡಿದ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ನಗರಕ್ಕೆ ಬಂದಿತು.

"ಕರ್ನಾಟಕಕ್ಕೆ 7 ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಶುಕ್ರವಾರ ತತಾನಗರದಿಂದ (ಜಮ್‌ಶೆಡ್ಪುರ) ಬೆಂಗಳೂರಿಗೆ ಆಗಮಿಸಿದೆ. ಎಲ್ಲಾ ಮಹಿಳಾ ಸಿಬ್ಬಂದಿ ಪೈಲಟ್ ಮಾಡಿದ ಈ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ರಾಜ್ಯದ ಕೋವಿಡ್ -19 ರೋಗಿಗಳಿಗೆ ನಿರಂತರವಾಗಿ ಆಮ್ಲಜನಕವನ್ನು ಪೂರೈಸುವುದನ್ನು ಖಚಿತಪಡಿಸುತ್ತದೆ" ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಶನಿವಾರದಂದು ಟ್ವೀಟ್ ಮಾಡಿದ್ದಾರೆ. 
ರೈಲ್ವೆ ಅಧಿಕಾರಿಗಳ ಪ್ರಕಾರ, 8 ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಸಹ ಗುಜರಾತ್‌ನ ಜಾಮ್‌ನಗರದಿಂದ ಬೆಂಗಳೂರಿಗೆ ತಲುಪಿತು. 

ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಪ್ರತಿದಿನ 1,200 ಮೆಟ್ರಿಕ್ ಟನ್ ಆಮ್ಲಜನಕವನ್ನು ಕೋರಿದೆ.

ಕರ್ನಾಟಕವು ಶುಕ್ರವಾರ 32,218 ಕೋವಿಡ್ ಸೋಂಕುಗಳು ಮತ್ತು 353 ಕೊರೊನಾ ಸಂಬಂಧಿತ ಸಾವುಗಳನ್ನು ವರದಿ ಮಾಡಿದೆ. ಒಟ್ಟು ಸೋಂಕುಗಳು ಮತ್ತು ಸಾವುನೋವುಗಳು ಕ್ರಮವಾಗಿ 23.67 ಲಕ್ಷ ಮತ್ತು 24,207 ಕ್ಕೆ ತಲುಪಿದೆ.

#buttons=(Accept !) #days=(20)

Our website uses cookies to enhance your experience. Learn More
Accept !