LIVE VIDEO - ಮೊಟ್ಟೆ ಕದ್ದು ಸಿಕ್ಕಿಬಿದ್ದ ಪೊಲೀಸ್
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |

ಪೊಲೀಸರು ಕಳ್ಳರನ್ನು ಹಿಡಿಯುತ್ತಾರೆ, ಕಳ್ಳರು ಪೊಲೀಸರನ್ನು ಕಂಡರೆ ಎದ್ವಾ ಬಿದ್ವಾ ಅಂತ ಓಡೋಗುತ್ತಾರೆ. ಯಾಕಂದರೆ ಕಳ್ಳರಿಗೆ ಪೊಲೀಸರನ್ನ ಕಂಡರೆ ಅಷ್ಟು ಭಯ ಇದೆ.
ಆದರೆ, ಪಂಜಾಬಿನಲ್ಲಿ ನಡೆದ ಒಂದು ಘಟನೆ ಪೊಲೀಸ್ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ.ಕಳ್ಳರೇ ನಾಚುವಂತೆ ಪೊಲೀಸೊಬ್ಬ ಕದ್ದಿದ್ದಾನೆ! ಅದೂ ಹಗಲು ಹೊತ್ತಿನಲ್ಲೇ. ಇನ್ನು ಪೋಲಿಸಪ್ಪ ಕದ್ದಿದ್ದು ಏನು ಗೊತ್ತಾ?
ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸೈಕಲಿನಲ್ಲಿದ್ದ ಕೋಳಿಯ ಮೊಟ್ಟೆಗಳನ್ನು ಹೆಡ್ ಪಿಸಿ ಕಳ್ಳತನ ಮಾಡಿದ್ದಾರೆ.
ಜನರ ರಕ್ಷಣೆ ಮಾಡಬೇಕಾದ ಪೊಲೀಸರೇ ಹೀಗೇ ಕಳ್ಳತನ ಮಾಡಿರುವ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಈ ವಿಡಿಯೋ ನೀವು ನೋಡಿ. ಹೀಗೆ ಹಾಡು ಹಗಲೇ ಮೊಟ್ಟೆ ಕಳ್ಳತನ ಮಾಡಿರುವ ಪೊಲೀಸಪ್ಪನ ಹೆಸರು ಪ್ರೀತ್ಪಾಲ್ ಸಿಂಗ್. ಈತ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಸೈಕಲ್ ಮೇಲೆ ಇಟ್ಟಿದ್ದ ಮೊಟ್ಟೆಗಳನ್ನು ಎಗರಿಸಿ, ಯಾರೂ ನೋಡುತ್ತಿಲ್ಲ ಎಂದು, ತನ್ನ ಪ್ಯಾಂಟ್ ಜೇಬಿನಲ್ಲಿ ಇಳಿಸಿದ್ದಾನೆ. ಆದರೆ ಅಲ್ಲೇ ಇದ್ದ ದಾರಿಹೋಕನೊಬ್ಬ ಇದನ್ನ ತನ್ನ ಮೊಬೈಲ್ ಮೂಲಕ ಶೂಟ್ ಮಾಡಿದ್ದಾನೆ. ಈಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಮವಸ್ತ್ರದಲ್ಲಿದ್ದುಕೊಂಡೆ ಕಳ್ಳತನ ಮಾಡಿದ ಪೊಲೀಸನ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
ಇನ್ನು ಪ್ರೀತ್ಪಾಲ್ ಸಿಂಗ್ ಮೊಟ್ಟೆ ಕಳ್ಳತನದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಇದು ಪಂಜಾಬ್ ಪೊಲೀಸ್ ಇಲಾಖೆಯ ಗಮನಕ್ಕೂ ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಿಸಿ ಪ್ರೀತ್ಪಾಲ್ ಸಿಂಗ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪೋಲಿಸ್ ಇಲಾಖೆ ಮುಂದಿನ ತನಿಖೆ ಮಾಡಲಾಗುತ್ತಿದೆ ಎಂದಿದ್ದಾರೆ.
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |