ನಾನು ರಾಜ್ಯದ ಮುಖ್ಯಮಂತ್ರಿಯಾಗಬೇಕು! ನೀವು ನನ್ನ ಗೆಲ್ಲಿಸುತ್ತೀರ? ಎಂದು ಕೇಳುತ್ತಿದ್ದರೆ, ಕನ್ನಡದ ಸುಪರ್ ಸ್ಟಾರ್ ಉಪೇಂದ್ರ.
ಈ ಹಿಂದೆ ಸಿನಿಮಾದಲ್ಲಿ ತಲೆಗೆ ಹುಳಬಿಟ್ಟು ಜನರನ್ನು ಹುಚ್ಚೆಬ್ಬಿಸಿ, ಅಭಿಮಾನಿಗಳ ದಂಡೇ ಪಡೆದಿದ್ದ ಉಪೇಂದ್ರ, ಈಗ ರಾಜಕೀಯ, ಅಲ್ಲ... ಪ್ರಜಾಕೀಯ ಮಾಡಲು ಹೊರಟಿರುವುದು ನಿಮಗೆಲ್ಲಾ ಗೊತ್ತೇ ಇದೆ.
ಇಲ್ಲಿಯವರೆಗೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದ ಉಪೇಂದ್ರ, ಇಂದು ಹೊಸದಾಗಿ ತಮ್ಮ ಆಲೋಚನೆ ಹರಿದುಬಿಟ್ಟಿದ್ದಾರೆ.
ಅದೇನೆಂದರೆ, ಉಪೇಂದ್ರ ಚುನಾವಣೆ ಸ್ಪರ್ಧಿಸುವುದಿಲ್ಲ, ಆದರೆ ಅವರ ಪಕ್ಷದ ಅಭ್ಯರ್ಥಿಗಳು ಎಲ್ಲಾ ಕಡೆ ಸ್ಪರ್ಧಿಸುತ್ತಾರೆ, ಪಕ್ಷಕ್ಕೆ ಬಹುಮತ ಬಂದರೆ ಉಪೇಂದ್ರ ಮುಖ್ಯಮಂತ್ರಿ.
ಉಪೇಂದ್ರ ಎನ್ನುವ ನಾನು ಈ ರಾಜ್ಯದ ಮುಖ್ಯ...... pic.twitter.com/x3T7FnBqPG
— Upendra (@nimmaupendra) May 22, 2021
"ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ನಾನು ಕೆಲಸ ಮಾಡ್ತೀನಿ, ಹಗಲು ರಾತ್ರಿ ಕಷ್ಟಪಟ್ಟು ಸುವರ್ಣ ಕರ್ನಾಟಕ ಮಾಡ್ತೀನಿ! ನನ್ನನ್ನ ಗೆಲ್ಲಿಸ್ತೀರಾ??? " ಎಂದು ಪ್ರಶ್ನಿಸಿದ್ದಾರೆ.