ಶಂಕರ್ ನಿರ್ದೇಶನದ ರಾಮ್ ಚರಣ್ ಚಿತ್ರಕ್ಕೆ ಆಲಿಯಾ ಭಟ್ ನಾಯಕಿ

og:image

ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಶಂಕರ್,  ತೆಲುಗು ನಟ ರಾಮ್ ಚರಣ್ ಅವರ ಮುಂದಿನ ಚಿತ್ರವನ್ನು ನಿರ್ದೇಶಿಸುವ ಸುದ್ಧಿಯೊಂದು ಫೆಬ್ರವರಿಯಲ್ಲಿ  ಹರಿದಾಡಿತ್ತು. ಇದು ಪ್ಯಾನ್-ಇಂಡಿಯನ್ ಚಿತ್ರವಾಗಲಿದೆ. ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಈ ಯೋಜನೆಯು ಇನ್ನೂ ಪ್ರಾರಂಭವಾಗದಿದ್ದರೂ ಮತ್ತು ನಿರ್ದೇಶಕ ಶಂಕರ್ ಅವರು ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2' ಚಿತ್ರವನ್ನು ಪೂರ್ಣಗೊಳಿಸುವುದರ ಸುತ್ತಲಿನ ಸಮಸ್ಯೆಗಳನ್ನೂ ಸಹ ಗಮನದಲ್ಲಿಟ್ಟುಕೊಂಡಿದ್ದರೂ, ರಾಮ್ ಚರಣ್ ಅಭಿನಯದ ಚಿತ್ರದ ಬಗ್ಗೆ ಸಾಕಷ್ಟು ಕ್ರೇಜ್ ಉಂಟಾಗಿದೆ. 

'ಇಂಡಿಯನ್ 2' ಚಿತ್ರದಲ್ಲಿ ಕಮಲ್ ಹಾಸನ್ ಅವರೊಂದಿಗೆ ದಕ್ಷಿಣ ಕೊರಿಯಾದ ನಟಿ ಸುಜಿ ಬೇ ನಾಯಕಿಯಾಗಿ ನಟಿಸುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿತ್ತು, ಆದರೆ ನಂತರ ಸುಜಿ ಬೇ, ರಾಮ್ ಚರಣ್ ನಾಯಕಿಯಾಗುವ ಸಾಧ್ಯತೆಗಳಿವೆ ಎಂದೂ ಸುದ್ಧಿಯಾಗಿತ್ತು, ಆದರೆ ಎರಡು ದಿನದಿಂದ ಬಾಲಿವುಡ್ ನಟಿ ಆಲಿಯಾ ಭಟ್ ರಾಮ್ ಚರಣ್ ನಾಯಕಿಯಾಗಿ ನಟಿಸಬಹುದು ಎಂದು ವರದಿಯಾಗಿದೆ. 

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಆರ್.ಆರ್.ಆರ್' ಚಿತ್ರದಲ್ಲಿ ಆಲಿಯಾ ಭಟ್ ಅವರ ಕೆಲಸದ ಶೈಲಿಯಿಂದ ಪ್ರಭಾವಿತರಾದ ನಂತರ  ರಾಜಮೌಳಿ, ನಿರ್ದೇಶಕ ಶಂಕರ್ ಅವರ ಚಿತ್ರಕ್ಕೆ ಆಲಿಯಾ ಭಟ್ ಅವರನ್ನು ಶಿಫಾರಸು ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ನಿರ್ಮಿಸಲಿದ್ದಾರೆ. ಚಿತ್ರ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಶಂಕರ್ ತೆಲುಗು ನಾಯಕನನ್ನು ನಿರ್ದೇಶಿಸುತ್ತಿರುವುದು ಇದೇ ಮೊದಲು. ಪ್ಯಾನ್-ಇಂಡಿಯಾ ಪ್ರೇಕ್ಷಕರಿಗೆ ಈ ಚಿತ್ರವನ್ನು ಹಲವಾರು ಭಾಷೆಗಳಲ್ಲಿ ಚಿತ್ರೀಕರಿಸಿ ಬಿಡುಗಡೆ ಮಾಡಲಾಗುವುದು.
Previous Post Next Post