ಡಿಸೆಂಬರ್ ತಿಂಗಳಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಇವು. ಒಮ್ಮೆ ಓದಿ ನೋಡಿ.

Admin
og:image
ನೀವು ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರಾದರೇ, ನೀವು ತುಂಬಾ ಸಾಹಸಮಯ, ಉದಾರ ಜನರಾಗಿರುತ್ತೀರಿ. ನೀವು ನಿಮ್ಮ ಪ್ರತಿಷ್ಟೆಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ.  ಇದಕ್ಕಾಗಿ ಯಾರ ಜೊತೆ ಬೇಕಾದರೂ ಸಣ್ಣದಾಗಿ ಜಗಳ ಆಡಲೂ ರೆಡಿ. ಡಿಸೆಂಬರ್ ನಲ್ಲಿ ಹುಟ್ಟಿದವರು ಪ್ರಯಾಣ ಮಾಡುತ್ತಾ ಇರಲು ಇಷ್ಟಪಡುತ್ತಾರೆ, ಇದ್ದ ಜಾಗದಲ್ಲೇ ಹೆಚ್ಚು ಹೊತ್ತು ಕುಳಿತುಕೊಳ್ಳಲು ಇಸ್ಟಪಡಲ್ಲ. ನೀವು ಡಿಸೆಂಬರ್‌ನಲ್ಲಿ ಜನಿಸಿದರೆ, ನೀವು ಹೆಚ್ಚು ಉದ್ರಿಕ್ತರಾಗಿರಬಹುದು ಮತ್ತು ಜನರನ್ನು ಮನರಂಜಿಸಬಹುದು. ನಿಮ್ಮ ಮುಕ್ತ ಮನೋಭಾವದ ವರ್ತನೆ ಮತ್ತು ಹೆಚ್ಚು ಸಂಪ್ರದಾಯವಾದಿ ಗುಣ ಇವೆರಡರ ನಡುವೆ ಬ್ಯಾಲೆನ್ಸ್ ಮಾಡುತ್ತಾ ಇರುವಿರಿದ್.  ಅಂದರೆ ಕೆಲವೊಮ್ಮೆ ನೀವು, ತುಂಬಾ ಸಂಪ್ರದಾಯ ಪಾಲಿಸುವವರಂತೆ ಕಂಡರೆ, ಮರು ಘಳಿಗೆ ನೀವು ತುಂಬಾ ಓಪನ್ ಆಗಿ ಮಾಡರ್ನ್ ಆಗಿ ಕಾಣಿಸುತ್ತೀರಿ. 

ಡಿಸೆಂಬರ್‌ನಲ್ಲಿ ಜನಿಸಿದ ಜನರು ಸಾಮಾನ್ಯವಾಗಿ  ಅದೃಷ್ಟವಂತರು. ಇವರು ತುಂಬಾ ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ವ್ಯಕ್ತಿಗಳಾಗಿರುವುದರಿಂದ ಇವರಿಗೆ ಯಾವುದೇ ಕೆಲಸ ನೀಡಿದರೆ ಅದನ್ನು ಪ್ರಾರಂಭಿಸಿದರೆ ಅದನ್ನ ಯಾವಾಗಲೂ ಮುಗಿಸುತ್ತಾರೆ. ಅವರು ಪ್ರೀತಿಸುವ ಜನರಿಗೆ ತೀವ್ರವಾಗಿ ನಿಷ್ಠರಾಗಿರುತ್ತಾರೆ, ಆದರೆ ಹೊಸ ಹೊಸ ಅನುಭವಗಳಿಗೆ ಕಾಯುತ್ತಾ ಇರುತ್ತಾರೆ.

ಇನ್ನು ಅವರ ಮನೆಗೆ ಬರುವ ಅತಿಥಿಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಬಂದವರಿಗೆ ಮನೆ ಆರಾಮದಾಯಕ ಮತ್ತು  ಅವರಿಗೆ ಉತ್ತಮ ಅನುಭವ ನೀಡವುದು ಇವರಿಗೆ ಮುಖ್ಯವಾಗಿದೆ. ಅವರ ಮನೆಗೆ ಆಹ್ವಾನ ಪಡೆಯುವುದು ಕೇವಲ ಅವರ ಕುಟುಂಬಸ್ಥರು ಮತ್ತು ತುಂಬಾ ಆತ್ಮೀಯ ಗೆಳೆಯರು ಮಾತ್ರ. ಆದರಿಂದ ಇವತು ತುಂಬಾ ಕುಟುಂಬವನ್ನು ಪ್ರೀತಿಸುವ ವ್ಯಕ್ತಿಗಳಾಗಿರುತ್ತಾರೆ. ಕೆಲವೇ ಕೆಲವು ಗೆಳೆಯರನ್ನು ತುಂಬಾ ಹಚ್ಚಿಕೊಂಡಿರುತ್ತಾರೆ. 

ಇವರಿಗೆ ಕಲೆಯಲ್ಲಿ ಅತೀವ ಆಸಕ್ತಿಯಿರುತ್ತದೆ. ಕಲಾರಾಧಕರಾಗಿರುತ್ತಾರೆ. ಇವರನ್ನು ಯಾರದರೂ ಕಂಟ್ರೋಲ್ ಮಾಡಲು ಯೋಚಿಸಿದರೆ, ಅದು ಸಾಧ್ಯವಾಗದ ಮಾತು, ಯಾಕಂದರೆ ಇವರು ಯಾವುದೇ ಬಂಧನ ಇಚ್ಚೆ ಪಡುವುದಿಲ್ಲ. 

ಇಲ್ಲಿ ಕೆಳಗಿನ ತಿಂಗಳುಗಳಲ್ಲಿ, ನೀವು ಹುಟ್ಟಿರುವ ತಿಂಗಳನ್ನು ಆಯ್ಕೆ ಮಾಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.  ಇನ್ನು ನಿಮ್ಮದೇ ಮಾತ್ರವಲ್ಲ, ನಿಮ್ಮ ಗೆಳೆಯರ ಗುಣ ಲಕ್ಷಣಗಳನ್ನೂ ಇಲ್ಲಿ ತಿಳಿಯಬಹುದು. ದಯವಿಟ್ಟು ಇದನ್ನು ಎಲ್ಲರಿಗೂ ಶೇರ್ ಮಾಡಿ. 
Tags

#buttons=(Accept !) #days=(20)

Our website uses cookies to enhance your experience. Learn More
Accept !