ಜೂನ್ 14 ರವರೆಗೆ ಲಾಕ್ ಡೌನ್ ಮುಂದುವರಿಕೆ ಸಾಧ್ಯತೆ - 2 ನೇ ಪ್ಯಾಕೇಜ್ ಶೀಘ್ರದಲ್ಲಿ.

og:image

ಬೆಂಗಳೂರು: ಕರ್ನಾಟಕ ಸರ್ಕಾರ ಜೂನ್ 7 ರ ನಂತರ ಒಂದು ವಾರದವರೆಗೆ ಲಾಕ್‌ಡೌನ್ ವಿಸ್ತರಣೆಯನ್ನು ಬೆಂಬಲಿಸಿದೆ, ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಅಧಿಕ್ರತ ಘೋಷಣೆ ಮಾಡುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ  ಕೋವಿಡ್ -19 ಹರಡುವಿಕೆ ಹೆಚ್ಚುತ್ತಿದ್ದು ಸರ್ಕಾರ ಲಾಕ್ ಡೌನ್ ಮುಂದುವರೆಸುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕರ್ನಾಟಕದ ಕೊರೊನಾ ಪ್ರಕರಣಗಳಲ್ಲಿ ಒಟ್ಟಾರೆ ಕುಸಿತದ ನಡುವೆಯೂ,  ಸೋಂಕಿತರ ಮರಣದ ಸಂಖ್ಯೆ ಹೆಚ್ಚುತ್ತಿದ್ದು, ಕಳವಳಕ್ಕೆ ಕಾರಣವಾಗಿದೆ.  

ಕಳೆದ ತಿಂಗಳು ಘೋಷಿಸಿದ್ದ ಮೊದಲ ಸುತ್ತಿನ ಪರಿಹಾರ ಪ್ಯಾಕೇಜ್ ನಿಂದ ಹೊರಗುಳಿದ ಅಸಂಘಟಿತ ಕಾರ್ಮಿಕರಿಗೆ, ಎರಡನೇ ಸುತ್ತಿನ ಪರಿಹಾರ ಪ್ಯಾಕೇಜ್  ಬಿಎಸ್ ಯಡಿಯೂರಪ್ಪ ಅವರು ಗುರುವಾರ ಈ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಅದರ ಜೊತೆಗೆ, ರಫ್ತು ಆಧಾರಿತ ಘಟಕಗಳಿಗೆ (ಇಒ) ಜೂನ್ 3 ರಿಂದ 50% ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿತು.

"ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನೂರಾರು ರಫ್ತು ಆಧಾರಿತ ಘಟಕಗಳಿಗೆ 50% ಸಿಬ್ಬಂದಿ ಬಲದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. 1,000 ಕ್ಕಿಂತ ಹೆಚ್ಚು ಜನರನ್ನು ಹೊಂದಿರುವ ಎಲ್ಲಾ ಕಾರ್ಯನಿರತ ಕೈಗಾರಿಕೆಗಳು ವಾರಕ್ಕೆ ಎರಡು ಬಾರಿ  ಕನಿಷ್ಠ 10% ಉದ್ಯೋಗಿಗಳಿಗೆ ಕೋವಿಡ್ -19 ಪರೀಕ್ಷೆಯನ್ನು ಮಾಡಬೇಕು ”ಎಂದು ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ತಿಳಿಸಿದ್ದಾರೆ.
Previous Post Next Post