ಸೋನಿಯಾ ಗಾಂಧಿ ಮನೇಲಿ "ಭಾರತವನ್ನು ಕನ್ವರ್ಟ್" ಮಾಡುವ ಪುಸ್ತಕ! ಏನಿದು ವೈರಲ್ ನ್ಯೂಸ್?

og:image

ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಆ ಚಿತ್ರದಲ್ಲಿ, ಸೋನಿಯಾ ಗಾಂಧಿ ಹಿಂದೆ ಪುಸ್ತಕದ ಕಪಾಟಿನಲ್ಲಿ ‘ಹೋಲಿ ಬೈಬಲ್’, ಯೇಸುವಿನ ಪ್ರತಿಮೆ ಮತ್ತು ‘ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ’ ಎಂಬ ಪುಸ್ತಕವಿದೆ ಇರುವುದು ಕಂಡು ಬಂದಿದೆ. 

ಟ್ವಿಟರ್ ಬಳಕೆದಾರ ನೋ ಕನ್ವರ್ಶನ್  ಎಂಬವರು, ಮೊದಲು ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ, ಈಗ ಈ ಟ್ವೀಟ್ ಸಾವಿರಾರು ಜನರು ಹಂಚಿದ್ದಾರೆ. 

ಅಷ್ಟೇ ಅಲ್ಲದೇ, ಬಿಜೆಪಿ ತಮಿಳುನಾಡು ಕಾರ್ಯದರ್ಶಿ ಸುಮತಿ ವೆಂಕಟೇಶ್ ಮತ್ತು ಬಿಜೆಪಿ ಬೆಂಬಲಿಗ ರೇಣುಕಾ ಜೈನ್ ಕೂಡ ಚಿತ್ರ ಹಂಚಿಕೊಂಡಿದ್ದಾರೆ. ನಂತರ ಅವರು ತಮ್ಮ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. 

ಇದೊಂದು ಫೇ ಕ್ ಚಿತ್ರವಾಗಿದ್ದ್ದು, ಸೋನಿಯಾ ಗಾಂಧಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ವಿಡಿಯೋ ಒಂದರಲ್ಲಿ,  ಪುಸ್ತಕದ ಕಪಾಟಿನ ಮುಂದೆ ಕೂತಿದ್ದು, ಅದನ್ನು ಸ್ಕ್ರೀನ್ ಶಾಟ್ ತೆಗೆದು, ಅದನ್ನು ಎಡಿಟ್ ಮಾಡಲಾಗಿದೆ. ನಿಜವಾಗಿ ಸೋನಿಯಾ ಗಾಂಧಿ ಕಪಾಟಿನಲ್ಲಿ ಅಂತಹ ಪುಸ್ತಕ ಇರುವುದು ಸುಳ್ಳು.  
Previous Post Next Post