ಪದೇ ಪದೇ ಕರೆಂಟ್ ಕಟ್ - ವಿದ್ಯುತ್ ವ್ಯವಸ್ಥಾಪಕ ನಿರ್ದೇಶಕನನ್ನೇ ಸಸ್ಪೆಂಡ್ ಮಾಡಿದ ಸಿಎಂ ಯೋಗಿ

og:image

ಶುಕ್ರವಾರ ವಾರಣಾಸಿಗೆ ಭೇಟಿ ನೀಡಿದ್ದ ಸಿಎಂ ಯೋಗಿ ಆದಿತ್ಯನಾಥ್ ಅವರು ನಗರದ ಅಭಿವೃದ್ಧಿ ಕಾರ್ಯಗಳ ಮಾಹಿತಿ ಪಡೆಯಲು ಅಧಿಕಾರಿಗಳೊಂದಿಗೆ ಪ್ರಮುಖ ಸಭೆ ನಡೆಸಿದರು. ವಿದ್ಯುತ್ ಮಂಡಳಿಯ ಅಧಿಕಾರಿಗಳೊಂದಿಗಿನ ಅಂತಹ ಒಂದು ಸಭೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಭೆಯಲ್ಲಿ ಪೂರ್ವಾಂಚಲ್ ವಿದ್ಯುತ್  ವ್ಯವಸ್ಥಾಪಕ ನಿರ್ದೇಶಕ ವಿತ್ರಾನ್ ನಿಗಮ್ ನಿಗೋಜ್ ಕುಮಾರ್ ಹಾಜರಿರಲಿಲ್ಲ ಎಂದು ಗಮನಿಸಿದರು.

ವರದಿಗಳ ಪ್ರಕಾರ, ಕುಮಾರ್ ಅವರ ಅನುಪಸ್ಥಿತಿಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಕೋಪಗೊಳ್ಳುವಂತೆ ಮಾಡಿತ್ತು,  ಅವರು ಪೂರ್ವಾಂಚಲ್ ವಿದ್ಯಾತ್ ವಿತ್ರಾನ್ ನಿಗಮ್ ಅವರ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕಾಗಿ ಅವರನ್ನು ತಕ್ಷಣವೇ ಅಮಾನತುಗೊಳಿಸಿದರು. ಅಷ್ಟಕ್ಕೇ ನಿಲ್ಲದ ಮುಖ್ಯಮಂತ್ರಿ, ಯೋಜನೆಗಳನ್ನು ಪೂರ್ಣಗೊಳಿಸಲು ಅವರು ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು, ವಿಫಲವಾದರೆ ಯಾವ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಕುಮಾರ್ ಅವರು ಮೀಟಿಂಗಲ್ಲಿ ಇರ್ಲಿಲ್ಲ ಎನ್ನುವ ಏಕೈಕ ಕಾರಣವದಿಂದ ಸಿಎಂ ಯೋಗಿ ಸಿಟ್ಟು ಮಾಡಿಕೊಂಡಿಲ್ಲ, ಆಗಾಗ್ಗೆ ವಿದ್ಯುತ್ ಕಡಿತ ಮತ್ತು ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿನ ವಿಳಂಬವೂ ಅವನ ಅಮಾನತಿಗೆ ಕಾರಣವಾಗಿದೆ. ಈ ವಿಷಯಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸರೋಜ್ ಕುಮಾರ್ ಅವರನ್ನು ಕರೆಸಿದ್ದರು. ಆದರೆ, ಕುಮಾರ್ ಸಭೆಯಲ್ಲಿ ಭಾಗವಹಿಸಲಿಲ್ಲ.

ಇದಲ್ಲದೆ, ಜಲ ನಿಗಮ್‌ನ ಮುಖ್ಯ ಎಂಜಿನಿಯರ್‌ಗಳು ಮತ್ತು ಮುನ್ಸಿಪಲ್ ಕಮಿಷನರ್‌ಗಳಿಗೂ ಈ ಪ್ರದೇಶದ ಪರಿಸ್ಥಿತಿ ಸುಧಾರಿಸಲು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಪೂರ್ವ ಉತ್ತರ ಪ್ರದೇಶದ ಅಭಿವೃದ್ಧಿ ಕಾರ್ಯಗಳಲ್ಲಿ ವಿಶೇಷ ಆಸಕ್ತಿ ವಹಿಸಿರುವ ಮುಖ್ಯಮಂತ್ರಿ ಈ ಪ್ರದೇಶಕ್ಕೆ ಹಲವಾರು ಭೇಟಿಗಳನ್ನು ನೀಡುತ್ತಿದ್ದಾರೆ. ಸರ್ಕಾರ ಪ್ರಾರಂಭಿಸಿರುವ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮುಖ್ಯಮಂತ್ರಿ ಸ್ವತಃ ಮಾಹಿತಿ ತೆಗೆದುಕೊಳ್ಳುತ್ತಿದ್ದಾರೆ.
Previous Post Next Post