ತೆಲುಗಿಗೆ ಡಬ್ ಆದ "ದಿಯಾ" - ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ ಪ್ರೀಮಿಯರ್ ಶೋ

Admin
og:image

ಕನ್ನಡದಲ್ಲಿ ಎಲ್ಲಾ ಪ್ರೇಮಿಗಳ ಮನಗೆದ್ದಿದ್ದ ’ದಿಯಾ’ ಚಿತ್ರ ತೆಲುಗಿಗೆ ಡಬ್ ಆಗಿ, ಇವತ್ತು ಯೂಟ್ಯೂಬ್ ಮೂಲಕ ರಿಲೀಸ್ ಆಗಿದೆ. ಯೂಟ್ಯೂಬ್ ನಲ್ಲಿ ಪ್ರೀಮಿಯರ್ ಶೋ ಒಂದು ಲಕ್ಷ ಮಂದಿ ಎಕಕಾಲದಲ್ಲಿ ಚಿತ್ರವನ್ನು ವೀಕ್ಷಿಸಿದ್ದು, ಡಬ್ ಆಗಿರುವ ಚಿತ್ರವೊಂದು ಇಷ್ಟೋಂದು ಪ್ರಮಾಣದಲ್ಲಿ ಹಿಟ್ ಆಗಿರುವುದು ಒಂದು ದಾಖಲೆಯೇ ಸರಿ. 

ಪ್ರಥ್ವಿ ಅಂಬರ್, ಖುಶಿ, ದೀಕ್ಷಿತ್ ಶೆಟ್ಟಿ ನಟಿಸಿರುವು ಈ ಚಿತ್ರ ಕನ್ನಡದಲ್ಲಿ ಉತ್ತಮ ಓಟ ಕಂಡಿತ್ತು. 2020 ರ ಅಭಿಮಾನಿಗಳ ಮೆಚ್ಚಿನ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರಗಳಲ್ಲಿ ಒಂದು ದಿಯಾ.  6 - 5 = 2 ಖ್ಯಾತಿಯ ಕೆ ಎಸ್ ಅಶೋಕರ ಎರಡನೇ ಚಿತ್ರ ಮೂವರು ಹೊಸಬರನ್ನು ಹೊಂದಿದ್ದರೂ ಬಾಕ್ಸ್ ಆಫೀಸಿನಲ್ಲಿ ಮ್ಯಾಜಿಕ್ ಮಾಡಿತ್ತು. 

ಇತ್ತೀಚೆಗಷ್ಟೇ ಜನಪ್ರಿಯ ಸೋಲ್ ಆಫ್ ದಿಯಾ ಟ್ರ್ಯಾಕ್ ನ ತೆಲುಗು ಆವೃತ್ತಿಯನ್ನು ಬಿಡುಗಡೆ ಮಾಡಿದ ತಂಡ, ಇದೀಗ ತೆಲುಗಿನಲ್ಲಿ ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಚಲನಚಿತ್ರವು ಹೊರಬಂದಾಗ ತೆಲುಗು ಚಲನಚಿತ್ರೋದ್ಯಮದಿಂದ ಅನೇಕ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದರು. ತೆಲುಗಿನಲ್ಲಿಯೂ ಚಿತ್ರವನ್ನು ಬಿಡುಗಡೆ ಮಾಡಲು ತಂಡ ಪ್ರೇರೇಪಿಸುವುದಕ್ಕೆ ಇದು ಒಂದು ಪ್ರಮುಖ ಕಾರಣವಾಗಿತ್ತು.#buttons=(Accept !) #days=(20)

Our website uses cookies to enhance your experience. Learn More
Accept !