ಬೈಕಿನಲ್ಲೇ ಪಟಾಕಿ ಸ್ಪೋಟಗೊಂಡ ದಾರುಣ ಘಟನೆ - ಸುಟ್ಟು ಕರಕಲಾದ ಅಪ್ಪ ಮಗ

og:image

ಪುದುಚೇರಿ ಸಮೀಪದ ಕೊಟ್ಟಕುಪ್ಪಂ ಗ್ರಾಮದಲ್ಲಿ ಗುರುವಾರ, ನವೆಂಬರ್ 4 ರಂದು ನಡೆದ ದಾರುಣ ಘಟನೆಯಲ್ಲಿ, ಬೈಕ್‌ನಲ್ಲಿ ಸಾಗಿಸುತ್ತಿದ್ದ ಎರಡು ಚೀಲ ಪಟಾಕಿಗಳು ಬೆಂಕಿಗೆ ಆಹುತಿಯಾಗಿ ಒಬ್ಬ ವ್ಯಕ್ತಿ ಮತ್ತು ಆತನ ಏಳು ವರ್ಷದ ಮಗ ಸುಟ್ಟು ಕರಕಲಾದ ಘಟನೆ ನಡೆದಿದೆ. ಬೈಕ್‌ನ ಸಮೀಪದಲ್ಲಿದ್ದ ಇತರ ಇಬ್ಬರು ದಾರಿಹೋಕರಿಗೂ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲೈನೇಸನ್ (32) ಪುದುಚೇರಿಯ ಅರಿಯಂಕುಪ್ಪಂ ಪಟ್ಟಣದ ನಿವಾಸಿ. ಕಲೈನೇಸನ್, ಪಕ್ಕದ ಹಳ್ಳಿಯಲ್ಲಿ ತನ್ನ ಹೆಂಡತಿಯನ್ನು ಭೇಟಿ ಮಾಡಿದ ನಂತರ, ಪಟಾಕಿ ಖರೀದಿಸಲು ತನ್ನ ಮಗನನ್ನು ಕರೆದುಕೊಂಡು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
 
ಕಲೈನೇಸನ್ ಮತ್ತು ಅವರ ಮಗ ಪ್ರದೀಶ್ (7) ಎರಡು ಗೋಣಿ ಚೀಲಗಳ ಪಟಾಕಿಗಳನ್ನು ಖರೀದಿಸಿ ಪುದುಚೇರಿ ಕಡೆಗೆ ಸವಾರಿ ಮಾಡುತ್ತಿದ್ದರು ಎನ್ನಲಾಗಿದೆ. ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಬಳಿ ತಂದೆ-ಮಗ ಇಬ್ಬರೂ ಸವಾರಿ ಮಾಡುತ್ತಿದ್ದಾಗ, ಪಟಾಕಿ ಸಿಡಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಶರ್ಫುದ್ದೀನ್ ಮತ್ತು ಗಣೇಶನ್ ಎಂಬ ಇಬ್ಬರು ವ್ಯಕ್ತಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
 
ಗಾಯಾಳುಗಳನ್ನು ಪುದುಚೇರಿಯ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಜಿಪ್ಮರ್) ಗೆ ದಾಖಲಿಸಲಾಗಿದೆ.
 
ಪುದುಚೇರಿ-ವಿಲ್ಲುಪುರಂ ಗಡಿಯಲ್ಲಿ ಘಟನೆ ನಡೆದಿದ್ದು, ಎರಡೂ ಪ್ರದೇಶಗಳ ಪೊಲೀಸ್ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ವಿಲ್ಲುಪುರಂ ಪೊಲೀಸ್ ವರಿಷ್ಠಾಧಿಕಾರಿ ಎನ್.ಶ್ರೀನಾಥ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಲೈನೇಸನ್ ಅವರು ಯಾವ ರೀತಿಯ ಪಟಾಕಿಗಳನ್ನು ಖರೀದಿಸಿದ್ದಾರೆ ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.

Previous Post Next Post