ಪರಮಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಯವರು ದೇಹ ತ್ಯಾಗ




ಮಂಗಳೂರು : ಪರಮಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಯವರು ನಿನ್ನೆ ರಾತ್ರಿ 10.40 ಕ್ಕೆ ತಮ್ಮ ದೇಹ ತ್ಯಾಗ ಮಾಡಿದಾರೆ. ಹಲವಾರು ವರ್ಷಗಳಿಂದ ತಮ್ಮನ್ನೇ ತಾವು ದೈವೀಕ ಕಾರ್ಯಗಳಿಗೆ ತೊಡಗಿಸಿಕೊಂಡಿದ್ದ, ಸ್ವಾಮಿ, ಮಂಗಳೂರು ಮತ್ತು ಕಟೀಲು ರಸ್ತೆಯಲ್ಲಿ ಬರುವ ಮರಕಡ ಎಂಬಲ್ಲಿ, ಭವ್ಯವಾದ ದೇಗುಲವೊಂದನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದರು. 

og:image

ಜನವರಿ ಇಪ್ಪತ್ತಾರನೇ ರಾತ್ರಿ, ದೇಹ ತ್ಯಾಗ ಮಾಡುವ ಮೂಲಕ ತಾವು ಪೂಜಿಸುವ ಪರಾಶಕ್ತಿ ಅಮ್ಮನ ಮಡಿಲನ್ನು ಸೇರಿದ್ದಾರೆ. 

ಇಂದು ಮಧ್ಯಾಹ್ನ 3 ಗಂಟೆಯ ವರೆಗೆ ಭಕ್ತಾದಿಗಳಿಗೆ ಶ್ರೀ ಮರಕಡ ಕ್ಷೇತ್ರದಲ್ಲಿ ಗುರುಗಳ ದರ್ಶನಕ್ಕೆ ಅವಕಾಶ ಇರುವುದು.ನಂತರ ಮಡ್ಯಾರು ಕ್ಷೇತ್ರದಲ್ಲಿ ಸಂಜೆ 4 ಗಂಟೆಗೆ ಸರಿಯಾಗಿ ಸಮಾಧಿ ಕ್ರಿಯೆಯು ನಡೆಯಲಿರುವುದು.


Previous Post Next Post