ಇಂದು ಮಧ್ಯಾಹ್ನ, ಕನ್ನಡ ನಟ ದಿಗಂತ್ ಗೋವಾದಲ್ಲಿ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ಗೋವಾದ ಸಮುದ್ರ ತಟದಲ್ಲಿ ಸಮ್ಮರ್ ಶಾಟ್ ಹೊಡೆಯುವ ವೇಳೆ ದಿಗಂತ್ ಕುತ್ತಿಗೆಗೆ ಪೆಟ್ಟು ಬಿದ್ದಿದೆ. . .
ನಟ ತಮ್ಮ ಕುಟುಂಬದ ಜೊತೆ ನಟ ದಿಗಂತ್ ಗೋವಾ ಪ್ರವಾಸಕ್ಕೆ (Goa Tour) ತೆರಳಿದ್ದರು. ಈ ವೇಳೆ ದಿಗಂತ್ (Actor Diganth) ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. .
ಸದ್ಯ ಗೋವಾದಲ್ಲೆ ದಿಗಂತ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.
ಕೆಲವೇ ಗಂಟೆಗಳಲ್ಲಿ ಏರ್ ಲಿಪ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಿಗಂತ್ ಅವರನ್ನು ಕುಟುಂಬಸ್ಥರು ಕರೆತರಲಿದ್ದಾರೆ ಎಂದು ಹೇಳಲಾಗಿದೆ.