ಶ್ರದ್ಧಾ ಶವ ಫ್ರಿಡ್ಜ್‌ನಲ್ಲಿ- ಹೊಸ ಗರ್ಲ್ ಫ್ರೆಂಡ್ ಜೊತೆ ಲವ್ವಿ ಡವ್ವಿ - ಕ್ರೂರಿ ಅಫ್ತಾಬ್-ನ ಖತರ್ನಾಕ್ ಕೃತ್ಯ
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |
ಒಂದು ಸಂಜೆ, ದಕ್ಷಿಣ ದೆಹಲಿಯ ಛತ್ತರ್‌ಪುರ ಪಹಾಡಿಯಲ್ಲಿ ಲೇನ್ ನಂ. 1 ರಲ್ಲಿ ಮನೆ ಸಂಖ್ಯೆ 93/1 ರಲ್ಲಿ ಕರೆಗಂಟೆ ಬಾರಿಸುತ್ತಿದ್ದಂತೆ, ಆಫ್ತಾಬ್ ಅಮೀನ್ ಪೂನಾವಾಲಾ ಬಾಗಿಲು ತೆರೆದು ಮಹಿಳೆಯನ್ನು ಒಳಗೆ ಆಹ್ವಾನಿಸುತ್ತಾನೆ. ಆ ಮಹಿಳೆಯನ್ನು ಕೆಲವು ದಿನಗಳ ಹಿಂದೆ ಡೇಟಿಂಗ್ ಅಪ್ಲಿಕೇಶನ್ ಒಂದರಲ್ಲಿ ಭೇಟಿಯಾಗಿದ್ದ ಅಫ್ತಾಬ್, ಮನೆಗೆ ಕರೆದಿದ್ದ. ಬಾಗಿಲನ್ನು ಮುಚ್ಚಿದ ಅಫ್ತಾಬ್, ತನ್ನ ಹೊಸ ಪ್ರಿಯತಮೆ ಜೊತೆ ಕಾಲಕಳೆಯುತ್ತಿರುವ ಸಮಯದಲ್ಲಿ, ರೂಮಿನ ಮೂಲೆಯೊಂದರಲ್ಲಿ ಹೊಸದಾಗಿ ಖರೀದಿಸಿದ ರೆಫ್ರಿಜರೇಟರ್ನಲ್ಲಿ ಕೆಲವು ವಾರಗಳ ಹಿಂದೆ ಅಫ್ತಾಬ್ ನನ್ನು ಪ್ರಾಣಕ್ಕಿಂತ ಜಾಸ್ತಿ ಪ್ರೀತಿಸುತ್ತಿದ ಮಹಿಳೆಯೊಬ್ಬಳ ಶವ ಇತ್ತು. ಅಫ್ತಾಬ್ ನನ್ನು ನಂಬಿ ಈಗಷ್ಟೇ ರೂಮ್ ಪ್ರವೇಶಿಸಿದ ಮಹಿಳೆ, ತಾನು ಪ್ರೀತಿಸಲು ಬಂದಿರುವ ವ್ಯಕ್ತಿ ಇಷ್ಟೊಂದು ಹೀನ ವ್ಯಕ್ತಿ ಎಂದು ತಿಳಿದಿರಲಿಲ್ಲ.
ಶ್ರದ್ಧಾ ವಾಕರ್‌ನನ್ನು ಕೊಂದ ನಂತರ ಅಫ್ತಾಬ್, ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಹಲವಾರು ಮಹಿಳೆಯರನ್ನು ಭೇಟಿಯಾಗುವುದನ್ನು ಮುಂದುವರೆಸಿದನು, ಅವನ ಕೆಲವು ಸ್ನೇಹಿತರು, ಆಹಾರ ಡೆಲಿವರಿ ವ್ಯಕ್ತಿಗಳು ಮತ್ತು ಇನ್ನೂ ಅನೇಕರು ಮನೆಗೆ ಆಗಾಗ ಬರುತ್ತಿದ್ದರು. ಆದರೆ ಅವರ್ಯಾರಿಗೂ ಈತನ ನೀಚ ಕೃತ್ಯಗೊತ್ತಿರಲಿಲ್ಲ.
ಇಲ್ಲಿಯವರೆಗೆ ನಡೆಸಲಾದ ತನಿಖೆಯನ್ನು ವಿವರಿಸಿದ ಅಧಿಕಾರಿ, ಶನಿವಾರದಿಂದ ಅನೇಕ ಪೊಲೀಸ್ ತಂಡಗಳು, ವಿಧಿವಿಜ್ಞಾನ ತಜ್ಞರು ಮತ್ತು ಅಪರಾಧ ತಂಡಗಳು ಪೂನಾವಾಲಾ ಅವರು ವಾಕರ್ ಅವರ ದೇಹದ ಭಾಗಗಳನ್ನು ವಿಲೇವಾರಿ ಮಾಡಿರುವುದಾಗಿ ಹೇಳಿರುವ ಅರಣ್ಯ ಪ್ರದೇಶವನ್ನು ಸ್ಕ್ಯಾನ್ ಮಾಡುತ್ತಿದ್ದಾರೆ ಎಂದು ಹೇಳಿದರು.
"ನಾವು ಕೆಲವು ಭಾಗಗಳನ್ನು ಜಪ್ತಿಮಾಡಿದ್ದೇವೆ, ಅವೆಲ್ಲಾವೂ ತುಂಬಾ ಕೆಟ್ಟ ಸ್ಥಿತಿಯಲ್ಲಿವೆ. ಹೆಚ್ಚಾಗಿ ಮೂಳೆಗಳನ್ನು ಮರುಪಡೆಯಲಾಗಿದೆ, ಇದು ಪ್ರಾಥಮಿಕ ತನಿಖೆಯಲ್ಲಿ ಮಾನವನ ದೇಹದ ಭಾಗಗಳು ಎಂದು ಕಂಡುಕೊಂಡಿದ್ದೇವೆ. ಅವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಶ್ರದ್ಧಾ ಅವರ ತಂದೆಯ ಡಿಎನ್‌ಎ ಮಾದರಿಯನ್ನು ಸಹ ತೆಗೆದುಕೊಳ್ಳಲಾಗಿದೆ, ಇದರಿಂದ ವಶಪಡಿಸಿಕೊಂಡ ಮೂಳೆಗಳ ಡಿಎನ್‌ಎ ಪ್ರೊಫೈಲಿಂಗ್ ಮಾಡಬಹುದು, ”ಎಂದು ಅಧಿಕಾರಿ ಹೇಳಿದರು.
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |