ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಹುಲಿ ದಾಳಿಗೆ 18 ವರ್ಷದ ಬಾಲಕ ಬಲಿ

og:image

ಮೈಸೂರು: ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಹೆಚ್ಚುತ್ತಿರುವ ಆತಂಕದ ನಡುವೆಯೇ ನಾಗರಹೊಳೆ ಅರಣ್ಯದ ಅಂಚಿನ ಗ್ರಾಮವೊಂದರಲ್ಲಿ ಭಾನುವಾರ ಮಧ್ಯಾಹ್ನ 18 ವರ್ಷದ ಬಾಲಕನೊಬ್ಬ ಹುಲಿ ದಾಳಿಗೆ ಬಲಿಯಾಗಿದ್ದು, ಅರಣ್ಯ ಇಲಾಖೆಗೆ ಹೊಸ ಸವಾಲು ಎದುರಾಗಿದೆ.

ಹೆಚ್.ಡಿ.ಕೋಟೆ ತಾಲೂಕಿನ ಬಳ್ಳೆ ಗಿರಿಜನರ ಕುಗ್ರಾಮದ ನಿವಾಸಿ ಮಂಜು ಎಂಬುವರನ್ನು ಮಾಸ್ತಿಗುಡಿ ದೇವಸ್ಥಾನದಿಂದ 100ಮೀಟರ್ ದೂರದಲ್ಲಿ ಹುಲಿ ಕೊಂದು ಹಾಕಿದೆ. ಬುಡಕಟ್ಟು ಜನಾಂಗದ ಕುಗ್ರಾಮವು ನಾಗರಹೊಳೆ ಅರಣ್ಯದ ಅಂಚಿನಿಂದ ಕೇವಲ 400 ಮೀ ದೂರದಲ್ಲಿದೆ ಮತ್ತು ಅಲ್ಲಿ ಸುಮಾರು  150 ಬುಡಕಟ್ಟು ಜನಸಂಖ್ಯೆಯ ಜನರು ನೆಲೆಸಿದ್ದಾರೆ. ಹುಲಿಯೊಂದು ತನ್ನ ನಾಲ್ಕು ಮರಿಗಳೊಂದಿಗೆ ಮಂಜು ಮೇಲೆ ದಾಳಿ ಮಾಡಿದೆ ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

ಮಂಜು ಅವರ ದೇಹವನ್ನು ಹುಲಿ  ಗಾಯಗೊಳಿಸದೆ ಬಿಟ್ಟಿದ್ದರಿಂದ, ಹುಲಿ ಆತನ ಮೇಲೆ ಆತಂಕದಿಂದ ದಾಳಿ ಮಾಡಿರುವ ಸಾಧ್ಯತೆಯಿದೆ ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. "ಹುಲಿ ಅವನನ್ನು ಬೇಟೆಯಾಡುವ ಉದ್ದೇಶದಿಂದ  ಆಕ್ರಮಣ ಮಾಡಿರುವ ಸಾಧ್ಯತೆ ತೋರುತ್ತಿಲ್ಲ" ಎಂದು ಅರಣ್ಯಾಧಿಕಾರಿ ಹೇಳಿದರು.

ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಂಜು ಉರುವಲು ಸಂಗ್ರಹಿಸಲು ಅರಣ್ಯದೊಳಗೆ ಹೊಕ್ಕಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಹುಲಿ  ಅವನ ಕುತ್ತಿಗೆ ಮತ್ತು ತಲೆಗೆ ಮಾರಣಾಂತಿಕವಾಗಿ ಗಾಯಗೊಳಿಸಿದೆ ಎಂದು ವರದಿಯಾಗಿದೆ. ಸಂಜೆ ಮಂಜು ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಘಟನಾ ಸ್ಥಳಕ್ಕೆ ಎಚ್.ಡಿ.ಕೋಟೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ವಿವರ ಸಂಗ್ರಹಿಸಿದರು.
Previous Post Next Post