ಕಾಂತಾರ 'ಬುಲ್ಲ' ಸನಿಲ್ ಗುರು - ಎಂಗೇಜ್ಮೆಂಟ್ ಫೋಟೋಸ್

Admin
og:image

ಕಾಂತಾರ ಚಿತ್ರ  ನೋಡದೆ ಇರುವ ಕನ್ನಡಿಗರು ಇಲ್ಲ ಎಂಬಷ್ಟರ ಮಟ್ಟಿಗೆ ಚಿತ್ರ ಸಕ್ಸಸ್ ಆಗಿದೆ. ದೇಶ ವಿದೇಶಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕೊಟ್ಟ ಚಿತ್ರ ಕಾಂತಾರ ಎಂದರೆ ಅದು ಅತಿಶೋಯೋಕ್ತಿಯಲ್ಲ. 


ಕಾಂತರದಲ್ಲಿ ನಟಿಸಿರುವ ಪ್ರತಿಯೊಬ್ಬ ನಟನೂ  ಜನರಿಗೆ ಅಚ್ಚುಮೆಚ್ಚು. ಚಿತ್ರದಲ್ಲಿ ತನ್ನ ಧಡೂತಿ ದೇಹದೊಂದಿಗೆ ಬುಳ್ಳ ಎಂಬ ಪಾತ್ರದ ಮೂಲಕ ಜನರನ್ನ ನಗಿಸಿದ್ದ, ಸನಿಲ್ ಗುರು ಇದೀಗ ನಿಶ್ಚಿತಾರ್ಥ ಮುಗಿಸಿದ್ದು, ಮದುವೆಯ ಸಡಗರದಲ್ಲಿದ್ದಾರೆ. ನೇಹಾ ಮಡಿವಾಳ ಎಂಬ ಯುವತಿಯ ಜೊತೆ ನಿಶ್ಚಿತಾರ್ಥದ ಫೋಟೋ ಶೇರ್ ಮಾಡಿ, " "ನೀವು ನನ್ನ ಉತ್ತರಿಸಿದ ಪ್ರಾರ್ಥನೆ, ನನ್ನ ಈಡೇರಿದ ಆಸೆ, ನನ್ನ ಸಾಕಾರಗೊಂಡ ಕನಸು." ಎಂದು ತನ್ನ ಕನಸಿನ ಕನ್ಯೆಯ ಫೋಟೋ ಶೇರ್ ಮಾಡಿದ್ದಾರೆ. 


ಶಾಲಿನ್ ಗುರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟ. ಮೂಲತಃ ಮಂಗಳೂರಿನಲ್ಲಿ ನೆಲೆಸಿರುವ ಇವರು, ಈಗಾಗಲೇ ಹಲವಾರು ಕನ್ನಡ ಚಿತ್ರಗಳಲ್ಲಿ ತಮ್ಮ ಪಾತ್ರಗಳ ಮೂಲಕ ಜನಮನ್ನಣೆ ಪಡೆದಿದ್ದಾರೆ. 


ಒಂದು ಮೊಟ್ಟೆಯ ಕಥೆಯಲ್ಲಿ ನಟಿಸದಿದ್ದ ಗುರು,  ಪ್ರಸಿದ್ಧಿಯಾಗಿದ್ದು `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ರಾಘು ಪಾತ್ರದ ಮೂಲಕ.

#buttons=(Accept !) #days=(20)

Our website uses cookies to enhance your experience. Learn More
Accept !